ಬಾಲಿವುಡ್ ನಟಿ ಐಶಾ ಶರ್ಮಾ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾತ್ ಟಬ್‌ನಲ್ಲಿರುವ ಈ ವಿಡಿಯೋ ತೀವ್ರ ಕುತೂಹಲ ಕೆರಳಿಸಿದೆ.
ಮುಂಬೈ(ಜೂನ್ 03) ಮ್ಯೂಸಿಕ್ ಆಲ್ಬಮ್ ಮೂಲಕ ಕಾಣಿಸಿಕೊಂಡು ಬಾಲಿವುಡ್‌ಗೆ ಎಂಟ್ರಿಕೊಟ್ಟ ಐಶಾ ಶರ್ಮಾ ಇದೀಗ ಮತ್ತೆ ಭಾರಿ ಸುದ್ದಿಯಲ್ಲಿದ್ದಾರೆ. ಐಶಾ ಶರ್ಮಾ ತಮ್ಮ ಫ್ಯಾಶನ್ ಸೆನ್ಸ್ ಮೂಲಕ ಈಗಾಗಲೇ ಭಾರಿ ವೈರಲ್ ಆಗಿದ್ದಾರೆ. ಇದೀಗ ವಿಡಿಯೋ ಮೂಲಕ ಟೆಂಪರೇಚರ್ ಹೆಚ್ಚಿಸಿದ್ದಾರೆ. ಕೆಂಪು ಸ್ವಿಮ್ ಸ್ಯೂಟ್‌ನಲ್ಲಿ ಐಶಾ ಶರ್ಮಾ ಬಾತ್ ಟಬ್ ನೀರಿನಲ್ಲಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಐಶಾ ಶರ್ಮಾ ಸಹದೋರಿ ನೇಹಾ ಶರ್ಮಾ ವಿಡಿಯೋ ಒಂದು ವೈರಲ್ ಆಗಿತ್ತು.
ಐಶಾ ಶರ್ಮಾ ಬಾತ್ ಟಬ್ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರೆಡ್ ಸ್ವಿಮ್ ಸ್ಯೂಟ್‌ನಲ್ಲಿ ನೀರಿನಲ್ಲಿ ಮಲಗಿರುವ ಈ ವಿಡಿಯೋ ಜೊತೆಗೆ ಟೆನಿಸ್ ಆಡುತ್ತಿರುವ ವಿಡಿಯೋ ಕೂಡ ಸೇರಿಸಲಾಗಿದೆ. ಏನೇ ಮಾಡಿ, ಆದರೆ ಏನೂ ಮಾಡಿದರೂ ಸಂತೋಷದಿಂದ ಇರಬೇಕು. ಸಂತಸ ನನ್ನ ಮೊದಲ ಆದ್ಯತೆ. ಇದು ನನ್ನ ಸಂಭ್ರಮದ ಕ್ಷಣ, ಹೆಲೋ ಜೂನ್ ಎಂದು ಐಶಾ ಶರ್ಮಾ ಬರೆದುಕೊಂಡಿದ್ದಾರೆ.
ಕಾಫಿಗಾಗಿ ಬಿಕಿನಿಯಲ್ಲೇ ತೆರಳಿದ ಮಾಡೆಲ್, ಹೀಗೆ ರಸ್ತೆಗಿಳಿದರೆ ಟ್ರಾಫಿಕ್ ಜಾಮ್ ಖಚಿತ ಎಂದ ನೆಟ್ಟಿಗರು
ಐಶಾ ಶರ್ಮಾ ಈ ಹಾಟ್ ವಿಡಿಯೋ ಭಾರಿ ವೈರಲ್ ಆಗದೆ. ಇದೇ ವೇಳೆ ಕೆಲವರು ಕನ್ಫ್ಯೂಸ್ ಆಗಿದ್ದಾರೆ. ಮೊದಲು ಟೆನಿಸ್ ಆಡುತ್ತಿರುವ ಐಶಾ ಶರ್ಮಾ ಏಕಾಏಕಿ ಬಾತ್ ಟಬ್ ನೀರಿನಲ್ಲಿ ಕುಳಿತಿರುವ ವಿಡಿಯೋ ಇದೆ. ಹೀಗಾಗಿ ಇದೇನಿದು ಎಂದು ಪ್ರಶ್ನಿಸಿದ್ದಾರೆ. ಇಬ್ಬರು ಸಹೋದರಿಯರು ಇನ್‌ಸ್ಟಾಗ್ರಾಂ ಆಳುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ರೀತಿ ಹಾಟ್ ವಿಡಿಯೋ ಪೋಸ್ಟ್ ಮಾಡಿ ನಮನ್ನು ಕೊಲ್ಲಬೇಡಿ. ಹಾಟ್ ವಿಡಿಯೋ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕರು ಇಮೋಜಿ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಯುಷ್ಮಾನ್ ಖುರಾನ ಇಕ್ ವಾರಿ ಮ್ಯೂಸಿಕ್ ವಿಡಿಯೋದಲ್ಲಿ ಐಶಾ ಶರ್ಮಾ ಮೊದಲು ಕಾಣಿಸಿಕೊಂಡಿದ್ದರು. ಈ ಆಲ್ಬಮ್ ಸಾಂಗ್ ವಿಡಿಯೋ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. 2018ರಲ್ಲಿ ಸತ್ಯಮೇವ ಜಯತೇ ಬಾಲಿವುಡ್ ಚಿತ್ರದ ಮೂಲಕ ಐಶಾ ಶರ್ಮಾ ಪಾದಾರ್ಪಣೆ ಮಾಡಿದ್ದರು. ಜಾನ್ ಅಬ್ರಾಹಂ ಹಾಗೂ ಮನೋಜ್ ಬಾಜಪೇಯಿ ಜೊತೆ ಸತ್ಯಮೇವ ಜಯತೆಯಲ್ಲಿ ಐಶಾ ಶರ್ಮಾ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
2022ರಲ್ಲಿ ಐಶಾ ಶರ್ಮಾ ಶೈನಿಂಗ್ ವಿಥ್ ಶರ್ಮಾಸ್ ಅನ್ನೋ ವೆಬ್ ಸೀರಿಸ್‌ನಲ್ಲಿ ಮಿಂಚಿದ್ದಾರೆ. 2022ರ ಬಳಿಕ ಐಶಾ ಶರ್ಮಾಗೆ ನಿರೀಕ್ಷಿತ ಅವಕಾಶಗಳು ಸಿಕ್ಕಿಲ್ಲ. 2022ರಲ್ಲಿ ಕುಡಿಯಾನ್ ಲಾಹೋರ್ ದಿಯಾನ್ ಹಾಗೂ ರಂಗ್‌ರೇಜ್ ಮ್ಯೂಸಿಕ್ ಅಲ್ಬಮ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದೆರಡು ವರ್ಷದಿಂದ ಐಶಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ.
ನನ್ನ ಎದೆಗೆ ಕೈ ಹಾಕಿದ್ದರು, ನೈಟ್ ಕ್ಲಬ್ ಪಾರ್ಟಿ ಘಟನೆ ವಿವರಿಸಿದ ಹೀರಾಮಂಡಿ ನಟಿ ಸಂಜೀದಾ!