Success Story : ಕಸದಲ್ಲಿ ಸಿಕ್ಕ ಫೋನ್ ಡೈರೆಕ್ಟರಿ ಹಿಡಿದು ಯಶಸ್ವಿಯಾದ ವ್ಯಕ್ತಿ!

By Suvarna News  |  First Published Mar 20, 2024, 4:01 PM IST

ಬ್ಯುಸಿನೆಸ್ ಮಾಡೋದಕ್ಕೆ ಬುದ್ಧಿವಂತಿಕೆ ಅತ್ಯಗತ್ಯ. ಪೈಪೋಟಿ ದುನಿಯಾದಲ್ಲಿ ಒಳ್ಳೆ ಉತ್ಪನ್ನಕ್ಕೆ ಬೇಡಿಕೆ ಹೆಚ್ಚು. ಆರಂಭದಲ್ಲಿ ಗ್ರಾಹಕರನ್ನು ಸೆಳೆಯೋದು ಕಷ್ಟವಾದ್ರೂ ಇವರು ಮಾಡಿದ ಪ್ಲಾನ್ ಅಧ್ಬುತವಾಗಿದೆ. ಈಗ ವಿದೇಶಕ್ಕೂ ಉತ್ಪನ್ನ ಮಾರಾಟವಾಗ್ತಿದೆ.


ಮಹಿಳೆಯರ ಬಟ್ಟೆಯಲ್ಲಿ ಅನೇಕ ವೆರೈಟಿ ಇದೆ. ಹೊಸ ಫ್ಯಾಷನ್ ಗೆ ತಕ್ಕಂತೆ ಮಹಿಳೆಯರು ಅದನ್ನು ಧರಿಸ್ತಾರೆ. ಮಹಿಳಾ ಗ್ರಾಹಕರನ್ನು ಸೆಳೆಯಲು ಉತ್ಪಾದಕರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅದ್ರಲ್ಲಿ ಚಿಕಂಕರಿ ಆರ್ಟ್ ಕೂಡ ಒಂದು. ಜವಳಿ ಬಟ್ಟೆಗಳ ಮೇಲೆ ಸೂಕ್ಷ್ಮವಾದ ಮತ್ತು ಕಲಾತ್ಮಕವಾಗಿ ಮಾಡಿದ ಕೈ ಕಸೂತಿ ಇದಾಗಿದೆ. ಇದನ್ನು ಹತ್ತಿ, ಚಂದೇರಿ, ಮಸ್ಲಿನ್, ಜಾರ್ಜೆಟ್, ವಿಸ್ಕೋಸ್, ರೇಷ್ಮೆ, ಆರ್ಗನ್ಜಾ, ನೆಟ್ ಮುಂತಾದ ಬಟ್ಟೆಯ ಮೇಲೆ ಹಾಕಬಹುದು. 

ಚಿಕಂಕರಿ (Chikankari) ಈಗಿನದ್ದಲ್ಲ. ಅದಕ್ಕೆ ದೊಡ್ಡ ಇತಿಹಾಸವಿದೆ. 16 ನೇ ಶತಮಾನದಲ್ಲಿ ಪ್ರಾರಂಭವಾದ ಮೊಘಲ್ (Mughal) ಯುಗದಲ್ಲಿ ಚಿಕಂಕರಿ ಭಾರತದಲ್ಲಿ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಮೊಘಲ್ ಚಕ್ರವರ್ತಿ ಜಹಾಂಗೀರ್ ಅವರ ಪತ್ನಿ ನೂರ್ ಜೆಹಾನ್ ಅವರು ಈ ತಂತ್ರವನ್ನು ಲಕ್ನೋ (Lucknow) ಗೆ ತಂದರು ಎಂದು ಹೇಳಲಾಗುತ್ತದೆ. ಆದ್ರೆ ಈ ಚಕಂಕರಿ ಈಗ್ಲೂ ಫ್ಯಾಷನ್. ಕೆಲ ವರ್ಷಗಳಿಂದ ಚಕಂಕರಿ ಬಟ್ಟೆ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಬ್ಯುಸಿನೆಸ್ ಶುರು ಮಾಡಿ ಯಶಸ್ವಿಯಾದ ವ್ಯಕ್ತಿ ನಿತೇಶ್ ಅಗರ್ವಾಲ್. ಅತ್ಯಂತ ಕಡಿಮೆ ಹಣ ಹೂಡಿಕೆ ಮಾಡಿ ಈ ವ್ಯಾಪಾರ ಶುರು ಮಾಡಿದ ನಿತೇಶ್ ಅಗರ್ವಾಲ್ ಈಗ ಯಶಸ್ವಿಯಾಗಿದ್ದಾರೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅವರು ತಮ್ಮ ಉತ್ಪನ್ನವನ್ನು ಈಗ ಮಾರಾಟ ಮಾಡ್ತಿದ್ದಾರೆ.   

Tap to resize

Latest Videos

451ಕೋಟಿ ರೂ ನೆಕ್ಲೆಸ್, 277 ಕೋಟಿ ರೂ ಕುದುರೆ ಲಾಯ, ಕೋಟ್ಯಧಿಪತಿಗಳು ತಮ್ಮರಿಗಾಗಿ ನೀಡಿದ ದುಬಾರಿ ಉಡುಗೊರೆಗಳಿವು!

ನಿತೇಶ್ ಅಗರ್ವಾಲ್, ತ್ರಿವೇಣಿ ಚಿಕನ್ ಆರ್ಟ್ಸ್ ಹೆಸರಿನಲ್ಲಿ ಕಂಪನಿ ಶುರು ಮಾಡಿದ್ದಾರೆ. 2005 ರಿಂದ ಅನೌಪಚಾರಿಕವಾಗಿ ಈ ಕೆಲಸವನ್ನು ಪ್ರಾರಂಭಿಸಿದ್ದರು. 19 ನೇ ವಯಸ್ಸಿನಲ್ಲಿ ಓದು ಬಿಟ್ಟ ನಿತೇಶ್ ಅಗರ್ವಾಲ್, ಲಕ್ನೋ ಪ್ರಿಂಟ್ಸ್  ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ 2011ರಲ್ಲಿ ಅಧಿಕೃತವಾಗಿ ಕಂಪನಿ ಶುರು ಮಾಡಿದ್ರು. 

ಕೇವಲ 13,000 ರೂಪಾಯಿಯಲ್ಲಿ ನಿತೀಶ್ ಅಗರ್ವಾಲ್ ತ್ರಿವೇಣಿ ಚಿಕನ್ ಆರ್ಟ್ಸ್ ಶುರು ಮಾಡಿದ್ರು. ಗ್ರಾಹಕರನ್ನು ತಮ್ಮತ್ತ ಸೆಳೆದ ಅವರ ಉಪಾಯ ಭಿನ್ನವಾಗಿದೆ. ಕಸದ ಬುಟ್ಟಿಯಲ್ಲಿ ಫೋನ್ ಡೈರಕ್ಟರಿ ನೋಡಿದ ನಿತೀಶ್ ಅಗರ್ವಾಲ್, ಅದ್ರಿಂದ ನಂಬರ್ ಪಡೆದು ಒಬ್ಬೊಬ್ಬರಿಗೆ ಕರೆ ಮಾಡಿದ್ದಾರೆ. ತಮ್ಮ ಕೆಲಸದ ಬಗ್ಗೆ ಅವರಿಗೆ ತಿಳಿಸಿ, ಅಗತ್ಯ ಇದ್ದವರಿಗೆ ಉತ್ಪನ್ನ ತಯಾರಿಸಿ ನೀಡಿದ್ದಾರೆ. 

ನಿತೀಶ್ ಇಷ್ಟಕ್ಕೆ ನಿಲ್ಲಲ್ಲಿಲ್ಲ. ತಮ್ಮ ಉತ್ಪನ್ನವನ್ನು ವಿದೇಶಕ್ಕೆ ತಲುಪಿಸುವ ಆಲೋಚನೆ ಮಾಡಿದ್ರು. ಅವರು ಲಕ್ನೋದಲ್ಲಿ ಸ್ಥಳೀಯ ರಫ್ತು ಉತ್ಪಾದಕರ ಜೊತೆ ಕೆಲಸ ಶುರು ಮಾಡಿದರು. ಮಾರುಕಟ್ಟೆಯ ಜನರಿಗೆ ಅವರ ಪರಿಚಯವಾಯ್ತು. ಅಲ್ಲಿ ಅವರು ಡೆಡ್ ಸ್ಟಾಕ್ ಖರೀದಿ ಮಾಡಿದ್ರು. ಮಾರಾಟವಾಗದ ಈ ಡೆಡ್ ಸ್ಟಾಕನ್ನು ಅವರು ಮುಂಬೈನ ಫಾರೆನ್ ಚಿಕಂಕರಿ ರಫ್ತುದಾರರಿಗೆ ಮಾರಾಟ ಮಾಡಲು ಶುರು ಮಾಡಿದರು. ಅಲ್ಲದೆ ಅಂಗಡಿಗೆ ಕೂಡ ಮಾರಾಟ ಮಾಡಿದ್ರು. ಸ್ವಲ್ಪ ಸಮಯದಲ್ಲೇ ರಫ್ತಿನ ಬಗ್ಗೆ ಸಂಪೂರ್ಣ ತಿಳಿದ ಅವರು, ತಮ್ಮ ಉತ್ಪನ್ನವನ್ನು ತಾವೇ ರಫ್ತು ಮಾಡಿದ್ರು. ಸಿಂಗಾಪುರದಲ್ಲೂ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಅನೇಕ ಜನರಿದ್ದಾರೆ. 

ಅನಿಲ್ ಅಂಬಾನಿ ದಿವಾಳಿಯಾದ್ರೂ, ಕಿರಿಯ ಮಗನ ಕಾರು ಶೋಕಿಗೇನು ಕಮ್ಮಿ ಇಲ್ಲ!

ಈಗ ನಿತೀಶ್, ಆಫ್ರಿಕಾ, ಇಂಡೋನೇಷ್ಯಾ, ಬರ್ಮಾ, ಯುಎಸ್ , ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಯುಕೆ ಮತ್ತು ಯುರೋಪ್ ಗೆ ರಫ್ತು ಮಾಡುತ್ತಾರೆ.  ಅವರ ಕಂಪನಿ ವಹಿವಾಟು 7 ಕೋಟಿ ರೂಪಾಯಿಗೆ ಏರಿದ್ದು, ಅವರ ಕಂಪನಿಯಲ್ಲಿ 15 ಮಂದಿ ಕೆಲಸ ಮಾಡುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಪರೋಕ್ಷವಾಗಿ ಕೆಲಸ ಮಾಡ್ತಿದ್ದಾರೆ. ಮಹಿಳೆಯರು ಕೈನಲ್ಲಿಯೇ ಕಸೂತಿ ಮಾಡ್ತಾರೆ. ಇವರ ಬ್ಯುಸಿನೆಸ್ ಯಶಸ್ವಿಯಾದ್ರೂ ಚೀನಾ ತೀವ್ರ ಪೈಪೋಟಿ ನೀಡ್ತಿದೆ.   
 

click me!