ಮಸೂದ್ ಅಜರ್ ಬೂಟು ನೆಕ್ಕುತ್ತಿದೆ ಚೀನಾ: ಹಣದ ಮೋಹ ಅಂದ್ರೆ ಇದೆನಾ?

By Web DeskFirst Published Mar 9, 2019, 2:11 PM IST
Highlights

ಬಯಲಾಯ್ತು ಚೀನಾ-ಅಜರ್ ನಡುವಿನ ವಾಣಿಜ್ಯ ಸಂಬಂಧ| ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಏಕೆ ಘೋಷಿಸಿಲ್ಲ ಚೀನಾ?| ಮಸೂದ್ ಅಜರ್ ವಿರುದ್ಧ ವಿಶ್ವವೇ ಒಂದಾದ್ರೂ ಚೀನಾ ಮಾತ್ರ ಮೌನಕ್ಕೆ ಶರಣು| ಅಜರ್ ಭದ್ರಕೋಟೆ ಬಾಲಾಕೋಟ್‌ನಲ್ಲಿ ಚೀನಾದ ಸಿಪಿಇಸಿ ಕಾಮಗಾರಿ| ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿಲಿಯನ್ ಗಟ್ಟಲೇ ಹಣ ಹೂಡಿಕೆ ಮಾಡಿದೆ ಚೀನಾ| 

ಬಿಜಿಂಗ್(ಮಾ.09): ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಇಡೀ ವಿಶ್ವವೇ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ಗೆ ಜಾಗತಿಕ ಉಗ್ರ ಪಟ್ಟ ನೀಡಲು ಮುಂದಾಗಿದೆ.

ಅಮೆರಿಕ, ಫ್ರಾನ್ಸ್, ಬ್ರಿ

ಟನ್, ರಷ್ಯಾ ಮತ್ತು ವಿಶ್ವಸಂಸ್ಥೆ ಮಸೂದ್ ಅಜರ್‌ನನ್ನು ಈಗಾಗಲೇ ಜಾಗತಿಕ ಉಗ್ರ ಎಂದು ಘೋಷಿಸಿವೆ. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಹೊಂದಿರುವ ಚೀನಾ ಮಾತ್ರ ಮಸೂದ್ ಅಜರ್‌ಗೆ ಜಾಗತಿಕ ಉಗ್ರ ಪಟ್ಟ ನೀಡುವಲ್ಲಿ ಹಿಂದೇಟು ಹಾಕುತ್ತಿದೆ.

ಮೇಲ್ನೋಟಕ್ಕೆ ಪಾಕಿಸ್ತಾನದೊಂದಿಗೆ ಚೀನಾ ಹೊಂದಿರುವ ಸೌಹಾರ್ದ ಸಂಬಂಧವೇ ಮಸೂದ್ ಅಜರ್‌ನನ್ನು ಉಗ್ರ ಎಂದು ಘೋಷಿಸಲು ಚೀನಾಗೆ ಅಡ್ಡಗಾಲಾಗಿದೆ ಎಂದೆನಿಸದು. ಚೀನಾ ಮೊದಲಿನಿಂದಲೂ ಪಾಕ್‌ಗೆ ಎಲ್ಲಾ ರೀತಿಯ ನೆರವು ನೀಡುತ್ತಾ ಬಂದಿದ್ದು, ಈ ಹಿನ್ನೆಲೆಯಲ್ಲಿ ಚೀನಾ ಮಸೂದ್ ಅಜರ್ ವಿಷಯದಲ್ಲಿ ಮೌನಕ್ಕೆ ಶರಣಾಗಿದೆ ಎನ್ನಲಾಗುತ್ತಿತ್ತು.

ಬಯಲಾಯ್ತು ಅಸಲಿ ಕಾರಣ:

ಆದರೆ ಚೀನಾ ಏಕೆ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಹಿಂದೇಟು ಹಾಕುತ್ತಿದೆ ಎಂಬುದರ ಅಸಲಿ ಕಾರಣ ಬಯಲಾಗಿದೆ. ಅಸಲಿಗೆ ಚೀನಾ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್‌ಗಾಗಿ ಬಿಲಿಯನ್ ಗಟ್ಟಲೇ ಹಣ ವ್ಯಯ ಮಾಡುತ್ತಿದೆ.

ಅದರಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಖೈಬರ್ ಪಕ್ಶ್ತೂನ್ ಭಾಗದಲ್ಲಿ ಸಿಪಿಇಸಿ ಕಾಮಗಾರಿ ಜೋರಾಗಿ ಸಾಗುತ್ತಿದ್ದು, ಮಸೂದ್ ಅಜರ್ ಭದ್ರಕೋಟೆಯಾಗಿರುವ ಬಾಲಾಕೋಟ್‌ನಲ್ಲೂ ಸಿಪಿಇಸಿ ಹಾದು ಹೋಗಲಿದೆ. ಬಾಲಾಕೋಟ್‌ನಲ್ಲಿ ಈಗಾಗಲೇ ರಸ್ತೆ, ವಿದ್ಯುತ್ ಮುಂತಾದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಸಿಪಿಇಸಿ ಮೂಲಕ ಚೀನಾ ಇಡೀ ಪಾಕ್ ಆಕ್ರಮಿತ ಪ್ರದೇಶದಲ್ಲಿ ತನ್ನ ಪ್ರಭಾವ ಬೀರಲು ಹೊಂಚು ಹಾಕುತ್ತಿದೆ.  

ಒಂದು ವೇಳೆ ಮಸೂದ್ ಅಜರ್ ವಿರುದ್ಧ ನಿರ್ಣಯ ಕೈಗೊಂಡರೆ ಈ ಎಲ್ಲಾ ಕಾಮಗಾರಿಗಳಿಗೆ ಜೈಷ್ ಉಗ್ರರು ಅಡ್ಡಗಾಲು ಹಾಕುವ ಅಪಾಯವಿದೆ. ಇದೇ ಕಾರಣಕ್ಕೆ ಚೀನಾ ಮಸೂದ್ ಅಜರ್ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಈ ಭಾಗದಲ್ಲಿ ಚೀನಾದ ಸುಮಾರು 10 ಸಾವಿರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಮಸೂದ್ ಅಜರ್ ವಿರುದ್ಧ ಒಂದೇ ಒಂದು ಮಾತನ್ನಾಡಿದರೂ ಈ 10 ಸಾವಿರ ಕಾರ್ಮಿಕರ ಜೀವಕ್ಕೆ ಕುತ್ತು ತಪ್ಪಿದ್ದಲ್ಲ.

ಈ ಕಾರಣಕ್ಕಾಗಿ ಚೀನಾ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಹಿಂದೇಟು ಹಾಕುತ್ತಿದ್ದು, ಭಯೋತ್ಪಾದನೆಯಲ್ಲೂ ವ್ಯಾಪಾರ, ಲಾಭದ ಕುರಿತು ಡ್ರ್ಯಾಗನ್ ದೇಶ ಲೆಕ್ಕಾಚಾರ ಹಾಕುತ್ತಿದೆ.

click me!