ಶ್ರದ್ಧಾ ಹತ್ಯೆಯ ಸುದ್ದಿ ಕೇಳಿ ವಿಚಲಿತನಾಗಿದ್ದೆ. ನಾವಿಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿರುವುದರಿಂದ ಹಾಗೂ ನಮ್ಮಿಬ್ಬರ ನಡುವಿನ ವಯಸ್ಸಿನ ಅಂತರದಿಂದಾಗಿ ಈ ಸಂಬಂಧ ಮುಂದುವರೆಸುವುದು ಅಸಾಧ್ಯ ಎಂದು ಹೇಳಿದ್ದೆ ಎಂದು ಶಿಜಾನ್ ಖಾನ್ ಹೇಳಿದ್ದಾರೆ.
ಶೂಟಿಂಗ್ ಸೆಟ್ನಲ್ಲೇ (Shooting Set) ಆತ್ಮಹತ್ಯೆಗೆ (Suicide) ಶರಣಾದ ಯುವನಟಿ ತುನಿಶಾ ಶರ್ಮಾ (Tunisha Sharma) (20) ಆತ್ಮಹತ್ಯೆ ಪ್ರಕರಣದ ಆರೋಪಿ ನಟ ಶಿಜಾನ್ ಖಾನ್ (Sheezan Khan) ಮೇಲೆ ದಿಲ್ಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ (Shraddha Walker Murder Case) ಪರಿಣಾಮ ಬೀರಿದೆ ಎಂಬ ಸಂಗತಿ ಪೊಲೀಸ್ ವಿಚಾರಣೆಯಿಂದ (Police Inquiry) ಬಯಲಾಗಿದೆ. ತುನಿಶಾ ಶರ್ಮಾಳ ಪ್ರಿಯಕರ ಶಿಜಾನ್ ಖಾನ್ ನಮ್ಮ ಬ್ರೇಕಪ್‌ಗೆ (Break Up) ಶ್ರದ್ಧಾ ಹತ್ಯೆ ಪ್ರಕರಣ ಕಾರಣ ಎಂದು ಹೇಳಿದ್ದಾರೆ. ‘ಶ್ರದ್ಧಾ ಹತ್ಯೆಯ ಸುದ್ದಿ ಕೇಳಿ ವಿಚಲಿತನಾಗಿದ್ದೆ. ನಾವಿಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿರುವುದರಿಂದ ಹಾಗೂ ನಮ್ಮಿಬ್ಬರ ನಡುವಿನ ವಯಸ್ಸಿನ ಅಂತರದಿಂದಾಗಿ ಈ ಸಂಬಂಧ ಮುಂದುವರೆಸುವುದು ಅಸಾಧ್ಯ ಎಂದು ಹೇಳಿದ್ದೆ. ಹೀಗಾಗಿ ಇಬ್ಬರೂ ಬೇರ್ಪಡುವುದು ಒಳ್ಳೆಯದು ಎಂದು ಹೇಳಿದ್ದೆ.15 ದಿನಗಳ ಹಿಂದೆ ನಾವು ಬೇರೆ ಬೇರೆಯಾಗುವುದಕ್ಕೆ ಇದೇ ಕಾರಣ’ ಎಂದು ವಿಚಾರಣೆ ವೇಳೆ ಶಿಜಾನ್ ಖಾನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಶ್ರದ್ಧಾ ವಾಕರ್ ಹಾಗೂ ಅಫ್ತಾಬ್ ಪೂನಾವಾಲಾ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಶ್ರದ್ಧಾಳನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ತುಂಡು ಮಾಡಿ ಬಿಸಾಡಿದ್ದ ಪೂನಾವಾಲಾನ ಕ್ರೌರ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದರು. ಲವ್ ಜಿಹಾದ್ ಸಂಚಿನ ಭಾಗವಾಗಿಯೇ ಈ ಕೊಲೆ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯೂ ಆಗಿತ್ತು. ಇನ್ನು, ನಟಿ ತುನಿಶಾ ಶರ್ಮಾ ಡಿಸೆಂಬರ್ 24 ರಂದು ವಸಾಯ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಇದನ್ನು ಓದಿ: ಪಬ್ಲಿಕ್ ಟಾಯ್ಲೆಟ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕಿರುತೆರೆ ನಟ; ಪೋಷಕರಿಂದಲೂ ದೂರ ದೂರ
ಬಂಧನವಾದ ಮೊದಲ ದಿನವೇ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಮಾಧ್ಯಮ ಪ್ರಸಾರವನ್ನು ನೋಡಿದ ನಂತರ ತುನಿಶಾ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದ್ದೇನೆ ಎಂದು ಆರೋಪಿ ಶಿಜಾನ್ ಖಾನ್ ಹೇಳಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ, ಆಕೆ ಸಾಯುವ ಕೆಲ ದಿನಗಳ ಮೊದಲೇ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದೂ ನಟ ಹೇಳಿದ್ದಾರೆ. ತುನಿಶಾ ಸಾಯುವ ಕೆಲವು ದಿನಗಳ ಮೊದಲು ಇತ್ತೀಚೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆದರೆ ಆ ಸಮಯದಲ್ಲಿ ನಾನು ಅವಳನ್ನು ಉಳಿಸಿದೆ ಮತ್ತು ಅವಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ತುನಿಶಾಳ ತಾಯಿಗೆ ಹೇಳಿದೆ" ಎಂದೂ ಶಿಜಾನ್ ಖಾನ್ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಭಾನುವಾರ, ಮಹಾರಾಷ್ಟ್ರದ ವಸಾಯ್ ನ್ಯಾಯಾಲಯವು ತುನಿಶಾ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟ ಶಿಜಾನ್ ಖಾನ್ ಅವರನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆತನನ್ನು ಬಂಧಿಸಿದ ನಂತರ ವಲೀವ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Tunisha Sharma Death Case; ಇದು ಲವ್ ಜಿಹಾದ್ ವಿಷಯ: BJP ನಾಯಕರ ಗಂಭೀರ ಆರೋಪ
ಈ ಮಧ್ಯೆ, ಡಿಸೆಂಬರ್ 24 ರಂದು ತನ್ನ ಟಿವಿ ಧಾರಾವಾಹಿಯ ಸೆಟ್‌ನಲ್ಲಿ ತುನೀಶಾ ಶವವಾಗಿ ಪತ್ತೆಯಾಗಿದ್ದಳು. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ವಾಲೀವ್ ಪೊಲೀಸರು ಹೇಳಿದ್ದಾರೆ. ತುನಿಶಾ ಅವರು ಒತ್ತಡದಲ್ಲಿದ್ದರು ಎಂದು ವರದಿಯಾಗಿದೆ ಮತ್ತು ಇದು ಆಕೆಯ ಆತ್ಮಹತ್ಯೆಗೆ ಕಾರಣವಾಯಿತು ಎಂದು ಶಂಕಿಸಲಾಗಿದೆ ಎಂದೂ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಶಿಜಾನ್ ಖಾನ್‌ಗೆ ಅಕ್ರಮ ಸಂಬಂಧವಿತ್ತು: ನಟಿ ತಾಯಿ ಆರೋಪ
ಇನ್ನೊಂದೆಡೆ, ಶೂಟಿಂಗ್ ಸೆಟ್ನಲ್ಲೇ ಆತ್ಮಹತ್ಯೆಗೆ ಶರಣಾದ ಯುವನಟಿ ತುನಿಶಾ ಶರ್ಮಾಳ (20) ಪ್ರಿಯಕರ ಶಿಜಾನ್ ಖಾನ್‌ಗೆ ಅಕ್ರಮ ಸಂಬಂಧವಿತ್ತು ಎಂದು ತುನಿಶಾ ತಾಯಿ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ. ‘ಶಿಜಾನ್ ಮತ್ತು ತುನಿಶಾ ಪರಸ್ಪರ ಪ್ರೀತಿಸುತ್ತಿದ್ದರು. ತುನಿಶಾಳನ್ನು ಮದುವೆಯಾಗುವುದಾಗಿ ಆತ ಹೇಳಿದ್ದ. ಆದರೆ ಆತ ತುನಿಶಾ ಜತೆ ಸಂಬಂಧದಲ್ಲಿರುವಾಗಲೇ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ತನ್ನ ಮಗಳನ್ನು 3-4 ತಿಂಗಳು ಬಳಸಿಕೊಂಡಿದ್ದ’ ಎಂದು ತುನಿಶಾ ತಾಯಿ ಆರೋಪಿಸಿದ್ದಾರೆ. ಅಲ್ಲದೆ, ಶಿಜಾನ್ಗೆ ಶಿಕ್ಷೆಯಾಗಬೇಕು. ಆತನನ್ನು ಸುಮ್ಮನೆ ಬಿಡಬಾರದು. ನಾನು ನನ್ನ ಮಗುವನ್ನು ಕಳೆದುಕೊಂಡಿದ್ದೇನೆ’ ಎಂದು ಆಕೆ ದುಃಖ ವ್ಯಕ್ತಪಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ತುನಿಶಾ ಹಾಗೂ ಖಾನ್ ವಾಟ್ಸಾಪ್ ಮೆಸೇಜುಗಳು ಹಾಗೂ ಕಾಲ್ ರೆಕಾರ್ಡ್ಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶೀಜಾನ್ ಮೊಹಮ್ಮದ್ ಖಾನ್ ಬಂಧನ