ಮಗಳ ಭವಿಷ್ಯಕ್ಕೆ ಸುಕನ್ಯ ಸಮೃದ್ಧಿ ಆರಂಭಿಸಿದ ಪೋಷಕರೆ ಎಚ್ಚರ, ಈ ತಪ್ಪು ಮಾಡಿದ್ರೆ ಖಾತೆ ಕ್ಲೋಸ್!

By Chethan Kumar  |  First Published Aug 17, 2024, 9:04 PM IST

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸುಕನ್ಯ ಸಮೃದ್ಧಿ ಯೋಜನೆ ಅತ್ಯಂತ ಸೂಕ್ತ. ಹೆಣ್ಣುಮಕ್ಕಳ ಶಿಕ್ಷಣ, ಕಲ್ಯಾಣದ ಈ ಯೋಜನೆ ಮೂಲಕ ಖಾತೆ ತೆರೆದು ಹಣ ಹೂಡಿಕೆ ಮಾಡುತ್ತಿರುವ ಪೋಷಕರೆ ಈ ತಪ್ಪು ಮಾಡಿದರೆ ಖಾತೆ ಕ್ಲೋಸ್ ಆಗಲಿದೆ ಎಚ್ಚರ.
 


ಬೆಂಗಳೂರು(ಆ.17) ಹೆಣ್ಣುಮಕ್ಕಳಿಗಾಗಿ ಆರಂಭಿಸಿರುವ ಸುಕನ್ಯ ಸಮೃದ್ಧಿ ಯೋಜನೆ ಸರ್ಕಾರಿ ಬೆಂಬಲಿತ ಯೋಜನೆಯಾಗಿದೆ. ಪೋಸ್ಟ್ ಆಫೀಸ್ ಅಥವಾ ಇತರ ಅಧಿಕೃತ ಬ್ಯಾಂಕ್‌ಗಳಲ್ಲಿ ಸುಕನ್ಯ ಸಮೃದ್ಧಿ ಖಾತೆ ತೆರೆದು ಮಗಳ ಭವಿಷ್ಯಕ್ಕೆ ಹಣ ಠೇವಣಿ ಇಡಲು ಅವಕಾಶ ಮಾಡಿಕೊಡಲಾಗಿದೆ. ಅತೀ ಹೆಚ್ಚಿನ ಬಡ್ಡಿ ಹಾಗೂ ಹಲವು ಪ್ರಯೋಜನಗಳು ಈ ಯೋಜನೆಯಲ್ಲಿದೆ. ವಾರ್ಷಿಕ 250 ರೂಪಾಯಿಂದ ಹಿಡಿದು 1.5 ಲಕ್ಷ ರೂಪಾಯಿ ವರೆಗೆ ಜಮೆ ಮಾಡಲು ಅವಕಾಶವಿದೆ. ಆದರೆ ಒಂದು ಸಣ್ಣ ತಪ್ಪು ಮಾಡಿದರೆ ಖಾತೆ ಕ್ಲೋಸ್ ಆಗಲಿದೆ ಅಥವಾ ಪೆನಾಲ್ಟಿ ವಿಧಿಸಲಾಗುತ್ತದೆ. 

ಸುಕನ್ಯ ಸಮೃದ್ಧಿ ಯೋಜನೆ ಆರಂಭಿಸಿರುವ ಪೋಷಕರು ಈ ವಿಚಾರದಲ್ಲಿ ಎಚ್ಚರವಹಿಸಬೇಕು. ಖಾತೆ ತೆರೆದ ಬಳಿಕ ವಾರ್ಷಿಕವಾಗಿ ಕನಿಷ್ಠ 150 ರೂಪಾಯಿ ಠೇವಣಿ ಮಾಡಬೇಕು. ಗರಿಷ್ಠ 1.5 ಲಕ್ಷ ರೂಪಾಯಿ. ಒಂದು ವೇಳೆ ಯಾವುದಾದರು ಒಂದು ವರ್ಷ ಕನಿಷ್ಠ 250 ರೂಪಾಯಿ ಠೇವಣಿ ಮಾಡಲು ವಿಫಲವಾದರೆ ಖಾತೆ ಕ್ಲೋಸ್ ಆಗಲಿದೆ ಅಥವಾ ಪೆನಾಲ್ಟಿ ವಿಧಿಸಲಾಗುತ್ತದೆ. ಆರ್ಥಿಕ ವರ್ಷದ ಅಂತ್ಯ ಅಂದರೆ ಮಾರ್ಚ್ 31ರೊಳಗೆ ಕನಿಷ್ಠ 250 ರೂಪಾಯಿ ಠೇವಣಿ ಮಾಡಿರಬೇಕು.

Tap to resize

Latest Videos

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರನಾ; ಸುಕನ್ಯಾ ಸಮೃದ್ಧಿ ಯೋಜನೆನಾ: ಮಹಿಳೆಯರಿಗೆ ಉತ್ತಮ ಆಯ್ಕೆ ಯಾವ್ದು ನೋಡಿ..

ಹೆಣ್ಣು ಮಗುವಿನ ಮಾತ್ರ ಸುಕನ್ಯ ಸಮೃದ್ಧಿ ಯೋಜನೆ ಆರಂಭಿಸಲು ಹಾಗೂ ಲಾಭ ಪಡೆಯಲು ಸಾಧ್ಯ. ಹೆಣ್ಣು ಮಗು ಕನಿಷ್ಠ 10 ವರ್ಷದೊಳಗೆ ಈ ಯೋಜನೆ ಆರಂಭಿಸಬೇಕು. ಮಗುವಿನ ವರ್ಷ 10 ವರ್ಷ ಮೀರಿದ ಬಳಿಕ ಸುಕನ್ಯ ಸಮದ್ಧಿ ಯೋಜನೆ ಆರಂಭಿಸಲು ಸಾಧ್ಯವಿಲ್ಲ. ಖಾತೆ ಆರಂಭಿಸಿದ ದಿನದಿಂದ ಕನಿಷ್ಠ 15 ವರ್ಷ ಪ್ರತಿ ವರ್ಷ ಠೇವಣಿ ಮಾಡಬೇಕು. ಇನ್ನು ಹೆಣ್ಣು ಮಗಳಿಗೆ 18 ವಯಸ್ಸು ತುಂಬಿದಾಗ ಇಂತಿಷ್ಟು ಹಣವನ್ನು ಶಿಕ್ಷಣಕ್ಕಾಗಿ ಪಡೆಯಲು ಸಾಧ್ಯವಿದೆ. ಈ ಯೋಜನೆಯ ಮೆಚ್ಯುರಿಟಿ ಅವಧಿ 21 ವರ್ಷ. 

ಒಂದು ವೇಳೆ ಮೆಚ್ಯುರಿಟಿ ಅವಧಿಗೆ ಮೊದಲು, ಹೆಣ್ಣು ಮಗಳಿಗೆ ಮದುವೆಯಾದರೆ ಈ ಖಾತೆ ಕ್ಲೋಸ್ ಆಗಲಿದೆ. ಠೇವಣಿ ಮೊತ್ತ, ಅದಕ್ಕೆ ಬಡ್ಡಿ ಸೇರಿಸಿ ಎಲ್ಲವನ್ನೂ ಪಡೆಯಲು ಅವಕಾಶವಿರುತ್ತದೆ. ದೇಶದ ಯಾವುದೇ ಭಾಗದಲ್ಲಿ ಖಾತೆ ತೆರೆಯಲು ಸಾಧ್ಯವಿದೆ, ಯಾವುದೇ ಭಾಗಕ್ಕೆ ಖಾತೆ ವರ್ಗಾಯಿಸಲು ಸಾಧ್ಯವಿದೆ. 

ಸುಕನ್ಯ ಸಮೃದ್ಧಿ ಗರಿಷ್ಠ ಬಡ್ಡಿದರ ನೀಡುತ್ತದೆ. 8.2 ರಷ್ಟು ಬಡ್ಡಿದರ ಲಭ್ಯವಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರುವ ಪೋಷಕರಿಗೆ 80-C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಸಿಗಲಿದೆ.  ಇದರಿಂದ ಬರುವ ಬಡ್ಡಿಯೂ ಯಾವುದೇ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಸೆಕ್ಷನ್ 10ರ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. 

 ಇನ್ಮುಂದೆ ಸಣ್ಣ ಉಳಿತಾಯ ಯೋಜನೆಗಳಿಗೆ ಪ್ಯಾನ್, ಆಧಾರ್ ಕಡ್ಡಾಯ
 

click me!