ಜಾಗತಿಕ ಪ್ರವಾಸಿ ತಾಣವಾಗಲಿದೆ ಭಾರತ: ನಿರ್ಮಲಾ ಸೀತಾರಾಮನ್‌

By Kannadaprabha News  |  First Published Jul 24, 2024, 7:49 AM IST

ಬಿಹಾರದಲ್ಲಿರುವ ಗಯಾದ ವಿಷ್ಣುಪಾದ ದೇವಸ್ಥಾನ ಮತ್ತು ಬೋಧ ಗಯಾದ ಮಹಾಬೋಧಿ ದೇವಸ್ಥಾನ ಕಾರಿಡಾರ್ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದು, ಅವುಗಳನ್ನು ವಿಶ್ವದರ್ಜೆಯ ಯಾತ್ರಾಸ್ಥಳ ಮತ್ತು ಪ್ರವಾಸಿ ತಾಣಗಳಾಗಿ ಮಾಡುವ ಗುರಿ ಸರ್ಕಾರದ ಮುಂದಿದೆ.


ಭಾರತವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಅನೇಕ ಯೋಜನೆಗಳನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಉದ್ಯೋಗಸೃಷ್ಟಿ, ಹೂಡಿಕೆಗೆ ಉತ್ತೇಜನ ಹಾಗೂ ಇತರ ವಲಯಗಳಿಗೆ ಆರ್ಥಿಕ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

ಕಾಶಿ ವಿಶ್ವನಾಥ ಮಾದರಿಯಲ್ಲಿ ವಿಷ್ಣುಪಾದ ದೇವಸ್ಥಾನ ಹಾಗೂ ಮಹಾಬೋಧಿ ಕಾರಿಡಾರ್‌ ಅಭಿವೃದ್ಧಿ: ಬಿಹಾರದಲ್ಲಿರುವ ಗಯಾದ ವಿಷ್ಣುಪಾದ ದೇವಸ್ಥಾನ ಮತ್ತು ಬೋಧ ಗಯಾದ ಮಹಾಬೋಧಿ ದೇವಸ್ಥಾನ ಕಾರಿಡಾರ್ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದು, ಅವುಗಳನ್ನು ವಿಶ್ವದರ್ಜೆಯ ಯಾತ್ರಾಸ್ಥಳ ಮತ್ತು ಪ್ರವಾಸಿ ತಾಣಗಳಾಗಿ ಮಾಡುವ ಗುರಿ ಸರ್ಕಾರದ ಮುಂದಿದೆ. ಇವುಗಳನ್ನು ಕಾಶಿ ವಿಶ್ವನಾಥ ದೇವಸ್ಥಾನ ಕಾರಿಡಾರ್ ಮಾದರಿಯಲ್ಲಿ ನಿರ್ಮಿಸಲಾಗುವುದು. 

Tap to resize

Latest Videos

undefined

Union Budget 2024: ಸ್ಟಾಂಡರ್ಡ್‌ ಡಿಡೆಕ್ಷನ್, ತೆರಿಗೆ ಸ್ಲ್ಯಾಬ್‌ ಏರಿಕೆ: 17500 ತೆರಿಗೆ ಉಳಿತಾಯ

ರಾಜ್‌ಗಿರ್ ಹಾಗೂ ನಳಂದಾ ಅಭಿವೃದ್ಧಿ: ರಾಜ್‌ಗಿರ್ ಹಿಂದೂ, ಬೌದ್ಧ ಮತ್ತು ಜೈನರ ಪಾಲಿಗೆ ಪವಿತ್ರ ಸ್ಥಳವಾಗಿದೆ. ಇಲ್ಲಿ ಪುರಾತನ ಜೈನ ದೇವಸ್ಥಾನಗಳ ಸಂಕೀರ್ಣ ಹಾಗು ಬ್ರಹ್ಮ ಕುಂಡದ ಬಿಸಿನೀರಿನ ಬುಗ್ಗೆಗಳ ಸಪ್ತರಿಷಿಗಳಿದ್ದು, ಇದನ್ನು ಸರ್ಕಾರ ಅಭಿವೃದ್ಧಿಪಡಿಸಲಿದೆ. ನಳಂದ ವಿಶ್ವವಿದ್ಯಾಲಯದ ಪುನರುಜ್ಜೀವನದೊಂದಿಗೆ ಅದನ್ನು ಪ್ರವಾಸಿ ತಾಣವಾಗಿ ರೂಪಿಸಲಾಗುವುದು.

ಒಡಿಸ್ಸಾದ ಪ್ರವಾಸಿ ತಾಣಗಳ ಅಭಿವೃದ್ಧಿ: ಪ್ರಾಕೃತಿಕ ಸೌಂದರ್ಯ, ದೇವಸ್ಥಾನಗಳು, ಕಲೆ, ವನ್ಯಜೀವಿ ಅಭಯಾರಣ್ಯ, ನೈಸರ್ಗಿಕ ಭೂದೃಶ್ಯಗಳು ಮತ್ತು ಪ್ರಾಚೀನ ಕಡಲತೀರಗಳಿಂದ ಸಮೃದ್ಧವಾಗಿರುವ ಒಡಿಸ್ಸಾವನ್ನೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಆಹಾರ, ರಸಗೊಬ್ಬರ, ಇಂಧನ ಮೇಲಿನ ಸಬ್ಸಿಡಿ ಶೇ.7.8ರಷ್ಟು ಕಡಿತ: 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆಹಾರ, ರಸಗೊಬ್ಬರ, ಇಂಧನಗಳ ಮೇಲಿನ ಸಬ್ಸಿಡಿಯನ್ನು ಶೇ.7.8 ರಷ್ಟು ಕಡಿತಗೊಳಿಸಿದೆ. ಸಬ್ಸಿಡಿಗಳ ಹಂಚಿಕೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ 3.81 ಲಕ್ಷ ಕೋಟಿ ರು. ಹಣವನ್ನು ಹಂಚಿಕೆ ಮಾಡಲಾಗಿದೆ. ಇದು ಕಳೆದ ಬಾರಿಗಿಂತ ಕಡಿಮೆಯಾಗಿದ್ದು, ಕಳೆದ ಬಾರಿ 4.13 ಲಕ್ಷ ಕೋಟಿ ರು. ನೀಡಲಾಗಿತ್ತು. ಆಹಾರ ಸಬ್ಸಿಡಿ ಹಂಚಿಕೆಯಲ್ಲಿ ಇಳಿಕೆಯಾಗಿದ್ದು, 2.05 ಲಕ್ಷ ಕೋಟಿ ರು. ಮೀಸಲಿರಿಸಲಾಗಿದೆ. 

ಸಮಾಜದ ಪ್ರತಿ ವರ್ಗದ ಜನರಿಗೆ ಶಕ್ತಿ ನೀಡುವ ಬಜೆಟ್, ದೇಶದ ಜನತೆಗೆ ಮೋದಿ ಅಭಿನಂದನೆ!

ಈ ವರ್ಷದ ಮಾರ್ಚ್‌ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ 2.12 ಲಕ್ಷ ಕೋಟಿ ರು.ರಷ್ಟಿತ್ತು. ರಸಗೊಬ್ಬರ ಸಬ್ಸಿಡಿಯು ಅತಿ ಹೆಚ್ಚಿನ ಕಡಿತವನ್ನು ಕಂಡಿದೆ. 2023-24ನೇ ಸಾಲಿನಲ್ಲಿದ್ದ 1.88 ಸಾವಿರ ಕೋಟಿ. ರು.ರಷ್ಟಿತ್ತು. ಆದರೆ ಈ ಬಾರಿ 1.64 ಸಾವಿರ ಕೋಟಿ.ರು.ಗೆ ಕಡಿತ ಮಾಡಲಾಗಿದೆ. ಪೆಟ್ರೋಲಿಯಂ ಸಬ್ಸಿಡಿಗಳು ಮುಖ್ಯವಾಗಿ ಅಡುಗೆ ಸಿಲಿಂಡರ್ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದ್ದು, 2023-24ನೇ ಸಾಲಿನಲ್ಲಿ 12.24 ಸಾವಿರ ಕೋಟಿ ರು. ಅನುದಾನ ಆಗಿದ್ದ ಸಬ್ಸಿಡಿ ಈ ಬಾರಿ ಕಡಿತಗೊಂಡಿದ್ದು, 11.9 ಸಾವಿರ ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ.

click me!