ಕೇರಳದಲ್ಲಿ ಮೂವರು ನಕ್ಸಲರ ಹತ್ಯೆ: ಕರ್ನಾಟಕದ ಇಬ್ಬರು ನಕ್ಸಲರ ಸಾವು

By Web Desk  |  First Published Oct 29, 2019, 10:57 AM IST

ಕೇರಳದ ಪಾಲಕ್ಕಾಡ್​ನ ಅರಣ್ಯದಲ್ಲಿ ಮೂವರು ನಕ್ಸರನ್ನು ಹತ್ಯೆಗೈದ ಪೊಲೀಸರು| ಕರ್ನಾಟಕ ಮೂಲದ ಇಬ್ಬರು ನಕ್ಸಲರ ಸಾವು| ಪಾಲಕ್ಕಾಡ್​‌ನ ಅರಣ್ಯದಲ್ಲಿ ಪೊಲೀಸರು ಕೂಂಬಿಂಗ್​ ನಡೆಸುತ್ತಿದ್ದ  ಪೊಲೀಸರ ಮೇಲೆ ಮಾಡಿದ ನಕ್ಸರು| ದಾಳಿಗೆ ಪ್ರತಿದಾಳಿ ನಡೆಸಿದ ಪೊಲೀಸರು ಮೂವರು ನಕ್ಸರಿಗೆ ಗುಂಡಿಟ್ಟು ಹತ್ಯೆಗೈದಿದ್ದಾರೆ| 


ಚಿಕ್ಕಮಗಳೂರು(ಅ.29): ಕೇರಳದ ಪಾಲಕ್ಕಾಡ್​ನ ಅರಣ್ಯದಲ್ಲಿ ನಕ್ಸರು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಮೃತಪಟ್ಟ ಮೂವರು ನಕ್ಸರ ಪೈಕಿ ಇಬ್ಬರು ಕರ್ನಾಟಕ ಮೂಲದ ಶ್ರೀಮತಿ ಹಾಗೂ ಸುರೇಶ್​ ಕುಮಾರ್  ಸಾವನ್ನಪ್ಪಿದ್ದಾರೆ.

ಪಾಲಕ್ಕಾಡ್​‌ನ ಅರಣ್ಯದಲ್ಲಿ ಪೊಲೀಸರು ಕೂಂಬಿಂಗ್​ ನಡೆಸುತ್ತಿದ್ದ  ಪೊಲೀಸರ ಮೇಲೆ ನಕ್ಸರು ದಾಳಿ ಮಾಡಿದ್ದರು. ದಾಳಿಗೆ ಪ್ರತಿದಾಳಿ ನಡೆಸಿದ ಪೊಲೀಸರು ಮೂವರು ನಕ್ಸರಿಗೆ ಗುಂಡಿಟ್ಟು ಹತ್ಯೆಗೈದಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀಮತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ದೇವಾಲೆಕೊಪ್ಪದ ಬೆಳಗೂಡಿಕೂಡಿ ಗ್ರಾಮದ ಮೂಲದವಳಾಗಿದ್ದು, ಶ್ರೀಮತಿ SSLC ಮುಗಿದ ಮೇಲೆ ನಕ್ಸಲ್ ಚಟುವಟಿಕೆ ಭಾಗಿಯಾಗಿದ್ದಳು. 2008ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಶ್ರೀಮತಿ 3 ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದಳು. ಇವಳ ಮೇಲೆ ಸುಮಾರು 10 ಪ್ರಕರಣಗಳು ದಾಖಲಾಗಿದ್ದವು. 

ಇನ್ನು ಸುರೇಶ್ ಕುಮಾರ್ ಸಹ ಚಿಕ್ಕಮಗಳೂರು ಜೊಲ್ಲೆಯ ಮೂಡಿಗೆರೆಯ ಅಂಗಡಿ ಗ್ರಾಮದವನಾಗಿದ್ದಾನೆ. ಈತ 2004ರಲ್ಲಿ ನಕ್ಸಲ್‌ಗೆ ಸೇರ್ಪಡೆಯಾಗಿದ್ದನು. ಈತನ 40 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. 
 

click me!