ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ನಿಕ್ ಜೋನಾಸ್ ಮೇಲೆ ಬ್ರಾ ಎಸೆದ ಹುಚ್ಚು ಅಭಿಮಾನಿ. ಕ್ಯಾಚ್ ಹಿಡಿದ ಪ್ರಿಯಾಂಕಾ ರಿಯಾಕ್ಷನ್ ನೋಡಿ...
ಬಾಲಿವುಡ್ ಡೀವಾ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕ ಪಾಪ್ ಸಿಂಗರ್ ನಿಕ್ ಜೋನಾಸ್ ಮದುವೆಯಾದ ದಿನದಿಂದ ಪ್ರೀತಿಗಿಂತ ದ್ವೇಷ ಎದುರಿಸಿರುವುದೇ ಹೆಚ್ಚು. ಸಾರ್ವಜನಿಕವಾಗಿ ಇಬ್ಬರು ಎಲ್ಲಿ ಕಾಣಿಸಿಕೊಂಡರರೂ ಒಂದಲ್ಲ ಒಂದು ಅವಮಾನ ಎದುರಿಸಬೇಕು. ಇವರಿಬ್ಬರ ವಿರುದ್ದ ಪಿತ್ತೂರಿ ಮಾಡಿಲ್ಲ ಅಂದ್ರೆ ಮಗಳು ಮಾಲ್ತಿ ಮೇರಿ ಜೋನಾಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡುತ್ತಾರೆ. ಯಾರು ಹೇಗೆ ಬೇಕಿದ್ದರೂ ವರ್ತಿಸಲಿ ಅವರಿಗೆ ಸಿಗುವುದು ನಮ್ಮ ಪ್ರೀತಿ ಮಾತ್ರ ಎನ್ನುತ್ತಾರೆ ಈ ಜೋಡಿ...
ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೋ ಏನೆಂದರೆ ನಿಕ್ ವೇದಿಕೆ ಮೇಲೆ ನಿಂತು ಹಾಡುವಾಗ ಅಭಿಮಾನಿಯೊಬ್ಬಳು ತಮ್ಮ ಬ್ರಾ ತೆಗೆದು ಎಸೆಯುತ್ತಾಳೆ. ಅದನ್ನು ಪ್ರಿಯಾಂಕಾ ಹಿಡಿದುಕೊಂಡು ಕುಣಿಯಲು ಆರಂಭಿಸುತ್ತಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇದು 2019ರಲ್ಲಿ ನಡೆದ ಯುಎಸ್ ಕಾನ್ಸರ್ಟ್ ಎನ್ನಲಾಗಿದೆ.
ಅಮೆರಿಕಾದಲ್ಲಿ ಇಂಡಿಯನ್ ಆಗಿ ಬದುಕುವುದು ಕಷ್ಟ; 10 ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ
ಯುಸ್‌ನಲ್ಲಿ ನಡೆದ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ನಿಕ್ ಜೋನಾಸ್, ಕೆವಿನ ಜೋನಾಸ್ ಮತ್ತಿ ಡೀನೈಸ್ ಜೋನಾಸ್ ಹಾಡಿ ಲಕ್ಷಾಂತರ ಅಭಿಮಾನಿಗಳನ್ನು ಮನೋರಂಜಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ಪ್ರಿಯಾಂಕಾ ಜೋಪ್ರಾ ಮತ್ತು ಕೆವಿನ ನಡೆದುಕೊಂಡು ಹೋಗುವಾದ ವೇದಿಕೆ ಮೇಲೆ ಬಿದ್ದಿರುವ ವೈಟ್ ಬ್ರಾ ನೋಡಿ ಪಿಗ್ಗಿ ಶಾಕ್ ಆಗಿದ್ದಾರೆ. ಅದನ್ನು ಅಲ್ಲಿಗೆ ಬಿಡಲಿಲ್ಲ, ಬ್ರಾ ಎತ್ತಿಕೊಂಡು ಬರುತ್ತಿದ್ದ ಮ್ಯೂಸಿಕ್‌ಗೆ ಹೆಜ್ಜೆ ಹಾಕಿದ್ದಾರೆ.
ಪಿಗ್ಗಿ ಕಣ್ಣೀರು:
ಬಾಡಿ ಶೇಮಿಂಗ್‌ನಿಂದ ಬೇಸರಗೊಂಡು ತಮ್ಮ ಪತಿ ನಿಕ್ ಜೋನಾಸ್ ಮುಂದೆ ಪ್ರಿಯಾಂಕಾ ಚೋಪ್ರಾ ಕಣ್ಣೀರು ಹಾಕಿದ್ದಾರೆ. ಕೇಳಲು ತುಂಬಾ ಕಷ್ಟಕರವಾದ ಅನೇಕ ವಿಷಯಗಳನ್ನು ನನಗೆ ಹೇಳಲಾಗಿದೆ, ನಿನ್ನೆ ಯಾರೋ ನನಗೆ ನಾನು ಸ್ಯಾಂಪಲ್ ಸೈಜ್ ಇಲ್ಲ ಎಂದು ಹೇಳಿದಾಗ ನನಗೆ ತುಂಬಾ ಬೇಸರವಾಯಿತು. ನನಗೆ ನೋವಾಯಿತ್ತು ಮತ್ತು ಅದರ ಬಗ್ಗೆ ನನ್ನ ಕುಟುಂಬದೊಂದಿಗೆ ಮಾತನಾಡಿದೆ. ನಾನು ನನ್ನ ಪತಿ ಮತ್ತು ತಂಡದ ಮುಂದೆ ತುಂಬಾ ಅತ್ತೆ ಮತ್ತು ನಾನು ಸ್ಯಾಂಪಲ್ ಸೈಜ್ ಹೊಂದಿಲ್ಲ ಎಂದು ನನಗೆ ತುಂಬಾ ಬೇಸರವಾಯಿತು. ಅದು ಸಮಸ್ಯೆ. ಸ್ಪಷ್ಟವಾಗಿ ಮತ್ತು ನಮ್ಮಲ್ಲಿ ಹೆಚ್ಚಿನವರು ಇಲ್ಲ. ಸ್ಯಾಂಪಲ್ ಸೈಜ್ ಅಂದರೆ ಸೈಜ್ 2 ಆಗಿದೆ. ಸೈಜ್ 2 ಯಾರಿದ್ದಾರೆ? ನಾನು ಹೆಚ್ಚಿನವರನ್ನು ನೋಡಿಲ್ಲ' ಎಂದು ಹೇಳಿದ್ದಾರೆ.
ಮೊದಲ ಬಾರಿ ಮಗಳು ಮಾಲ್ತಿ ಮುಖ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ; ಫೋಟೋ ವೈರಲ್
ಅವಮಾನಗಳು:
'ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ (ಕರಿ ಬೆಕ್ಕು) ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದರು. ಬಣ್ಣದ ಬಗೆಗಿನ ಗೀಳು ಭಾರತಕ್ಕೆ ಬಂದಿದ್ದು ಬ್ರಿಟಿಷರಿಂದ. ಅವರು ಬಿಟ್ಟು ಹೋದರೂ ಬಣ್ಣದ ಗೀಳು ಕಡಿಮೆ ಆಗಿಲ್ಲ. ನಾನು ಅಷ್ಟು ಸುಂದರವಾಗಿಲ್ಲ ಎಂದು ನನಗೆ ಅನಿಸುತ್ತಿತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಂಬಿದವಳು. ಆದರೆ ನನ್ನ ಚರ್ಮದ ಬಣ್ಣದಿಂದ ತುಂಬಾ ಹಿಂಸೆ ಅನುಭವಿಸಿದೆ ಎಂದಿದ್ದಾರೆ. ಈ ಮೂಲಕ ನಟನಾ ವೃತ್ತಿಯ ಆರಂಭದ ದಿನಗಳಲ್ಲಿ ಅನುಭವಿಸಿದ ಬಾಡಿ ಶೇಮಿಂಗ್ ಕುರಿತು ಹೇಳಿಕೊಂಡಿದ್ದಾರೆ.
Priyanka Chopra waving someone's Bra 👙 ! Funny 😛😛 pic.twitter.com/N2l3IZuUEv
— MoviePedia (@movie_pedia_in)