ತೃಪ್ತಿ ದಿಮ್ರಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಬ್ಯಾಡ್ ನ್ಯೂಝ್ ಸಿನಿಮಾ ಹಾಡು ರಿಲೀಸ್!

By Chethan Kumar  |  First Published Jul 2, 2024, 9:10 PM IST

ಅ್ಯನಿಮಲ್ ಚಿತ್ರದಲ್ಲಿ ಬೆತ್ತಲಾಗಿದ್ದ ತೃಪ್ತಿ ದಿಮ್ರಿ ಇದೀಗ ಮತ್ತಷ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರುವ ಹಾಡು ರಿಲೀಸ್ ಆಗಿದೆ. ವಿಕ್ಕಿ ಕೌಶಾಲ್ ಹಾಗೂ ಕರಣ್ ಔಜ್ಲಾ ಜೊತೆ ಕಾಣಿಸಿಕೊಂಡಿರುವ ತೃಪ್ತಿ ಬೋಲ್ಡ್ ಸೀನ್ ಭಾರಿ ಸಂಚಲನ ಸೃಷ್ಟಿಸಿದೆ.


ಮುಂಬೈ(ಜು.2) ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿರುವ ತೃಪ್ತಿ ದಿಮ್ರಿ ಇದೀಗ ಮತ್ತಷ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯನಿಮಲ್ ಚಿತ್ರದಲ್ಲಿ ಬೆತ್ತಲಾಗಿ ನಟಿಸಿ ನ್ಯಾಶನಲ್ ಕ್ರಶ್ ಪಟ್ಟ ಪಡೆದುಕೊಂಡಿರುವ ತೃಪ್ತಿ ಇದೀಗ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ಬ್ಯಾಡ್ ನ್ಯೂಝ್ ಚಿತ್ರದ ಹಾಡು ರಿಲೀಸ್ ಆಗಿದೆ. ವಿಕ್ಕಿ ಕೌಶಾಲ್ ಹಾಗೂ ಕರಣ್ ಔಜ್ಲಾ ಜೊತೆ ಕಾಣಿಸಿರುವ ತೃಪ್ತಿ ದಿಮ್ರಿ ಸಿನಿ ರಸಿಕರಿಗೆ ಮತ್ತಷ್ಟು ಕಚಕುಳಿ ಇಟ್ಟಿದ್ದಾರೆ.

ಬ್ಯಾಡ್ ನ್ಯೂಝ್ ಚಿತ್ರದ ತೌಬಾ ತೌಬಾ ಹಾಡು ಇದೀಗ ಎಲ್ಲೆಡೆ ಸಂಚನಲ ಸೃಷ್ಟಿಸಿದೆ. ಪಾರ್ಟಿ ಹಾಡಿನಲ್ಲಿ ತೃಪ್ತಿ ಆಕರ್ಷಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬಿ ಮ್ಯೂಸಿಕ್ ಸೆನ್ಸೇಶನ್ ಕರಣ್ ಔಜ್ಲಾ ಸಂಗೀತ ನಿರ್ದೇಶಕ ಹಾಗೂ ರಚನೆಯ ಈ ಹಾಡು ಇದೀಗ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಬ್ಯಾಡ್ ನ್ಯೂಝ್ ಚಿತ್ರತಂಡ ಬಿಡುಗಡೆ ಮಾಡಿದ ಮೊದಲ ಟ್ರಾಕ್ ಇದಾಗಿದೆ.

Tap to resize

Latest Videos

ಆ್ಯನಿಮಲ್‌ನಲ್ಲಿ ಬೆತ್ತಲಾದ ದಿಮ್ರಿಗೆ ಭರ್ಜರಿ ಆಫರ್, ಮುಂಬೈನಲ್ಲಿ 14 ಕೋಟಿ ಮನೆ ಖರೀದಿಸಿದ ನಟಿ!

ವಿಕ್ಕಿ ಕೌಶಾಲ್ ಫಂಕಿ ಹಾಗೂ ಕೂಲ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಹಾಡಿನಲ್ಲಿ ತೃಪ್ತಿ ದಿಮ್ರಿ ಹೈಲೆಟ್ಸ್. ಆನಂದ್ ತಿವಾರಿ ನಿರ್ದೇಶದ ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಜುಲೈ 19ಕ್ಕೆ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಹಾಡಿನ ಮೂಲಕ ಚಿತ್ರದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ತೃಪ್ತಿ ದಿಮ್ರಿ 2017ರಿಂದ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ್ಯನಿಮಲ್ ಚಿತ್ರ ತೃಪ್ತಿ ದಿಮ್ರಿಗೆ ನ್ಯಾಶನ್ ಕ್ರಶ್ ಪಟ್ಟ ತಂದುಕೊಟ್ಟಿತು. ಬೆತ್ತಲಾಗಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಪರ ವಿರೋಧಕ್ಕೂ ಕಾರಣಾಗಿದ್ದರು.

ಆ್ಯನಿಮಲ್ ಚಿತ್ರದಲ್ಲಿ ತೃಪ್ತಿ ಪಾತ್ರ ಅತ್ಯಂತ ಪ್ರಮುಖ ಹಾಗೂ ಈ ಪಾತ್ರಕ್ಕೆ ತೃಪ್ತಿ ಸಂಪೂರ್ಣ ಶ್ರೇಯ ನೀಡಿದ್ದರು. 2017ರಲ್ಲಿ ಪೋಸ್ಟರ್ ಬಾಯ್ಸ್ ಚಿತ್ರದ ಮೂಲಕ ತೃಪ್ತಿ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು.  ಲೈಲಾ ಮಜ್ನು, ಬುಲ್‌ಬುಲ್ ಸೇರಿದಂತೆ ಕೆಲ ಬಾಲಿವುಡ್ ಚಿತ್ರಗಳಲ್ಲಿ ತೃಪ್ತಿ ದಿಮ್ರಿ ನಟಿಸಿದ್ದಾರೆ. ಇದೀಗ ಬ್ಯಾಡ್ ನ್ಯೂಝ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಅ್ಯನಿಮಲ್‌ನಲ್ಲಿ ಬೆತ್ತಲಾದ ತೃಪ್ತಿಗೆ ಪುಷ್ಪಾ 2ನಲ್ಲೂ ಆಫರ್, ಮತ್ತೆ ರಶ್ಮಿಕಾ-ದಿಮ್ರಿ ಕಾಂಬಿನೇಷನ್!
 

click me!