Union Budget:ಏನಿದು ಪಿಎಂ ಪ್ರಣಾಮ ಯೋಜನೆ? ಇದರಿಂದ ರೈತರಿಗೇನು ಲಾಭ?

By Suvarna News  |  First Published Feb 3, 2023, 1:30 PM IST

2023-24ನೇ ಆರ್ಥಿಕ ಸಾಲಿನ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನೇಕ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಪಿಎಂ ಪ್ರಣಾಮ ಯೋಜನೆ ಕೂಡ ಒಂದು. ಹಾಗಾದ್ರೆ ಈ ಯೋಜನೆಯಿಂದ ಯಾರಿಗೆ ಪ್ರಯೋಜನವಾಗಲಿದೆ? ಇದರ ಉದ್ದೇಶವೇನು? ಇಲ್ಲಿದೆ ಮಾಹಿತಿ. 


ನವದೆಹಲಿ (ಫೆ.3): ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಪ್ರಮುಖ ಯೋಜನೆಗಳನ್ನು  ಘೋಷಣೆ ಮಾಡಿದ್ದಾರೆ. ಕೆಲವು ಯೋಜನೆಗಳಿಗೆ ಅನುದಾನವನ್ನು ಕೂಡ ಮೀಸಲಿಟ್ಟಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಘೋಷಣೆ ಮಾಡಿರುವ ಯೋಜನೆ ಈಗ ಎಲ್ಲರ ಗಮನ ಸೆಳೆದಿದೆ. ಅದೇ ಪಿಎಂ ಪ್ರಣಾಮ ಯೋಜನೆ. ಇದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪರ್ಯಾಯ ರಸಗೊಬ್ಬರಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹ ನೀಡಲಿದೆ. ಹಾಗೆಯೇ ರಾಸಾಯನಿಕ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೊರೆಯನ್ನು ತಗ್ಗಿಸುವ ಉದ್ದೇಶವನ್ನು ಕೂಡ ಈ ಯೋಜನೆ ಹೊಂದಿದೆ. ಈ ಯೋಜನೆಯನ್ನು 2022ರ ಸೆಪ್ಟೆಂಬರ್ 7ರಂದು ರಾಬಿ ಕ್ಯಾಂಪೇನ್ ಗೋಸ್ಕರ ನಡೆದ ನ್ಯಾಷನಲ್ ಕಾನ್ಫೆರೆನ್ಸ್ ನಲ್ಲಿ ಜಾರಿಗೊಳಿಸಲಾಯಿತು. ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ತಗ್ಗಿಸುವುದು ಹಾಗೂ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಪಿಎಂ ಪ್ರಣಾಮ ಯೋಜನೆ ಹೊಂದಿದೆ. ಭೂಮಿಯನ್ನು ರಾಸಾಯನಿಕಗಳ ಬಳಕೆಯಿಂದ ಸಂರಕ್ಷಿಸಲು ಸರ್ಕಾರ ಈ ಯೋಜನೆ ಜಾರಿಗೆ ಮುಂದಾಗಿದೆ. ಅತ್ಯಧಿಕ ರಸಗೊಬ್ಬರ ಬಳಕೆಯಿಂದ ಮಣ್ಣಿನ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ದೇಶಾದ್ಯಂತ ಕೃಷಿಕರಲ್ಲಿ ಅರಿವು ಮೂಡಿಸಲು ಈ ಯೋಜನೆ ನೆರವು ನೀಡಲಿದೆ.

ಏನಿದು ಪಿಎಂ ಪ್ರಣಾಮ ಯೋಜನೆ?
ಪಿಎಂ ಪ್ರಣಾಮ ಯೋಜನೆಯ (PM PRANAM Scheme) ಪೂರ್ಣ ಹೆಸರು ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಆಲ್ಟರ್ನೇಟಿವ್ ನ್ಯುಟಿಯೆಂಟ್ಸ್ ಫಾರ್ ಅಗ್ರಿಕಲ್ಚರ್ ಮ್ಯಾನೇಜ್ ಮೆಂಟ್ ಯೋಜನೆ.  ಇದು ಭೂಮಿ ತಾಯಿಯ ಪುನರುಜ್ಜೀವನ, ಅರಿವು, ಆರೈಕೆ ಹಾಗೂ ಸುಧಾರಣೆಗಾಗಿ ರೂಪಿಸಿರುವ ಕಾರ್ಯಕ್ರಮ. ಇದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿನ ಸರ್ಕಾರಗಳಿಗೆ ಪರ್ಯಾಯ ರಸಗೊಬ್ಬರಗಳು ಹಾಗೂ ಸಮತೋಲಿತ ರಾಸಾಯನಿಕ ಬಳಕೆಗೆ ಉತ್ತೇಜನ ನೀಡಲಿದೆ. 

Tap to resize

Latest Videos

undefined

Union Budget:ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಖರ್ಚಿಗೆ ಹಣ ಕಳುಹಿಸಿದ್ರೂ ಜೇಬಿಗೆ ಬೀಳುತ್ತೆ ಕತ್ತರಿ

ಯೋಜನೆ ಉದ್ದೇಶಗಳು
*ರಸಗೊಬ್ಬರ ಮೇಲಿನ ಸಬ್ಸಿಡಿ (subsidy) ಹೊರೆಯನ್ನು ತಗ್ಗಿಸೋದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಸಬ್ಸಿಡಿ ಹೊರೆ 2022-2023ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಶೇ.39ರಷ್ಟು ಅಂದ್ರೆ 2.25ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಹಿಂದಿನ ವರ್ಷ ಇದು 1.62ಲಕ್ಷ ಕೋಟಿ ರೂ. ಆಗಿತ್ತು.
*ರಾಸಾಯನಿಕ ರಸಗೊಬ್ಬರ (chemical fertilisers) ಬಳಕೆಯನ್ನು ಪ್ರೋತ್ಸಾಹಿಸದಿರುವುದು ಹಾಗೂ ಸುಸ್ಥಿರ (Sustainable) ಕೃಷಿ ಅಭ್ಯಾಸಗಳಿಗೆ ಒತ್ತು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
*ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು (awareness) ಮೂಡಿಸುವುದು.
*ಸುಸ್ಥಿರ ನೈರ್ಸಗಿಕ ಕೃಷಿಗೆ (Natural agriculture) ಹೆಚ್ಚಿನ ಆದ್ಯತೆ ನೀಡುವುದು. 

ಪ್ರಯೋಜನಗಳು
*ಕೆಲವೇ ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಈ ಯೋಜನೆ ಪ್ರೋತ್ಸಾಹಿಸಲಿದೆ.
*ನೈಸರ್ಗಿಕ ಪೌಷ್ಟಿಕಾಂಶಗಳು ಸೇರಿದಂತೆ ಪರ್ಯಾಯ ಪೌಷ್ಟಿಕಾಂಶಗಳು ಹಾಗೂ ರಸಗೊಬ್ಬರಗಳ ಬಳಕೆಯನ್ನುಇದು ಉತ್ತೇಜಿಸಲಿದೆ.
*ದೀರ್ಘಾವಧಿಯಲ್ಲಿ ರಾಸಾಯನಿಕಯುಕ್ತ ರಸಗೊಬ್ಬರಗಳ ಬಳಕೆಯನ್ನು ತಗ್ಗಿಸೋದ್ರಿಂದ ಮಣ್ಣಿನ ಗುಣಮಟ್ಟ ಹೆಚ್ಚಲಿದೆ.
*ದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲಿದೆ. 

Union Budget: ಉದ್ಯೋಗಿಗಳಿಗೆ ಕೊಂಚ ರಿಲೀಫ್, ಇಪಿಎಫ್ ವಿತ್ ಡ್ರಾ ಮೇಲಿನ ಟಿಡಿಎಸ್ ಶೇ.30ರಿಂದ ಶೇ.20ಕ್ಕೆ ಇಳಿಕೆ

ಯೋಜನೆ ಜಾರಿಗೆ ಕಾರಣವೇನು?
ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ (Agriculture) ರಾಸಾಯನಿಕ ರಸಗೊಬ್ಬರಗಳ ಬಳಕೆ ಹೆಚ್ಚಿದೆ. ಇದ್ರಿಂದ ಮಣ್ಣಿನ ಗುಣಮಟ್ಟ ತಗ್ಗಿದೆ. ಅಲ್ಲದೆ, ಕೃಷಿ ಉತ್ಪನ್ನಗಳು ಕೂಡ ರಾಸಾಯನಿಕಯುಕ್ತವಾಗಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಕಾರಣದಿಂದ ಕೃಷಿಯಲ್ಲಿ ನೈಸರ್ಗಿಕ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ರಾಸಾಯನಿಕಯುಕ್ತ ರಸಗೊಬ್ಬರ ಬಳಕೆ ತಗ್ಗಿಸಲು ಸರ್ಕಾರ ಪಿಎಂ ಪ್ರಣಾಮ ಯೋಜನೆಯನ್ನು ಪರಿಚಯಿಸಿದೆ. 
 

click me!