ಕರಣ್ ಜೋಹರ್, ಜಾನ್ವಿ ಕಪೂರ್ ಅವರಿಗೆ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಸೆಕ್ಸ್ ಮಾಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಾನ್ವಿ ಕಪೂರ್ 'ನೋ...ಮತ್ತೆ ನಾನು ಹಿಂದಕ್ಕೆ ಹೋಗಲಾರೆ' ಎಂದು ಹೇಳಿದರು.
ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಇಬ್ಬರು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದರು. ಜನಪ್ರಿಯ ಹಿಂದಿ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಕಾಫಿ ವಿತ್ ಕರಣ್ ಸೀಸನ್ 7 ಆರಂಭವಾಗಿದೆ. ಪ್ರೋಮೋ ಮೂಲಕವೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಕಾಫಿ ವಿತ್ ಕರಣ್ ಶೋ ಇದೀಗ ನಟಿಯರ ಮಾತುಗಳು ಸಹ ವೈರಲ್ ಆಗುತ್ತಿದೆ. ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಒಟ್ಟಿಗೆ ಶೋಗೆ ಎಂಟ್ರಿ ಕೊಟ್ಟಿದ್ದರು. ಶೋನಲ್ಲಿ ಕರಣ್ ಜೋಹರ್ ನಟಿಯರ ಡೇಟಿಂಗ್ ರಹಸ್ಯವನ್ನು ರಿವೀಲ್ ಮಾಡಿದ್ದರೆ. ಸಾರಾ ಮತ್ತು ಜಾನ್ವಿ ಇಬ್ಬರು ಅಣ್ಣತಮ್ಮನನ್ನು ಒಟ್ಟಿಗೆ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಕರಣ್ ಜೋಹರ್ ಬಹಿರಂಗ ಪಡಿಸಿದರು.
ಕರಣ್ ಜೋಹರ್, ಜಾನ್ವಿ ಕಪೂರ್ ಅವರಿಗೆ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಸೆಕ್ಸ್ ಮಾಡಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಾನ್ವಿ ಕಪೂರ್ 'ನೋ...ಮತ್ತೆ ನಾನು ಹಿಂದಕ್ಕೆ ಹೋಗಲಾರೆ' ಎಂದು ಹೇಳಿದರು. ಸಾರಾ ಮತ್ತ ಜಾನ್ವಿ ಕಪೂರ್ ಇಬ್ಬರು ಅಣ್ಣತಮ್ಮನ ಜೊತೆ ಡೇಟಿಂಗ್ ಮಾಡುತ್ತಿದ್ದ ವಿಚಾರವನ್ನು ಕರಣ್ ಜೋಹರ್ ರಿವೀಲ್ ಮಾಡಿದರು. ನನಗೆ ನೀವಿಬ್ಬರು ಅಣ್ಣತಮ್ಮನ್ನು ಪ್ರೀತಿಸುತ್ತಿದ್ದ ವಿಚಾರ ಗೊತ್ತಿದೆ ಎಂದು ಹೇಳಿದನ್ನು ಕೇಳಿ ಸಾರಾ ಮತ್ತು ಜಾನ್ವಿ ಇಬ್ಬರು ಶಾಕ್ ಆದರು. ಹೌದು ಸಾರಾ ಮತ್ತು ಜಾನ್ವಿ ಇಬ್ಬರು ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂದೆ ಅವರ ಮೊಮ್ಮಕ್ಕಳನ್ನು ಪ್ರೀತಿಸುತ್ತಿದ್ದರು.
ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಬೇಕೆಂದ ಸಾರಾ; ಅರ್ಜುನ್ ರೆಡ್ಡಿ ಸ್ಟಾರ್ ರಿಯಾಕ್ಷನ್ ಹೀಗಿತ್ತು
ಇನ್ನು ಕರಣ್ ಜೋಹರ್ ಯಾರ ಜೊತೆ ಡೇಟ್ ಮಾಡಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಸಾರಾ ಅಲಿ ಖಾನ್ ಲೈಗರ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುವುದಾಗಿ ಹೇಳಿದ್ದರು. ವಿಜಯ್ ದೇವರಕೊಂಡ ಸಹ ಸಾರಾ ಅಲಿ ಖಾನ್ ವಿಡಿಯೋ ಶೇರ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದರು.
ಕಾರ್ತಿಕ್ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತಾಡಿದ ಕರಣ್ ಮೇಲೆ ಸಾರಾ ಅಸಮಾಧಾನ
ಅಂದಹಾಗೆ ಕಾಫಿ ವಿತ್ ಕರಣ್ ಶೋನಲ್ಲಿ ಸಾರಾ ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2018ರಲ್ಲೂ ಸಾರಾ ಅಲಿ ಖಾನ್, ಕರಣ್ ಜೋಹರ್ ಶೋಗೆ ಹಾಜರಾಗಿದ್ದರು. ಆಗ ಸಾರಾಗೆ ಇದೇ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ಸೈಫ್ ಪುತ್ರಿ ಕಾರ್ತಿಕ್ ಆರ್ಯನ್ ಹೆಸರು ಹೇಳಿದ್ದರು. ಬಳಿಕ ಸಾರಾ ಮತ್ತು ಕಾರ್ತಿಕ್ ಆರ್ಯನ್ ನಡುವೆ ಡೇಟಿಂಗ್ ವದಂತಿ ಜೋರಾಗಿತ್ತು. ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಕೆಲವೇ ಸಮಯದಲ್ಲಿ ಇಬ್ಬರು ಬ್ರೇಕಪ್ ಮಾಡಿಕೊಂಡು ದೂರ ದೂರ ಆದರು. ಸಾರಾ ಮತ್ತು ಜಾನ್ವಿ ಭಾಗಿಯಾಗಿದ್ದ ಈ ಎಪಿಸೋಡ್ ಜುಲ್ 14ರಂದು ಪ್ರಸಾರವಾಗಿದೆ. ಈ ಬಾರಿಯ ಕಾಫಿ ವಿತ್ ಕರಣ್ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದೆ.