ಇಂಡೋ-ಪಾಕ್ ಪಂದ್ಯ ಖಚಿತ ಪಡಿಸಿದ ಗಂಗೂಲಿ!

By Suvarna NewsFirst Published Feb 28, 2020, 9:49 PM IST
Highlights

ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಬದ್ಧವೈರಿಗಳ ಹೋರಾಟಕ್ಕೆ ದುಬೈ ಆತಿಥ್ಯವಹಿಸಲಿದೆ. ಈ ಪಂದ್ಯವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಇಂಡೋ-ಪಾಕ್ ಪಂದ್ಯದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೋಲ್ಕತಾ(ಫೆ.28): ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಿಹಿ ಸುದ್ದಿ ನೀಡಿದ್ದಾರೆ. ಎಷ್ಯಾಕಪ್ ಟೂರ್ನಿಯಲ್ಲಿನ ಇಂಡೋ-ಪಾಕ್ ಪಂದ್ಯ ದುಬೈನಲ್ಲಿ ನಡೆಯಲಿದೆ ಎಂದು ಗಂಗೂಲಿ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಸರಣಿ ನಡೆಯದಿರಲು ಮೋದಿ ಕಾರಣವೆಂದ ಅಫ್ರಿದಿ..!

2020ರ ಏಷ್ಯಾಕಪ್ ಟೂರ್ನಿ ಆಯೋಜಕತ್ವ ಜವಾಬ್ದಾರಿ ಪಾಕಿಸ್ತಾನ ಮೇಲಿತ್ತು. ಆದರೆ ಭದ್ರತೆ ದೃಷ್ಟಿಯಿಂದ  ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಇತ್ತ ಹಲವು ಅಸ್ತ್ರ ಪ್ರಯೋಗಿಸಿದ ಪಾಕಿಸ್ತಾನ ಕೊನೆಗೆ ತನ್ನು ಆಯೋಜಕತ್ವ ಹಕ್ಕನ್ನು ಬಿಟ್ಟುಕೊಟ್ಟಿತು. ಇದೀಗ ಏಷ್ಯಾಕಪ್ ಟೂರ್ನಿ ದುಬೈನಲ್ಲಿ ಆಯೋಜನೆಗೊಳ್ಳಲಿದೆ ಎಂದು ಗಂಗೂಲಿ ಹೇಳಿದರು.

ಇದನ್ನೂ ಓದಿ: ಅಂಡರ್ 19 ವಿಶ್ವಕಪ್: ನಮ್ಮ ಹುಡುಗರು ಪಾಕ್ ಬಗ್ಗುಬಡಿದಿದ್ದು ಹೇಗೆ..?

ಏಷ್ಯಾ ಕ್ರಿಕೆಟ್ ಸಮಿತಿ ಈ ಕುರಿತು ಮಾರ್ಚ್ 3 ರಂದು ಸಭೆ ಸೇರಲಿದೆ. ದುಬೈನಲ್ಲಿ ನಡೆಯಲಿರುವ ಸಭೆಗೆ ತೆರಳುವು ಮುನ್ನ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮಾತನಾಡಿದ ಗಂಗೂಲಿ, ಇಂಡೋ-ಪಾಕ್ ಪಂದ್ಯದ ಕುರಿತು ವಿವರಣೆ ನೀಡಿದರು.
 

click me!