Tax Free Incomes: ಈ ಮೂಲಗಳಿಂದ ಹಣ ಗಳಿಸಿದರೆ ಸಿಗುತ್ತೆ ತೆರಿಗೆ ವಿನಾಯಿತಿ!

Suvarna News   | Asianet News
Published : Jan 11, 2022, 08:00 PM IST
Tax Free Incomes: ಈ ಮೂಲಗಳಿಂದ ಹಣ ಗಳಿಸಿದರೆ ಸಿಗುತ್ತೆ ತೆರಿಗೆ ವಿನಾಯಿತಿ!

ಸಾರಾಂಶ

ಸರ್ಕಾರಿ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮುಖ್ಯ ಕರ್ತವ್ಯಗಳಲ್ಲಿ ತೆರಿಗೆ ಪಾವತಿ ಕೂಡ ಒಂದು. ತೆರಿಗೆಯಿಂದ ತಪ್ಪಿಸಿಕೊಳ್ಳಲು ಹೋಗಿ ಹಣವನ್ನು ಮನೆಯಲ್ಲಿ ಬಚ್ಚಿಟ್ಟು ಸಿಕ್ಕಿಬಿದ್ದವರು ಸಾಕಷ್ಟು ಮಂದಿ. ಆದ್ರೆ ಕೆಲವೊಂದು ಮೂಲಗಳಿಂದ ನೀವು ಹಣ ಗಳಿಸಿದ್ರೆ ತೆರಿಗೆ ಪಾವತಿಸಬೇಕಾಗಿಲ್ಲ.   

Business Desk: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗಳಿಕೆ(Earnings)ಯಲ್ಲಿ ತೆರಿಗೆ (Tax) ಪಾವತಿ ಮಾಡಬೇಕಾಗುತ್ತದೆ. ತೆರಿಗೆ ಸ್ಲ್ಯಾಬ್ (Slab) ಪ್ರಕಾರ, ಯಾವುದೇ ವ್ಯಕ್ತಿಯ ವಾರ್ಷಿಕ ಆದಾಯವು 2.5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಅವರು ಆದಾಯ ತೆರಿಗೆಯ ವ್ಯಾಪ್ತಿಗೆ ಬರುತ್ತಾರೆ. ಒಬ್ಬ ವ್ಯಕ್ತಿಯು ಉದ್ಯೋಗದಲ್ಲಿದ್ದರೆ, ಈ ತೆರಿಗೆಯನ್ನು ಅವನ ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ಉದ್ಯೋಗ(job)ಹೊರತುಪಡಿಸಿ ಆತ ಗಳಿಸುವ ಇತರ ಮೂಲಗಳ ಆದಾಯದಲ್ಲೂ ಆತ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದು ಉಳಿತಾಯದ ಮೇಲಿನ ಬಡ್ಡಿ, ಬಾಡಿಗೆಯಿಂದ ಗಳಿಸಿದ ಹಣ, ವ್ಯಾಪಾರದಂತಹ ಮೂಲಗಳನ್ನು ಒಳಗೊಂಡಿದೆ. ಆದರೆ ಕೆಲವು ಮೂಲಗಳಿಂದ ಗಳಿಸಿದ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಇಂದು ಯಾವ ಮೂಲದಿಂದ ಗಳಿಸಿದ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ ಎಂಬುದನ್ನು ಇಲ್ಲಿ ಹೇಳ್ತೆವೆ.

ಕೃಷಿಯಿಂದ ಬರುವ ಸಂಪಾದನೆ : ತೆರಿಗೆ ಮುಕ್ತ ಆದಾಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಕೃಷಿ. ಭಾರತದಲ್ಲಿ ಕೃಷಿಯಿಂದ ಗಳಿಸಿದ ಆದಾಯಕ್ಕೆ ಯಾವುದೇ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಕೃಷಿಯ ಜೊತೆಗೆ ನೀವು ಬೇರೆ ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ ತೆರಿಗೆ ಪಾವತಿ ಮಾಡಬೇಕು. ಕೃಷಿಯಿಂದ ಎಷ್ಟೇ ಸಂಪಾದಿಸಿದರೂ ತೆರಿಗೆ ಕಟ್ಟಬೇಕಾಗಿಲ್ಲ.

ಮದುವೆಯಲ್ಲಿ ಸಿಗುವ ಉಡುಗೊರೆ: ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ಉಡುಗೊರೆಗಳು ಸಹ ತೆರಿಗೆಗೆ ಒಳಪಡುತ್ತವೆ. ಆದರೆ, ನೀವು ಮದುವೆಯಾದ ಮೇಲೆ ಸ್ನೇಹಿತರು ಅಥವಾ ಸಂಬಂಧಿಕರಿಂದ ಯಾವುದೇ ಉಡುಗೊರೆಯನ್ನು ಸ್ವೀಕರಿಸಿದರೆ, ನಂತರ ಅದಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.   ಆದ್ರೆ ಇದಕ್ಕೂ ಷರತ್ತಿದೆ. ಉಡುಗೊರೆಯನ್ನು ನೀಡುವ ದಿನಾಂಕವು ಮದುವೆಯ ದಿನದಂದು ಅಥವಾ ಅದರ ಹತ್ತಿರದಲ್ಲಿರಬೇಕು.  

ಇದನ್ನೂ ಓದಿ: How To Cut Down Expenses: ಹೊಸ ವರ್ಷದಲ್ಲಿ ಖರ್ಚು ಕಡಿಮೆ ಮಾಡಿ ಸಾಲದ ಹೊರೆ ತಗ್ಗಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

ಭವಿಷ್ಯ ನಿಧಿ (PF) : ಪಿಎಫ್ ಕೂಡ ತೆರಿಗೆಯಿಂದ ಹೊರಗಿದೆ. ನಿವೃತ್ತಿಯ ನಂತ್ರ ಪಿಎಫ್  ಬಹಳ ಪ್ರಯೋಜನಕಾರಿ. ಹಾಗಾಗಿಯೇ ಇದಕ್ಕೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಪಿಎಫ್ ಖಾತೆ 5 ವರ್ಷಕ್ಕಿಂತ ಹಳೆಯದಾಗಿದ್ದರೆ ಮಾತ್ರ ಅದು ತೆರಿಗೆ ಪಟ್ಟಿಯಿಂದ ಹೊರಗಿರಲಿದೆ. ಐದು ವರ್ಷಕ್ಕಿಂತ ಮೊದಲೇ ಪಿಎಫ್ ಪಡೆಯುತ್ತಿದ್ದರೆ ಒಟ್ಟೂ ಮೊತ್ತದ ಶೇಕಡಾ 10ರಷ್ಟನ್ನು ಟಿಡಿಎಸ್ ಪಾವತಿಸಬೇಕು. ನಿಮ್ಮ ಒಟ್ಟೂ ಗಳಿಕೆ ತೆರಿಗೆ ಸ್ಲ್ಯಾಬ್ ಗಿಂತ ಕಡಿಮೆಯಿದ್ದರೆ ಕಟ್ ಆದ ಟಿಡಿಎಸನ್ನು ರೀಫಂಡ್ ಐಟಿಆರ್ ಮೂಲಕ ಪಡೆಯಬಹುದು.

ಗ್ರಾಚ್ಯುಟಿ (Gratuity) : ಇನ್ನು ಸರ್ಕಾರಿ ನೌಕರರಿಗೆ ಸಿಗುವ ಗ್ರಾಚ್ಯುಟಿ ನೂರಕ್ಕೆ ನೂರರಷ್ಟು ತೆರಿಗೆ ಫ್ರಿ. ಸರ್ಕಾರಿ ನೌಕರ ಸಾವನ್ನಪ್ಪಿದ್ರೂ,ನಿವೃತ್ತಿ ನಂತ್ರ ಗ್ರಾಚ್ಯುಟಿ ಪಡೆದರೂ ಅದಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ. 5 ವರ್ಷಗಳಿಗಿಂತ ಹೆಚ್ಚು ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಕೆಲಸ ತೊರೆದ ನಂತ್ರ ಗ್ರಾಚ್ಯುಟಿ ಸಿಗುತ್ತದೆ.  ಇದು ತೆರಿಗೆ ವಿನಾಯಿತಿಯ ವ್ಯಾಪ್ತಿಯಲ್ಲಿ ಬರುತ್ತದೆ. ಇದಕ್ಕೆ ಕೆಲವು ಷರತ್ತುಗಳಿವೆ. ಸರ್ಕಾರಿ ಉದ್ಯೋಗಿಗೆ 20 ಲಕ್ಷದವರೆಗಿನ ಗ್ರಾಚ್ಯುಟಿ ಮತ್ತು ಖಾಸಗಿ ಉದ್ಯೋಗಿಗೆ 10 ಲಕ್ಷದವರೆಗಿನ ಗ್ರಾಚ್ಯುಟಿಗೆ ಮಾತ್ರ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದೆ.

ಇದನ್ನೂ ಓದಿ: Income Tax Returns : ಮಾರ್ಚ್ 15ರವರೆಗೆ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ!

ಈ ಉಡುಗೊರೆಗಳ ಮೇಲೆ ತೆರಿಗೆ ಇಲ್ಲ : ಆದಾಯ ತೆರಿಗೆ ನಿಯಮಗಳ ಪ್ರಕಾರ,ಸಂಗಾತಿ,ಒಡಹುಟ್ಟಿದವರು, ಪೋಷಕರು,ಪೂರ್ವಜರಿಂದ ಹಾಗೂ ಯಾವುದೇ ಪಂಚಾಯತ್, ಪುರಸಭೆ, ಮುನ್ಸಿಪಲ್ ಸಮಿತಿಯ ಯಾವುದೇ ಸದಸ್ಯರು, ಸ್ಥಳೀಯ ಪ್ರಾಧಿಕಾರದಿಂದ ಸ್ವೀಕರಿಸಿದ ಉಡುಗೊರೆಗಳಿಗೆ ತೆರಿಗೆ ಪಾವತಿಸಬೇಕಾಗಿಲ್ಲ. ಆದ್ರೆ ಈ ಉಡುಗೊರೆಗೆ ಷರತ್ತು ವಿಧಿಸಲಾಗಿದೆ. 50 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. 

ಅನಿವಾಸಿ ಭಾರತೀಯರಿಗೆ ತೆರಿಗೆ ವಿನಾಯಿತಿ : ಎನ್‌ಆರ್‌ಐಗಳ  ಎನ್‌ಆರ್‌ಇ ಖಾತೆಗೆ ಸಿಗುವು ಬಡ್ಡಿಯು ಭಾರತದಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.  

ವಿದ್ಯಾರ್ಥಿವೇತನ: ಅಧ್ಯಯನ ಅಥವಾ ಸಂಶೋಧನೆಗಾಗಿ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಿಂದ ಪಡೆದ ವಿದ್ಯಾರ್ಥಿವೇತನಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!