ಹಾಟ್​ ಬ್ಯೂಟಿ ನೋರಾ ಡ್ಯಾನ್ಸ್​ ನೋಡಲು ಎರಡು ಕಣ್ಣು ಸಾಲದು ಅಂತಿದ್ದಾರೆ ನೆಟ್ಟಿಗರು: ಅಂಥದ್ದೇನಿದೆ ಇದ್ರಲ್ಲಿ?

By Suvarna NewsFirst Published Mar 10, 2024, 11:42 AM IST
Highlights

ಹಾಟ್​ ಬ್ಯೂಟಿ ನೋರಾ ಫತೇಹಿ ಕಾರ್ಯಕ್ರಮವೊಂದರಲ್ಲಿ ಭರ್ಜರಿ ಸ್ಟೆಪ್​ ಹಾಕಿದ್ದು ನೆಟ್ಟಿಗರು ಹಾಗೂ ಫ್ಯಾನ್ಸ್​ ಏನೆಲ್ಲಾ ಹೇಳ್ತಿದ್ದಾರೆ ನೋಡಿ...
 

ನಿನ್ನೆಯಷ್ಟೇ ಮುಂಬೈ ಮೆಟ್ರೋ ಒಳಗೆ ಭರ್ಜರಿ ಡ್ಯಾನ್ಸ್​ ಮಾಡಿ ಪ್ರಯಾಣಿಕರನ್ನು ಹೈರಾಣ ಮಾಡಿದ್ದರು ಬಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್​ನೆಸ್​ನಿಂದಲೇ ಫೇಮಸ್​ ಆಗಿದ್ದಾರೆ ಈಕೆ.  ಅಷ್ಟಕ್ಕೂ ನೋರಾ ಫತೇಹಿ ಐಟಂ ಗರ್ಲ್​ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ.  ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್​ ಮಾಡಿದರೆ ಕಣ್​ ಕಣ್​ ಬಿಟ್ಟು ನೋಡಬೇಕು ಹಾಗಿರುತ್ತದೆ!

ಇದೀಗ ಇವರು ಮ್ಯೂಸಿಕ್​ ಒಂದಕ್ಕೆ ಸ್ಟೆಪ್​ ಹಾಕುವ ಮೂಲಕ ಅಲ್ಲಿದ್ದ ಪ್ರೇಕ್ಷಕರನ್ನು ಸುಸ್ತು ಮಾಡಿಸಿದ್ದಾರೆ. ಮ್ಯೂಸಿಕ್​ ಒಂದು ಪ್ಲೇ ಆಗುತ್ತಿದ್ದಂತೆಯೇ ಅಪರೂಪದ ಅಷ್ಟೇ ಕ್ಲಿಷ್ಟಕರವಾಗಿರೋ ಸ್ಟೆಪ್​ ಹಾಕಿದ್ದಾರೆ ನಟಿ. ಇದನ್ನು ನೋಡಿ ಅಭಿಮಾನಿಗಳು ಕಣ್ ಕಣ್​ ಬಿಟ್ಟಿದ್ದರೆ, ಕೆಲವರು ನಟಿಯ ಕಾಲೆಳೆದಿದ್ದಾರೆ. ನಟಿಗೇನಾದ್ರೂ ಜೇನುಹುಳು ಕಚ್ಚಿದ್ವಾ ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ ಈ ನಟಿ ಈ ಡ್ಯಾನ್ಸ್​ ಮಾಡಿದ್ದು ಎಲ್ಲಿ ಎಂಬ ವಿವರಣೆ ಇಲ್ಲ. ಅದೇನೇ ಇದ್ದರೆ ಈಕೆಯ ಅಭಿಮಾನಿಗಳಂತೂ ಡ್ಯಾನ್ಸ್​ ನೋಡಿ ಫುಲ್​ ಖುಷ್​ ಆಗಿದ್ದಾರೆ. ಇನ್ನು ಕೆಲವರು ತಗೊಂಡಿದ್ದು ಸ್ವಲ್ಪ ಜಾಸ್ತಿ ಆಯ್ತು ಎಂದೂ ಕಾಲೆಳೆಯುತ್ತಿದ್ದರೆ, ಮತ್ತೆ ಕೆಲವರು ನೋರಾ ಡ್ಯಾನ್ಸ್​ಗೆ ಸರಿಸಾಟಿಯಾದವರು ಯಾರೂ ಇಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಇಂಥ ಡ್ಯಾನ್ಸ್​ ನೋಡಲು ಎರಡು ಕಣ್ಣು ಸಾಲದು ಎನ್ನುತ್ತಿದ್ದಾರೆ. 

5 ಸಾವಿರದಿಂದ 50 ಕೋಟಿ ಒಡತಿ! ಬಾರ್​ ಗರ್ಲ್​ನಿಂದ ಬಾಲಿವುಡ್​ವರೆಗೆ... ಮಾದಕ ಚೆಲುವೆಯ ರೋಚಕ ಸ್ಟೋರಿ... ​

ಅಂದಹಾಗೆ,ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ನೋರಾ,  ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.  ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್‌ ಸಿಕ್ಕಿತ್ತು. ಕನ್ನಡ ಕೆಡಿ ಸಿನಿಮಾದಲ್ಲಿಯೂ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುಗಳ ನಡುವೆಯೇ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಜೊತೆ ನಟಿಯ ಹೆಸರು ಥಳಕು ಹಾಕಿಕೊಂಡಿದೆ. ಆರ್ಯನ್​ಗಿಂತ ಐದು ವರ್ಷ ದೊಡ್ಡವಳಾಗಿರುವ ನೋರಾ, ಆರ್ಯನ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಫೋಟೋಗಳು ವೈರಲ್​ ಆಗಿವೆ. 

   ‘ಬಾಹುಬಲಿ: ದಿ ಬಿಗಿನಿಂಗ್’, ‘ಕಿಕ್ 2’ ನಂತಹ ಸೂಪರ್​ಹಿಟ್​ ಚಿತ್ರಗಳನ್ನು ನೀಡಿ, ಇದೀಗ ದೊಡ್ಡ ಸ್ಟಾರ್​ ಎನಿಸಿಕೊಂಡಿರುವ ನೋರಾ, ಈ ನಟಿ ‘ಬಿಗ್ ಬಾಸ್ 9’ ಮತ್ತು ‘ಝಲಕ್ ದಿಖ್ಲಾ ಜಾ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದರು. ‘ಸತ್ಯಮೇವ ಜಯತೆ’ ಚಿತ್ರದ ‘ದಿಲ್ಬರ್’ ಹಾಡಿನಲ್ಲಿ ತಮ್ಮ ಅದ್ಭುತ ನೃತ್ಯದಿಂದ ಮನ ಗೆದ್ದರು. ಮೊದಲೇ ಹೇಳಿದಂತೆ ಬಾರ್​ ಗರ್ಲ್​ ಆಗಿದ್ದವರು. ಬಾಲಿವುಡ್​ನಲ್ಲಿ ಬಣ್ಣ ಹಚ್ಚಲು ಭಾರತಕ್ಕೆ ಬಂದಿದ್ದ ನಟಿ, ಬರುವಾಗ ತಂದದ್ದು ಕೇವಲ 5 ಸಾವಿರ ರೂಪಾಯಿಗಳು ಮಾತ್ರ. ಇದೀಗ ಅವರ ಒಟ್ಟೂ ಆಸ್ತಿ 50 ಕೋಟಿಗೂ ಅಧಿಕ ಎನ್ನಲಾಗುತ್ತದೆ. 

ಮೆಟ್ರೋ ಟ್ರೇನ್​ನಲ್ಲಿ ಹಾಟ್​ ಬ್ಯೂಟಿ ನೋರಾ ಫತೇಹಿ​ ಸ್ಟೆಪ್​: ಡ್ಯಾನ್ಸ್​ಗೆ ಫುಲ್​ ಸುಸ್ತಾದ ಪ್ರಯಾಣಿಕರು
 

click me!