*ಭಾರತದಿಂದ ರಷ್ಯಾಕ್ಕೆ ಅಧಿಕ ಪ್ರಮಾಣದಲ್ಲಿ ಇಂಜಿನಿಯರಿಂಗ್ ಸರಕುಗಳ ರಫ್ತು
*ಕಾರ್ಗೋ ಕಾಯ್ದಿರಿಸೋವಿಕೆ ನಿಲ್ಲಿಸಿದ ಪರಿಣಾಮ ರಫ್ತು ಮಾಡೋ ಸಂಸ್ಥೆಗಳಿಗೆ ಸಂಕಷ್ಟ
*ಕೊನೆಯ ತ್ರೈಮಾಸಿಕದ ರಫ್ತಿನ ಗುರಿ ತಲುಪಲು ಅಡಚಣೆ
ಕೋಲ್ಕತ್ತ (ಫೆ.26): ರಷ್ಯಾ (Russia) - ಉಕ್ರೇನ್ (Ukraine) ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ (India) ಶಿಪ್ಪಿಂಗ್ (Shipping) ಕಂಪೆನಿಗಳು ಉಭಯ ರಾಷ್ಟ್ರಗಳ ಬಂದರುಗಳಿಗೆ ಸರಕು ರಫ್ತಿಗೆ (Export) ಕಾರ್ಗೋ (Cargo) ಕಾಯ್ದಿರಿಸೋದನ್ನು ನಿಲ್ಲಿಸಿವೆ ಎಂದು ಅಧಿಕೃತ ಮೂಲಗಳು
ಮಾಹಿತಿ ನೀಡಿವೆ.
ಸ್ವತಂತ್ರ ರಾಷ್ಟ್ರಗಳ ಕಾಮನ್ ವೆಲ್ತ್ (CIS) ವಿಭಾಗದಲ್ಲಿ ಭಾರತದ ಇಂಜಿನಿಯರಿಂಗ್ (Engineering) ಸರಕುಗಳ ರಫ್ತಿಗೆ (Export) ರಷ್ಯಾ (Russia) ನೆಚ್ಚಿನ ತಾಣವಾಗಿದೆ. ಹೀಗಾಗಿ ಶಿಪ್ಪಿಂಗ್ ಕಂಪೆನಿಗಳ ಈ ನಡೆ ಈಗಾಗಲೇ ಒಪ್ಪಂದ ಪಡೆದಿರೋ ಉತ್ಪಾದನಾ ಕಂಪನಿಗಳಿಗೆ ಮಾತ್ರವಲ್ಲ, ಭವಿಷ್ಯದ ಸಾಗಣೆ ಮೇಲೂ ಪರಿಣಾಮ ಬೀರಿದ್ದು, ಅನಿಶ್ಚಿತತೆ ಮನೆ ಮಾಡಿದೆ.
Russia Ukraine Crisis:ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಮಾಹಿತಿ
'ರಷ್ಯಾ ಹಾಗೂ ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಅನೇಕ ಶಿಪ್ಪಿಂಗ್ ಕಂಪೆನಿಗಳು (Sipping Companies) ರಷ್ಯಾದ (Russia) ಬಂದರುಗಳಿಗೆ (Ports) ಕಂಟೈನರ್ ಗಳನ್ನು(Containers) ಪೂರೈಕೆ ಮಾಡೋದನ್ನು ನಿಲ್ಲಿಸಿರೋದರ ಜೊತೆಗೆ ರಷ್ಯಾದ ಬಂದರುಗಳಿಗೆ ಸರಕು ಸಾಗಣೆ ಬುಕ್ಕಿಂಗ್ ಕೂಡ ನಿಲ್ಲಿಸಿವೆ. ಎಂಎಸ್ ಸಿ ( MSC), ಮೇರ್ಸಕ್ (Maersk), ಹ್ಯಾಪ್ಯಾಗ್ -ಲಲ್ಯೋಡ್ (Hapag-Llyod)ಮುಂತಾದ ಕಂಟೈನರ್ ಸಾಗಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರೋ ಸಂಸ್ಥೆಗಳು ಕೂಡ ಬುಕ್ಕಿಂಗ್ ನಿಲ್ಲಿಸಿವೆ' ಎಂದು ಪಶ್ಚಿಮ ಬಂಗಾಳ ಕಸ್ಟಮ್ ಹೌಸ್ ಏಜೆಂಟ್ಸ್ ಸೊಸೈಟಿ ಅಧ್ಯಕ್ಷ ಸುಜಿತ್ ಚಕ್ರಬೊರ್ತಿ ಪಿಟಿಐಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಇಂಜಿನಿಯರಿಂಗ್ ಉತ್ಪನ್ನಗಳ ರಫ್ತು ಸಂಸ್ಥೆ ನಿಫಾ ರಫ್ತು ಕಂಪೆನಿ ನಿರ್ದೇಶಕ ರಾಕೇಶ್ ಸಹ ನಮ್ಮ ಕಂಪನಿಯಿಂದ ರಷ್ಯಾಕ್ಕೆ ಸರಕು ಸಾಗಣೆ ಮಾಡಬೇಕಿತ್ತು. ಆದ್ರೆ ಶಿಪ್ಪಿಂಗ್ ಸಂಸ್ಥೆ ಹ್ಯಾಪ್ಯಾಗ್ ಲಲ್ಯೋಡ್ ಕಂಟೈನರ್ ಬುಕ್ಕಿಂಗ್ ನಿಲ್ಲಿಸಿದೆ ಎಂಬ ಮಾಹಿತಿ ನೀಡಿದ್ದಾರೆ.
ಕೊನೆಯ ತ್ರೈಮಾಸಿಕದಲ್ಲಿ ಇಂಜಿನಿಯರಿಂಗ್ ರಫ್ತಿನ ಗುರಿ ತಲುಪಲು ಅದ್ರಲ್ಲೂ ಮಾರ್ಚ್ ತಿಂಗಳಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ದೊಡ್ಡ ತೊಡಕಾಗಿ ಕಾಡಬಹುದು. ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ರಫ್ತಿನ ಪ್ರಮಾಣದಲ್ಲಿ ಸಾಕಷ್ಟು ಜಿಗಿತ ಕಂಡುಬರುತ್ತಿತ್ತು' ಎಂದು ಇಇಪಿಸಿ (EEPC) ಇಂಡಿಯಾ ಚೇರ್ಮನ್ (chairman) ಮಹೇಶ್ ದೇಸಾಯಿ ತಿಳಿಸಿದ್ದಾರೆ.
ರಷ್ಯಾ ಭಾರತದ 25ನೇ ಅತೀದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. 2022ನೇ ಆರ್ಥಿಕ ಸಾಲಿನ ಮೊದಲ 9 ತಿಂಗಳಲ್ಲಿ ಉಭಯ ರಾಷ್ಟ್ರಗಳ ನಡುವೆ 2.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳ ರಫ್ತು ಹಾಗೂ 6.9 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಆಮದು ನಡೆದಿದೆ. ಭಾರತ ಹಾಗೂ ರಷ್ಯಾದ ನಡುವೆ 2021ನೇ ಸಾಲಿನಲ್ಲಿ 11.9 ಬಿಲಿಯನ್ ಡಾಲರ್ ದ್ವಿಪಕ್ಷೀಯ ವಹಿವಾಟು ನಡೆದಿದೆ. ಭಾರತ ರಷ್ಯಾಕ್ಕೆ ಮೊಬೈಲ್ ಫೋನ್ಸ್, ಔಷಧ ಉತ್ಪನ್ನಗಳು, ಚಹಾ ಸೇರಿದಂತೆ ಅನೇಕ ವಸ್ತುಗಳನ್ನು ರಫ್ತು ಮಾಡುತ್ತದೆ. ಹಾಗೆಯೇ ರಷ್ಯಾದಿಂದ ಕಚ್ಚಾ ತೈಲ, ಕಲ್ಲಿದ್ದಲು ಹಾಗೂ ವಜ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ.
Russia Ukrain Crisis: ರಷ್ಯಾ ವಿರುದ್ಧ ಪೂರ್ಣ ಆರ್ಥಿಕ ದಿಗ್ಭಂದನಕ್ಕೆ ಹೆಚ್ಚಿದ ಕೂಗು
ಇನ್ನು ಕಳೆದ ವರ್ಷ ಭಾರತದಿಂದ ಉಕ್ರೇನ್ ಗೆ ಕಳೆದ ವರ್ಷ 510 ಮಿಲಿಯನ್ ಡಾಲರ್ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಇದ್ರಲ್ಲಿ ಶೇ.32ರಷ್ಟು ಔಷಧ ಉತ್ಪನ್ನಗಳ ಪಾಲಿದೆ. ಇನ್ನು ರಫ್ತಾಗೋ ಇತರ ಪ್ರಮುಖ ಸರಕುಗಳೆಂದ್ರೆ ಟೆಲಿಕಾಮ್ ಉಪಕರಣಗಳು, ಕಬ್ಬಿಣ ಹಾಗೂ ಉಕ್ಕು, ಕೃಷಿ ರಾಸಾಯನಿಕಗಳು ಹಾಗೂ ಕಾಫಿ. 2021ನೇ ಸಾಲಿನಲ್ಲಿ ಭಾರತ ಹಾಗೂ ಉಕ್ರೇನ್ ನಡುವೆ 3.1 ಬಿಲಿಯನ್ ಡಾಲರ್ ದ್ವಿಪಕ್ಷೀಯ ವಹಿವಾಟು ನಡೆದಿದೆ. ಕಳೆದ ವರ್ಷ ಉಕ್ರೇನ್ ನಿಂದ ಭಾರತ 2.6 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಅದ್ರಲ್ಲಿ 1.85 ಬಿಲಿಯನ್ ಡಾಲರ್ ಮೌಲ್ಯದ ವನಸ್ಪತಿ ತೈಲಗಳು ಮುಖ್ಯವಾಗಿ ಸೂರ್ಯಕಾಂತಿ ಎಣ್ಣೆ ಆಮದಾಗಿದೆ.