ತಾರಾ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಯಥರ್ವನಿಗೆ ಇಂದು ನಾಲ್ಕನೆ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಆತ ಅಮ್ಮನಿಗೆ ಹೂವು ಮುಡಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಗ ಯಥರ್ವನಿಗೆ ನಾಲ್ಕನೇ ವರ್ಷದ ಜನುಮ ದಿನದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್ ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್ ಸದ್ಯ ಮಗಳು ಐರಾ ಮತ್ತು ಮಗ ಯಥರ್ವ್ ಲಾಲನೆ ಪಾಲನೆಯಲ್ಲಿ ಬಿಜಿಯಾಗಿದ್ದಾರೆ. ನಟಿ ಕಾಣಸಿಗ್ತಿರೋದು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ. ರಾಕಿಂಗ್ ಸ್ಟಾರ್ ಯಶ್ (Yash) ಜೊತೆ 2016ರಲ್ಲಿ ಮದುವೆಯಾದ ರಾಧಿಕಾ ಸದ್ಯ ಇಬ್ಬರು ಮಕ್ಕಳ ಅಮ್ಮ. ಕಳೆದ ಜೂನ್ 18ರಂದು ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷಾಚರಣೆ ಮಾಡಿಕೊಂಡಿರೋ ನಟಿ ರಾಧಿಕಾ, ಆದಿ ಲಕ್ಷ್ಮಿ ಪುರಾಣ ಚಿತ್ರದ ಬಳಿಕ ಬೆಳ್ಳಿ ತೆರೆಯಿಂದ ಮರೆಯಾಗಿ, ಮತ್ತೆ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇವರು ಚಿತ್ರರಂಗಕ್ಕೆ ಬರಬೇಕು ಎನ್ನುವ ಫ್ಯಾನ್ಸ್ ಆಸೆ ಮಾತ್ರ ಇದುವರೆಗೆ ಈಡೇರುತ್ತಿಲ್ಲ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕುಟುಂಬದ ಫೋಟೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ ರಾಧಿಕಾ. ಹೆಚ್ಚಾಗಿ ಅವರು ಮಕ್ಕಳ ಜೊತೆಗಿನ ಫೋಟೋಗಳು ಹಂಚಿಕೊಳ್ಳುತ್ತಾರೆ. ಪತಿ ಯಶ್ ಮತ್ತು ಮಕ್ಕಳ ಜೊತೆ ಆಗಾಗ್ಗೆ ಟೂರ್ಗೆ ಹೋಗುತ್ತಾ ಅದರ ಫೋಟೋಗಳನ್ನೂ ಶೇರ್ ಮಾಡಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 30 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಇದೀಗ ಮಗನ ಹುಟ್ಟುಹಬ್ಬದ ನಿಮಿತ್ತ ನಟಿ ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. 2019ರ ಅಕ್ಟೋಬರ್ 30ರಂದು ಹುಟ್ಟಿರುವ ಯಥರ್ವ್ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಅಮ್ಮನಿಗೆ ಮಲ್ಲಿಗೆ ಹೂವಿನ ಮಾಲೆ ಮುಡಿಸುವ ಕ್ಯೂಟ್ ವಿಡಿಯೋ ಇದಾಗಿದೆ. ರಾಧಿಕಾ ಪಂಡಿತ್ ತಲೆ ಕೂದಲಿಗೆ ಯಥರ್ವ್ ಹೂವು ಮುಡಿಸಿದ್ದಾನೆ.
ಪತಿಗಾಗಿ ಸಿನಿಮಾ ತೊರೆದು ಗೃಹಿಣಿಯಾದ ಬಾಲಿವುಡ್ ನಟಿ! ಬ್ಲಾಕ್ಬಸ್ಟರ್ ಚಿತ್ರಗಳೀಗ ನೆನಪು ಮಾತ್ರ...
ಇದನ್ನು ಶೇರ್ ಮಾಡಿಕೊಂಡಿರುವ ನಟಿ, ‘ನನ್ನ ಜೀವನದ ಅಮೂಲ್ಯ ಹುಡುಗ. ನಾನು ಎಂದಿಗೂ ವಿಶೇಷ ಎನ್ನುವಂತೆ ಮಾಡಿದ್ದೀಯಾ. ನನ್ನನ್ನು ಅಮ್ಮನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ಹ್ಯಾಪಿ ಬರ್ತ್ಡೇ ಯಥರ್ವ್. ಲವ್ ಯೂ ಆಲ್ವೇಸ್’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಪೋಸ್ಟ್ಗೆ ಹಲವರು ಹಾರ್ಟ್ ಎಮೋಜಿ ಹಾಕಿದ್ದಾರೆ. ಇನ್ನು ಕೆಲವರು ನಿಮ್ಮಿಬ್ಬರ ಬಾಂಡಿಂಗ್ ಸೂಪರ್ ಎಂದಿದ್ದರೆ, ಮತ್ತೆ ಕೆಲವರು ವಾಪಸ್ ನಟನೆಗೆ ಯಾವಾಗ ಮರಳುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ.
ಅಂದಹಾಗೆ ಯಶ್ ಮತ್ತು ರಾಧಿಕಾ ಅವರ ಲವ್ ಸ್ಟೋರಿಯೂ ಇಂಟರೆಸ್ಟಿಂಗ್ ಆಗಿದೆ. ಯಶ್ ಮತ್ತು ರಾಧಿಕಾ ಪಂಡಿತ್ (Radhika Pandit) 2012 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನ ಡ್ರಾಮಾ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದರು. ಬಳಿಕ ಬಂದ ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸಿನಿಮಾದಲ್ಲಿಯೂ ಒಟ್ಟಾಗಿ ನಟಿಸಿದ್ದರು. ಬಳಿಕ ಸೆಟ್ನಲ್ಲಿಯೇ ಲವ್ ಆಗಿದೆ. 2016 ಡಿಸೆಂಬರ್ 9ರಂದು ಗೋವಾದಲ್ಲಿ ಮದುವೆಯಾದ ಈ ಜೋಡಿ ಈಗ ಇಬ್ಬರು ಮುದ್ದಾದ ಮಕ್ಕಳ ಪಾಲಕರು. ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ರಾಧಿಕಾ ಬಿಜಿಯಾಗಿದ್ದಾರೆ.
ಅಪ್ಪ-ಅಮ್ಮನಿಂದಾಗಿ ಕುಡಿತದ ದಾಸಳಾದೆ, ಹುಚ್ಚಿಯೂ ಆಗಿದ್ದೆ: ಶ್ರುತಿ ಹಾಸನ್ ಶಾಕಿಂಗ್ ಹೇಳಿಕೆ!