* ಯೂಟೂಬ್ ನೋಡಿ ಸಾಕಾಣಿಕೆ ಮಾಡಿದ ಅಜಯ್‌ಗೆ
* 6 ತಿಂಗಳ ಕಾಲ ಇದರ ಬಗ್ಗೆ ಆಧ್ಯಯನ ನಡೆಸಿ ಸಾಕಾಣಿಕೆ ಆರಂಭ
* ನಲವತ್ತು ದಿನಕ್ಕೊಮ್ಮೆ ಐವತ್ತು ಸಾವಿರ ಆದಾಯ
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಏ.03): ಕೋಲಾರ ತಾಲೂಕಿನ ಹುದಲವಾಡಿ ಗ್ರಾಮದ ಉತ್ಸಾಹಿ ಯುವಕ ಬಿಇ ಮೆಕ್ಯಾನಿಕಲ್ ಎಂಜಿನೀಯರ್ ಆಗಿ ಬೆಂಗಳೂರಿನ(Bengaluru) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ಕೊರೋನಾ(Coronavirus) ಬಂದ ನಂತರ ತನ್ನ ಬದುಕನ್ನೇ ಬದಲಾಯಿಸಿದೆ. ಹೌದು, ಗಿನಿಯಾ ಸಾಕಾಣಿಕೆ ಮಾಡುವ ಹವ್ಯಾಸವನ್ನು ಯೂಟೂಬ್(Youtube) ನೋಡಿ ಸಾಕಾಣಿಕೆ ಮಾಡಿದ ಅಜಯ್‌ಗೆ ಸಾಥ್ ನೀಡಿದ್ದು ಅವರ ತಾಯಿ ಯಶೋಧ. ಅಶೋಕ ತಮ್ಮ ಒಂದು ಎಕರೆಯ ಒಂದು ಭಾಗದಲ್ಲಿ ಸಣ್ಣದೊಂದು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಶೆಡ್‌ನಲ್ಲಿ ಶುಭ್ರ ಬಿಳಿಯ ಬಣ್ಣದ ನೂರಾರು ಗಿನಿಯಾ ಪಿಗ್(Guinea Pig) ಸಾಕಿ ತಮ್ಮ ಮತ್ತು ಕುಟುಂಬದ ನೆಮ್ಮದಿಯನ್ನ ಕಂಡುಕೊಂಡಿದ್ದಾರೆ.
ಇನ್ನು ಅಜಯ್ ಬಿಇ ಮೆಕ್ಯಾನಿಕ್ ವಿದ್ಯಾರ್ಥಿ, ಖಾಸಗಿ ಕಂಪನಿ(Private Company) ಉದ್ಯೋಗದಿಂದ ಬೇಸತ್ತು ಚೆನ್ನೈ ಸ್ನೇಹಿತರೊಬ್ಬರನ್ನು ಭೇಟಿ ಮಾಡಿ ಗಿನಿಯಾ ಪಿಗ್ ಕುರಿತು ವಿಷಯ ತಿಳಿದುಕೊಂಡು ಸುಮಾರು 6 ತಿಂಗಳ ಕಾಲ ಇದರ ಬಗ್ಗೆ ಆಧ್ಯಯನ ನಡೆಸಿ ಸಾಕಾಣಿಕೆಯಲ್ಲಿ ಹೊಸತನ ಆರಂಭಿಸಲು ಯುವಕ ಅಜಯ್ ಮುಂದಾಗಿದ್ದರು. ವ್ಯವಸಾಯ ಮಾಡಲು ನಿನ್ನ ಕೈಯಲ್ಲಿ ಆಗವುದಿಲ್ಲವೆಂದು ಕಿಚಾಯಿಸಿದರು ಅದ್ರೆ ಇವೆಲ್ಲವನ್ನು ಮೆಟ್ಟಿ ನಿಂತು ಗಿನಿಯಾ ಪಿಗ್ ನ್ನು ಸಾಕಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.
ಬರ್ಮಾದ ಕಾಡಿನಲ್ಲಿ ಅಲೆದಾಟ, ತಾಯಿ ಬಳೆಗಳೇ ಒತ್ತೆ: ಆಯುರ್ವೇದದ ಪರ್ಯಾಯವಾದ Himalaya ಕತೆ ಇದು!
ಇನ್ನು ಗಿನಿಯಾ ಪಿಗ್ ತುಂಬಾನೆ ಮುದ್ದಾದ ಪುಟ್ಟ ಪ್ರಾಣಿ(Animal). ನೋಡಲು ಎಷ್ಟು ಮುದ್ದಾಗಿದಿಯೋ ಅಷ್ಟೆ ಬೆಲೆಬಾಳುವಂತಹ ಪುಟ್ಟ ಪ್ರಾಣಿ. ಅದು ಮೊಲವೂ ಅಲ್ಲ, ಇಲಿಯೂ ಅಲ್ಲ. ಆದ್ರೆ ಅದೇ ರೀತಿಯಲ್ಲಿರುವ ಪ್ರಾಣಿ. ಅಷ್ಟೇನು ಪರಿಚಿತವಲ್ಲದ ಈ ಪ್ರಾಣಿಯಾಗಿದೆ. ಗಿನಿಯಾ ಪಿಗ್ ಇದಕ್ಕೆ ಮತ್ತೊಂದು ಹೆಸರು ಕೆರಿಯಾಸರ್ ಫ್ಲೆಕ್ಸ್. ತುಂಬಾ ಜಟಿಲವಾದ ಹೆಸರು ಬೇಡ. ನೇರವಾಗಿ ಇದು ಪಾಕೆಟ್ ಫ್ರಂಡ್ಲಿ ಪೆಟ್. ದಿನಕ್ಕೆ ಮೂರು ಹೊತ್ತು ಸೊಪ್ಪು ತಿನ್ನೋದೇ ಇದರ ಕೆಲಸ. ಮರಿ ನೂರು ಗ್ರಾಂ ತೂಕದಿಂದ ಗರಿಷ್ಟ ಎರಡು ಕೆಜಿಯಷ್ಟು ಬೆಳೆಯುತ್ತೆ.ಇದರ ಬೆಲೆಯೂ ಕೂಡ ಒಂದು ಮರಿಗೆ ಒಂದು ಸಾವಿರ ದಿಂದ ನಾಲ್ಕು ಸಾವಿರದ ವರೆಗೆ ಇದೆ.ಈ ಪ್ರಾಣಿಯನ್ನು ಸಾಕುವುದು ಭಾರೀ ಆದಾಯದ ಮೂಲ ಮತ್ತು ಕಡಿಮೆ ಖರ್ಚು ಜೊತೆಗೆ ಶ್ರಮವೂ ಕೂಡ ಕಡಿಮೆ ಇದ್ದು ಒಬ್ಬರೇ ಇದನ್ನು ನಿಭಾಯಿಸಬಹುದಾಗಿದೆ.
ಈ ಗಿನಿಯಾ ಪಿಗ್‌ನ್ನು ಪ್ರಮುಖವಾಗಿ ಹೊಸದಾಗಿ ಕಂಡುಹಿಡಿಯುವ ಲಸಿಕೆ ಅಥವಾ ಔಷಧಿಗಳನ್ನು(Medicine) ಪ್ರಯೋಗಿಸಲು ಬಳಸುತ್ತಾರೆ. ಅಷ್ಟೆ ಅಲ್ಲ ಅಸ್ತಮಾ, ಅಲರ್ಜಿಗಳಂತಹ ರೋಗಗಳಿಗೆ ಇದರಿಂದ ಔಷಧಿ ತಯಾರಾಗುತ್ತದೆ. ಉತ್ತಮ ಆದಾಯ, ಕಡಿಮೆ ಹೂಡಿಕೆ, ಶ್ರಮವಿಲ್ಲದ ಕೆಲಸ, ನೋಡಲೂ ಕೂಡ ಮುದ್ದು ಮುದ್ದಾದ ಈ ಪ್ರಾಣಿಯನ್ನು ಸಾಕುತ್ತಾ ಅಜಯ್ ಸಾಕಷ್ಟು ನೆಮ್ಮದಿ ಜೀವನ ನಡೆಸುತಿದ್ದಾನೆ.
ಪುಣೆ ಮೂಲದ ಕಂಪನಿಯೊಂದರೊಂದಿಗೆ ಈ ಪ್ರಾಣಿ ಸಾಕಿ ಕೊಡುವುದಕ್ಕೆ ಐದು ವರ್ಷದ ಒಡಂಬಡಿಕೆ ಮಾಡುಕೊಂಡಿದ್ದು ಮಾರುಕಟ್ಟೆಗೆ ಯಾವುದೇ ತೊಂದರೆ ಇಲ್ಲ. ಕುದುರೆ ಮೆಂತ್ಯೆ ಮತ್ತು ಜೋಳದ ಸೊಪ್ಪುಗಳನ್ನು ತಿನ್ನುವ ಈ ಪುಟ್ಟ ಪ್ರಾಣಿ ಸಾಕಲು ತುಂಬಾ ಶ್ರಮ ಬೇಕಿಲ್ಲ. ರಾಜ್ಯದಲ್ಲಿ ಸೀಮಿತವಾಗಿ ಇದನ್ನು ಸಾಕುವ ಸ್ಥಳಗಳಿದ್ದು ಯಾವುದೂ ಕೂಡ ಪ್ರಚಲಿತವಿಲ್ಲ. ಇದು ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಯತ್ನವೂ ಹೌದು. ಎರಡು ಲಕ್ಷ ಹಣವನ್ನು ತೊಡಗಿಸಿರುವ ಅಜಯ್ ಈಗ ನಲವತ್ತು ದಿನಕ್ಕೊಮ್ಮೆ ಐವತ್ತು ಸಾವಿರ ಆದಾಯ ನೋಡುತಿದ್ದಾನೆ.
ಬಡ ಜನರಿಗೆ ಉಚಿತವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಿ ಭಕ್ತಿ ಮೇರೆಯುವ ಚಿಕ್ಕೋಡಿಯ ಕುಮಾರ್ ಪಾಟೀಲ್
ಇನ್ನು ಯಾವುದೇ ವೆಚ್ಚವಿಲ್ಲದೆ ತಾನು ಬೆಳೆದ ಸೊಪ್ಪನ್ನು ಮೊಲಗಳಿಗೆ ಮೂರು ಬಾರಿ ನೀಡುತ್ತಾರೆ. ಮಕ್ಕಳ ಆರೈಕೆ ಮಾಡಿದಂತೆ ಗಿನಿಯಾ ಪಿಗ್‌ನ್ನು ಕಣ್ಣಲ್ಲಿ ಕಣ್ಣಟ್ಟು ಸಾಕುತ್ತಿದ್ದಾರೆ. ಸಾಧಾರಣವಾಗಿ ನಾಲ್ಕರಿಂದ ಐದು ತಿಂಗಳ ಮೊಲಗಳು ಅಂದಾಜು ಕಾಲು ಕೆ.ಜಿಯಾದಾಗ ಮಾರಾಟ ಮಾಡುತ್ತಾರೆ. ಇವರ ಸ್ಥಳದಿಂದಲೇ 100 ಗ್ರಾಂ ಗೆ 400 ರೂಪಾಯಿ ಕೊಟ್ಟು ಖರೀದಿಸಿ ಕೊಂಡು ಹೋಗುತ್ತಾರೆ.ಗಿನಿಯಾ ಸಾಕಾಣಿಕೆಯಗೆ ಅಜಯ್‌ಗೆ ಅವರ ತಾಯಿ ಯಶೋಧ ಸಾಥ್ ನೀಡಿದ್ದಾರೆ.
ಕೊರೋನಾ ಲಾಕ್‌ಡೌನ್‌ನಿಂದಾಗಿ(Lockdown) ಅಸಂಖ್ಯಾತ ಯುವಕರು ಬೆಂಗಳೂರು ಬಿಟ್ಟು ತಮ್ಮ ಊರುಗಳತ್ತ ವಾಪಾಸಾಗಿದ್ದಾರೆ. ಹೊಸದಾಗಿ ಏನಾದ್ರು ಮಾಡುವ ತುಡಿತ ಮತ್ತು ಛಲವಿದ್ದರೆ ಈ ರೀತಿಯ ಹೊಸ ಪ್ರಯತ್ನಗಳಿಗೆ ಕೈಹಾಕಬಹುದು. ಯಾವುದೂ ಕೂಡ ಅಸಾದ್ಯವಲ್ಲ. ಇಂಜಿನಿಯರಿಂಗ್ ಓದಿದ ಯುವಕ ತಾನಂದುಕೊಂಡಿದ್ದನ್ನೇ ಮಾಡುತ್ತಾ ನೆಮ್ಮದಿ ಕಂಡುಕೊಂಡಿದ್ದಾನೆ.