ಹಸಿದವರ ಹೊಟ್ಟೆ ತುಂಬಿಸುತ್ತಿರುವ ಆನ್‌ಲೈನ್‌ ಫುಡ್‌ ಡೆಲಿವರಿ ಬಾಯ್ಸ್!

By Kannadaprabha News  |  First Published Apr 2, 2020, 10:42 AM IST

ಹಸಿದವರ ಹೊಟ್ಟೆತುಂಬಿಸುತ್ತಿರುವ ಆನ್‌ಲೈನ್‌ ಫುಡ್‌ ಡೆಲಿವರಿ ಬಾಯ್ಸ್!| ನಗರದಲ್ಲಿ ಲಾಕ್‌ಡೌನ್‌ ಇದ್ದರೂ ಆಹಾರ ಪೂರೈಕೆಗೆ ಹೋಟೆಲ್‌ಗಳಿಗೆ ಅವಕಾಶ| ಪಿಜಿ, ಅಪಾರ್ಟ್‌ಮೆಂಟ್‌, ರೂಂಗಳಲ್ಲಿ ಇರುವವರಿಂದ ಆನ್‌ಲೈನ್‌ ಬುಕ್ಕಿಂಗ್‌


 ಬೆಂಗಳೂರು(ಏ.02): ಕೊರೋನಾ ವೈರಸ್‌ ನಿಯಂತ್ರಣದ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ರಾಜಧಾನಿ ಲಾಕ್‌ ಡೌನ್‌ ನಡುವೆಯೂ ಆನ್‌ಲೈನ್‌ ಫುಡ್‌ ಡೆಲಿವರಿ ಬಾಯ್‌ಗಳು ಹಸಿದವರ ಹೊಟ್ಟೆತುಂಬಿಸುವ ಕಾರ್ಯ ಮುಂದುವರಿಸಿದ್ದಾರೆ.

ಇಡೀ ನಗರ ಲಾಕ್‌ಡೌನ್‌ ಆಗಿದ್ದರೂ ರೆಸ್ಟೋರೆಂಟ್‌, ಹೋಟೆಲ್‌ಗಳ ಕಿಚನ್‌ ತೆರೆದು ಆಹಾರ ಪಾರ್ಸೆಲ್‌ ನೀಡಲು ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಭೀತಿಯಲ್ಲಿರುವ ಬಹುತೇಕ ಜನರು ಮನೆಗಳಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನದ್ದಾಗಿ ಅಪಾರ್ಟ್‌ಮೆಂಟ್‌, ಪಿಜಿ, ರೂಂಗಳಲ್ಲಿ ನೆಲೆಸಿರುವವರು ಆನ್‌ಲೈನ್‌ ಮೂಕ ಫುಡ್‌ ಬುಕ್‌ ಮಾಡಿ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಕೊರೋನಾ ಭೀತಿಯ ನಡುವೆಯೂ ಸ್ವಿಗ್ಗಿ, ಜುಮಾಟೋ, ಹಂಗರ್‌ ಸೇರಿದಂತೆ ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆಗಳು ಗ್ರಾಹಕರ ಮನೆ ಬಾಗಿಲಿಗೆ ಆಹಾರ ತಲುಪಿಸುತ್ತಿವೆ.

Latest Videos

undefined

ಕೊರೋನಾ ವೈರಸ್‌ ನಿವಾರಣೆ ಹೋಮದ ವೇಳೆ ಜೇನು ದಾಳಿ!

ಕಫä್ರ್ಯ ಮಾದರಿಯ ಲಾಕ್‌ಡೌನ್‌ನಲ್ಲಿ ಈ ಫುಡ್‌ ಡೆಲಿವರಿ ಬಾಯ್‌ಗಳು ನಗರದಲ್ಲಿ ಸಂಚರಿಸಲು ಪೊಲೀಸ್‌ ಇಲಾಖೆಯಿಂದ ಪಾಸ್‌ ನೀಡಲಾಗಿದೆ. ಹೀಗಾಗಿ ಈ ಹುಡುಗರು ಕೊರೋನಾ ಆತಂಕದ ನಡುವೆಯೂ ಹಸಿದವರ ಹೊಟ್ಟೆತುಂಬಿಸುವ ಕೆಲಸ ಮಾಡುತ್ತಿದ್ದಾರೆ.

ವಹಿವಾಟು ಹೆಚ್ಚಳ:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಹಾರಕ್ಕಾಗಿ ಹೆಚ್ಚು ಬುಕಿಂಗ್‌ಗಳು ಬರುತ್ತಿವೆ. ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಕೇವಲ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಿರುವುದರಿಂದ ಬಹುತೇಕರು ಆನ್‌ಲೈನ್‌ನಲ್ಲಿ ಆಹಾರ ಬುಕ್‌ ಮಾಡುತ್ತಿದ್ದಾರೆ. ಹೀಗಾಗಿ ಆನ್‌ಲೈನ್‌ ಫುಡ್‌ ವಹಿವಾಟು ಹೆಚ್ಚಳವಾಗಿದೆ. ನಗರದ ಹಲವು ಬಡಾವಣೆಗಳ ರಸ್ತೆಗಳಲ್ಲಿ ಫುಡ್‌ ಡೆಲಿವರಿ ಬಾಯ್‌ಗಳ ಸಂಚಾರ ಹೆಚ್ಚು ಕಾಣಸಿಗುತ್ತದೆ. ಅಂತೆಯೆ ಪೊಲೀಸರು ಈ ಹುಡುಗರನ್ನು ಮಾರ್ಗ ಮಧ್ಯೆ ತಡೆದು ವಿಚಾರಿಸುವ ದೃಶ್ಯಗಳು ಸಾಮಾನ್ಯವಾಗಿದೆ. ಲಾಕ್‌ ಡೌನ್‌ ಆದಾಗಿನಿಂದ ಸಾಕಷ್ಟುಮಂದಿ ಆನ್‌ಲೈನ್‌ ಫುಡ್‌ ಸೇವೆ ಅವಲಂಬಿಸಿದ್ದಾರೆ.

ಪಿಪಿಇ ಕಿಟ್‌ ಪೂರೈಕೆಗೆ ಶ್ರಮಿಸುತ್ತಿವೆ ಕರಾವಳಿ ಜಿಲ್ಲೆಗಳ 2 ಕಾರ್ಖಾನೆಗಳು!

ಹೆಚ್ಚಿದ ಆದಾಯ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬೇರೆ ಬೇರೆ ಊರಿನಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರು ಹಾಗೂ ಅರೇಕಾಲಿಕವಾಗಿ ಫುಡ್‌ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದವರು ವಾಪಸ್‌ ಊರಿಗೆ ಹೋಗಿದ್ದಾರೆ, ಇಲ್ಲವೇ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಅನಿವಾರ್ಯತೆ ಇದ್ದವರು ಮಾತ್ರ ಫುಡ್‌ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕಡಿಮೆ ಸಂಖ್ಯೆಯಲ್ಲಿ ಡೆಲಿವರಿ ಬಾಯ್‌ಗಳಿರುವ ಕಾರಣ ಇರುವವರೇ ಗ್ರಾಹಕರಿಗೆ ಆಹಾರ ತಲುಪಿಸುವ ಕೆಲಸ ಮಾಡಬೇಕಾಗಿದೆ.

ಹೆಚ್ಚು ಬೇಡಿಕೆ ಕಾರಣ ಆದಾಯ ಸಹ ಜಾಸ್ತಿ ಸಿಗುತ್ತಿರುವುದು ಅವರಲ್ಲಿ ಖುಷಿ ತಂದಿದೆ. ದಿನದ ಒಟ್ಟಾರೆ ದುಡಿಮೆ ದುಪ್ಪಟ್ಟಾಗಿದೆ ಎಂದು ಡೆಲಿವರಿ ಬಾಯ್‌ ಅಮಿತ್‌ ಹೇಳುತ್ತಾರೆ.

Fact Check| ಹಣ ಬೀದಿಗೆ ಎಸೆದ ಇಟಲಿ ಜನ!

click me!