Russia Ukraine Crisis:ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಮಾಹಿತಿ

By Suvarna NewsFirst Published Feb 26, 2022, 3:48 PM IST
Highlights

*ಗೋಧಿ,ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆಯೇರಿಕೆ ನಿಚ್ಚಳ
*ಎಸಿ,ಫ್ರಿಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗೋ ಸಾಧ್ಯತೆ
*ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಕೂಡ ಹೆಚ್ಚಳ

Business Desk: ರಷ್ಯಾ (Russia)-ಉಕ್ರೇನ್ (Ukraine) ಸಂಘರ್ಷ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆ (International market) ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೊರೋನಾದಿಂದ (Corona) ಎದುರಾದ ಆಘಾತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರೋ ಜಗತ್ತಿನ ಆರ್ಥಿಕತೆಗೆ ಈಗ ಮತ್ತೊಮ್ಮೆ ಪೆಟ್ಟು ಬಿದ್ದಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ (Supply chain) ಸಾಕಷ್ಟು ವ್ಯತ್ಯಯವಾಗಿದೆ. ಈ ಯುದ್ಧದ ಪರಿಣಾಮ ಭಾರತದ (India) ಮೇಲೂ ಆಗಿದೆ. ಹಾಗಾದ್ರೆ ರಷ್ಯಾ -ಉಕ್ರೇನ್ ಸಮರದಿಂದ ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗಬಹುದು? ಇಲ್ಲಿದೆ ಮಾಹಿತಿ.

ಪೆಟ್ರೋಲ್, ಡೀಸೆಲ್ ಬೆಲೆ
ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil price) ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಫೆ.24ರಂದು ರಷ್ಯಾ (Russia) ಉಕ್ರೇನ್ (Ukraine) ಮೇಲೆ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude oil) ಬೆಲೆ ಗಗನಕ್ಕೆ ಜಿಗಿಯಿತು. ಪ್ರತಿ ಬ್ಯಾರಲ್ ಗೆ 100ಡಾಲರ್ ಏರಿಕೆ ಕಾಣೋ ಮೂಲಕ ಆತಂಕ ಸೃಷ್ಟಿಸಿದೆ. 2020ನೇ ಸಾಲಿನ ಅಂಕಿಅಂಶಗಳ ಪ್ರಕಾರ ರಷ್ಯಾ (Russia) ಜಗತ್ತಿನ ಮೂರನೇ ಅತೀದೊಡ್ಡ ಕಚ್ಚಾ ತೈಲ ಉತ್ಪಾದಕ ರಾಷ್ಟ್ರವಾಗಿದೆ. ಪ್ರತಿದಿನ ಅಂದಾಜು 10.50 ಮಿಲಿಯನ್ ಬ್ಯಾರೆಲ್ಸ್ ಕಚ್ಚಾ ತೈಲ ಉತ್ಪಾದಿಸುತ್ತದೆ. ಭಾರತ ಕಚ್ಚಾ ತೈಲಕ್ಕೆ ರಷ್ಯಾದ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರದ ಕಾರಣ  ತೈಲ ಪೂರೈಕೆ (Oil supply) ಹಾಗೂ ಬೆಲೆ (Price) ಮೇಲೆ ನೇರ ಪರಿಣಾಮ ಬೀರದಿದ್ರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಯೇರಿಕೆ ಬಿಸಿ ತಟ್ಟಿಯೇ ತಟ್ಟುತ್ತದೆ.

Russia Ukrain Crisis: ರಷ್ಯಾ ವಿರುದ್ಧ ಪೂರ್ಣ ಆರ್ಥಿಕ ದಿಗ್ಭಂದನಕ್ಕೆ ಹೆಚ್ಚಿದ ಕೂಗು

ಎಲ್ ಪಿಜಿ
ಭಾರತಕ್ಕೆ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಸೋ ಪ್ರಮುಖ ರಾಷ್ಟ್ರ ಉಕ್ರೇನ್.  ಭಾರತದ ಅರ್ಧಕ್ಕಿಂತಲೂ ಹೆಚ್ಚಿನ ಅನಿಲ (Natural Gas)ಬೇಡಿಕೆಯನ್ನು ಉಕ್ರೇನ್ ಪೂರೈಸುತ್ತಿದೆ. ಹೀಗಾಗಿ ರಷ್ಯಾ-ಉಕ್ರೇನ್ ಯುದ್ಧದಿಂದ ಅಡುಗೆ ಅನಿಲ ಬೆಲೆ ಹೆಚ್ಚಳವಾಗೋದು ಖಚಿತ. 

ಗೋಧಿ ಬೆಲೆ 
ರಷ್ಯಾ ಹಾಗೂ ಉಕ್ರೇನ್ ಜಗತ್ತಿನ ಅತೀದೊಡ್ಡ ಗೋಧಿ (Wheat) ರಫ್ತುದಾರ ರಾಷ್ಟ್ರಗಳು. ಭಾರತ ಕೂಡ ಉಕ್ರೇನ್ ನಿಂದ ಗೋಧಿ ಆಮದು ಮಾಡಿಕೊಳ್ಳುತ್ತದೆ. ಜಗತ್ತಿನ ಅತೀದೊಡ್ಡ ಗೋಧಿ ಉತ್ಪಾದನಾ ರಾಷ್ಟ್ರಗಳೆರಡು ಸಂಘರ್ಷದಲ್ಲಿ ತೊಡಗಿರೋ ಕಾರಣ ಗೋಧಿ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು,ದರ ಹೆಚ್ಚೋ ಸಾಧ್ಯತೆಯಿದೆ. 

ಅಡುಗೆ ಎಣ್ಣೆ
ಭಾರತ ಶೇ.90ರಷ್ಟು ಸೂರ್ಯಕಾಂತಿ ಎಣ್ಣೆಯನ್ನು (sunflower oil) ರಷ್ಯಾ (Russia) ಹಾಗೂ ಉಕ್ರೇನ್ ನಿಂದ (Ukraine) ಆಮದು (Import)ಮಾಡಿಕೊಳ್ಳುತ್ತಿದೆ. 2021ರಲ್ಲಿ ಭಾರತ 1.89 ಮಿಲಿಯನ್ ಟನ್ಸ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಇದ್ರಲ್ಲಿ ಶೇ.70ರಷ್ಟನ್ನು ಉಕ್ರೇನ್ ಹಾಗೂ ಶೇ.20ರಷ್ಟನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಷ್ಯಾದೊಂದಿಗಿನ ಬಿಕ್ಕಟ್ಟು ಕಾವು ಪಡೆದುಕೊಳ್ಳುತ್ತಿದ್ದಂತೆ ಉಕ್ರೇನ್ ಫೆಬ್ರವರಿಯಲ್ಲಿ ಒಂದೇಒಂದು ಶಿಪ್ ಸೂರ್ಯಕಾಂತಿ ಎಣ್ಣೆಯನ್ನು ಭಾರತಕ್ಕೆ ಕಳುಹಿಸಿಲ್ಲ. ಹೀಗಾಗಿ ಭಾರತದ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಬೆಲೆ ಹೆಚ್ಚಳವಾಗೋದು ಖಚಿತ.

ವಿದ್ಯುತ್ ಬೆಲೆ
ಇಂಧನ ಬೆಲೆಯಲ್ಲಿ ಹೆಚ್ಚಳವಾದ್ರೆ ಅದು ವಿದ್ಯುತ್ ಉತ್ಪಾದನೆ ದರ ಹೆಚ್ಚಳಕ್ಕೂ ಕಾರಣವಾಗುತ್ತದೆ. ಪರಿಣಾಮ ಗ್ರಾಹಕರ ಜೇಬಿಗೆ ವಿದ್ಯುತ್ ಬಿಲ್ ಹೆಚ್ಚುವರಿ ಹೊರೆ ಬೀಳೋ ಸಾಧ್ಯತೆಯಿದೆ. 

Russia Ukraine Crisis: ಉಕ್ರೇನ್ ಬರೀ ದೇಶವಲ್ಲ, ಹೊಸ ಯಗದ ತಂತ್ರಜ್ಞಾನ ಕಂಪನಿಗಳ ಬೇರು!

ಲೋಹಗಳು
ರಷ್ಯಾ ಮತ್ತು ಉಕ್ರೇನ್ ಅನೇಕ ಲೋಹಗಳನ್ನು ಉತ್ಪಾದಿಸೋ ರಾಷ್ಟ್ರಗಳಾಗಿವೆ. ಪಲ್ಲಾಡಿಯಂ ಎಂಬ ಲೋಹವನ್ನು ಈ ಎರಡೂ ರಾಷ್ಟ್ರಗಳು ಉತ್ಪಾದಿಸುತ್ತಿದ್ದು, ಇದನ್ನು ಮೊಬೈಲ್ ಫೋನ್, ವಾಹನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ನಿಕ್ಕಲ್, ತಾಮ್ರ, ಕಬ್ಬಿಣ, ಪ್ಲಾಟಿನಂ ಮುಂತಾದ ಲೋಹಗಳನ್ನು ಕೂಡ ಈ ರಾಷ್ಟ್ರಗಳು ಉತ್ಪಾದಿಸುತ್ತವೆ. ಹೀಗಾಗಿ ಭಾರತದಲ್ಲಿ ಕೂಡ ಈ ಲೋಹಗಳ ಬೆಲೆಯಲ್ಲಿ ಹೆಚ್ಚಳವಾಗೋ ಸಾಧ್ಯತೆಯಿದೆ. ಜೊತೆಗೆ ಈ ವಸ್ತುಗಳನ್ನು ಬಳಸಿ ಉತ್ಪಾದಿಸಿದ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಬಹುದು. 

ಎಸಿ, ಫ್ರಿಜ್  ದುಬಾರಿ
ತಾಮ್ರ, ಅಲ್ಯುಮೀನಿಯಂ, ಉಕ್ಕು ಹಾಗೂ ಪ್ಲಾಸ್ಟಿಕ್ ಮುಂತಾದ ವಸ್ತುಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗೋ ಸಾಧ್ಯತೆಯಿದೆ. ಹೀಗಾಗಿ ಫ್ರಿಜ್, ಎಸಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗೋ ಸಾಧ್ಯತೆಯಿದೆ. 

click me!