15 ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌!

By Santosh Naik  |  First Published Jun 29, 2023, 6:50 PM IST

ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳು ಐಷಾರಾಮಿ ಸ್ಥಳಗಳಿಗೆ  ಪ್ರಯಾಣ ಮಾಡಿದನ್ನು, ಐಷಾರಾಮಿ ವಸ್ತು ಖರೀದಿ ಮಾಡಿದ್ದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು ಇದರ ಬೆನ್ನಲ್ಲಿಯೇ ಐಟಿ ಇಲಾಖೆ ನೋಟಿಸ್‌ ಕಳಿಸಿದೆ.
 


ನವದೆಹಲಿ (ಜೂ.29): ಹಾಯ್‌ ಫ್ರೆಂಡ್ಸ್‌.. ನಾನ್‌ ಇವತ್ತು ಬ್ಯಾಂಕಾಂಕ್‌ನಿಂದ ಫೋಟೋ ಪೋಸ್ಟ್‌ ಮಾಡಿದ್ದೇನೆ. ನನ್ನ ಸನ್‌ ಕಿಸ್ಡ್‌ ಫೋಟೋ ಹೇಗಿದೆ..? ಇವತ್ತು ನಾನು ಗುಚ್ಚಿ ಬ್ಯಾಗ್‌ ಪರ್ಚೇಸ್‌ ಮಾಡಿದ್ದೇನೆ.. ಹೀಗೆ ಪುಂಖಾನುಪುಂಖವಾಗಿ ಇನ್ಸ್‌ಟಾಗ್ರಾಮ್‌, ಯುಟ್ಯೂಬ್‌, ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದ ದೇಶದ 15 ಸೋಶಿಯಲ್‌ ಮೀಡಿಯಾ  ಇನ್‌ಫ್ಲ್ಯುಯೆನ್ಸರ್‌ಗಳಿಗೆ ಸಂಕಷ್ಟ ಎದುರಾಗಿದೆ. ವಿದೇಶಕ್ಕೆ ಹೋಗಿದ್ದನ್ನು, ದುಬಾರಿ ವಸ್ತು ಖರೀದಿ ಮಾಡಿದ್ದನ್ನು ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಈ ಇನ್‌ಫ್ಲ್ಯುಯೆನ್ಸರ್‌ಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಈ ಸ್ಥಳಗಳಿಗೆ ಹೋಗಿಯೂ, ದುಬಾರಿ ವಸ್ತುಗಳನ್ನು ಖರೀದಿ ಮಾಡಿದ್ದರೂ, ಕಡಿಮೆ ಆದಾಯ ತೆರಿಗೆ ಕಟ್ಟಿದ್ದಕ್ಕೆ ಕಾರಣವೇನು ಎಂದು ಪ್ರಶ್ನಿಸಿ ನೋಟಿಸ್‌ ಕಳಿಸಿದೆ. ಇದರಲ್ಲಿ ಹೆಚ್ಚಿನವರೂ ಒಂಚೂರು ತೆರಿಗೆ ಕಟ್ಟಿಲ್ಲ, ಇನ್ನು ಕಟ್ಟಿದವರೂ ತೀರಾ ಅಲ್ಪ ಪ್ರಮಾಣದ ತೆರಿಗೆಯನ್ನು ಕಟ್ಟಿದ್ದಾರೆ. ಅವರು ಪೋಸ್ಟ್‌ ಮಾಡುವ ಕಂಪನಿ ಪ್ರಾಯೋಜಿತ ಪೋಸ್ಟ್‌ಗಳಿಗೆ ದೊಡ್ಡ ಪ್ರಮಾಣದ ಸಂಭಾವನೆಗಳನ್ನು ಪಡೆದುಕೊಂಡಿದ್ದರೂ, ತೆರಿಗೆ ಮಾತ್ರ ಕಡಿಮೆ ಕಟ್ಟಿದ್ದಾರೆ ಎಂದು ಇಲಾಖೆ ಹೇಳಿದೆ.

ಹೈಪ್ರೊಫೈಲ್‌ ಫ್ಯಾಶನ್‌ ಇನ್‌ಫ್ಲ್ಯುಯೆನ್ಸರ್‌, ಲೈಫ್‌ಸ್ಟೈಲ್‌ ಹಾಗೂ ಫಿಟ್‌ನೆಸ್‌ ಕೋಚ್‌, ಟ್ರಾವೆಲ್‌ ಇನ್‌ಫ್ಲ್ಯುಯೆನ್ಸರ್‌ ಹಾಗೂ ಬಾಲಿವುಡ್‌ ಬೆಳವಣಿಗೆ ಕುರಿತಾಗಿ ಪೋಸ್ಟ್‌ಗಳನ್ನು ಪ್ರಕಟಿಸುವ ಇನ್‌ಫ್ಲ್ಯುಯೆನ್ಸರ್‌ ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಹೇಳಲಾಗಿದೆ. ಇವರಲ್ಲಿ ಮೂವರು ಯಾವುದೇ ರಿಟರ್ನ್ಸ್ ಸಲ್ಲಿಸಿಲ್ಲ, ಉಳಿದವರು ತಮ್ಮ ಆದಾಯವನ್ನು ಕಡಿಮೆ ವರದಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ 30 ಪ್ರಭಾವಿಗಳು ಸ್ಕ್ಯಾನರ್ ಅಡಿಯಲ್ಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮುಂಬೈ ಮೂಲದ ಫ್ಯಾಷನ್ ಇನ್‌ಫ್ಲ್ಯುಯೆನ್ಸರ್‌ ಒಬ್ಬರು ಐಷಾರಾಮಿ ಮೇಕಪ್ ಬ್ರಾಂಡ್‌ಗಳನ್ನು ಅನುಮೋದಿಸಲು ಇನ್ಸ್‌ಟ್ರಾಗ್ರಾಮ್‌ನಲ್ಲಿ ಒಂದೇ ಪೋಸ್ಟ್‌ಗೆ 50,000 ರಿಂದ 1 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ 6 ಟಿಪ್ಸ್ ಅನುಸರಿಸಿದ್ರೆ ದೊಡ್ಡ ಪ್ರಮಾಣದ ತೆರಿಗೆ ಉಳಿತಾಯ ಮಾಡ್ಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

"ಒಂದೇ ಕಂಪನಿಯಿಂದ ವಿವಿಧ ಹುದ್ದೆಗಳಿಗೆ 30 ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವೀಕರಿಸಿದ ನಂತರ, ಪ್ರಭಾವಿಗಳು ಕೇವಲ 3.5 ಲಕ್ಷ ರೂಪಾಯಿಗಳ ವಾರ್ಷಿಕ ಆದಾಯವನ್ನು ಘೋಷಿಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ವಾರ ಐಟಿ ಅಧಿಕಾರಿಗಳು ಕೇರಳದಲ್ಲಿ 10 ಯೂಟ್ಯೂಬರ್‌ಗಳ ಮೇಲೆ ಹುಡುಕಾಟ ನಡೆಸಿದ್ದರು.

Tap to resize

Latest Videos

ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಯಾವ ತೆರಿಗೆ ವ್ಯವಸ್ಥೆ ಆಯ್ಕೆ ಮಾಡೋದು ಉತ್ತಮ? ಇಲ್ಲಿದೆ ಮಾಹಿತಿ

ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ವರದಿ 2022 ರ ಪ್ರಕಾರ, 2021 ರಲ್ಲಿ ಸಾಮಾಜಿಕ ಮಾಧ್ಯಮದ ಇನ್‌ಫ್ಲ್ಯುಯೆನ್ಸರ್‌ ಮಾರುಕಟ್ಟೆಯು 900 ಕೋಟಿ ರೂಪಾಯಿಗಳಷ್ಟಿತ್ತು, ಇದು 2025 ರ ವೇಳೆಗೆ 2,200 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ತಿಳಿಸಿದೆ. ಆರ್ಥಿಕ ವರ್ಷದಲ್ಲಿ ರೂ 20 ಲಕ್ಷಕ್ಕಿಂತ ಹೆಚ್ಚು ಗಳಿಸುವ ಇನ್‌ಫ್ಲ್ಯುಯೆನ್ಸರ್‌ಗಳು ತಮ್ಮ ಸೇವೆಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾನೂನಿನಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಏಕೆಂದರೆ ಅಂತಹ ಸೇವೆಗಳನ್ನು ಆನ್‌ಲೈನ್ ಮಾಹಿತಿ ಮತ್ತು ಡೇಟಾಬೇಸ್ ಪ್ರವೇಶ ಅಥವಾ ಮರುಪಡೆಯುವಿಕೆ ಸೇವೆಗಳು (ಒಐಡಿಎಆರ್) ಎಂದು ವರ್ಗೀಕರಿಸಲಾಗಿದೆ. ಜಿಎಸ್‌ಟಿ ಅಡಿಯಲ್ಲಿ, ಸೇವೆಗಳಿಗೆ 18 ಶೇಕಡಾ ತೆರಿಗೆ ವಿಧಿಸಲಾಗುತ್ತದೆ. 2022ರ ಜುಲೈ 1ರಿಂದ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194R ಅಡಿಯಲ್ಲಿ, 20,000 ರೂ.ಗಿಂತ ಹೆಚ್ಚಿನ ಉಚಿತಗಳ ಮೇಲೆ ಮೇಲೆ ಮೂಲದಲ್ಲಿ (TDS) 10 ಪ್ರತಿಶತ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ.

click me!