ಬಜೆಟ್‌ ಎಫೆಕ್ಟ್: ಸಿಗರೆಟ್‌ ದರ ಏರಿಕೆ, ಧೂಮಪಾನಿಗಳಿಗೆ ಬಿಸಿ!

By Suvarna NewsFirst Published Feb 20, 2020, 12:52 PM IST
Highlights

ಬಜೆಟ್‌ ಎಫೆಕ್ಟ್: ಸಿಗರೆಟ್‌ ದರ ಏರಿಕೆ, ಧೂಮಪಾನಿಗಳಿಗೆ ಬಿಸಿ| ಐಟಿಸಿ ಕಂಪನಿಯ ಕಿಂಗ್‌, ಕಿಂಗ್‌ ಲೈಟ್‌ ದರ 2 ರೂ. ಏರಿಕೆ

ಬೆಂಗಳೂರು[ಫೆ.20]: ಕೇಂದ್ರ ಬಜೆಟ್‌ನಲ್ಲಿ ಸಿಗರೆಟ್‌ ಮೇಲಿನ ತೆರಿಗೆ ಹೆಚ್ಚಳ ಮಾಡಿದ ಪರಿಣಾಮ ಸಿಗರೆಟುಗಳ ದರ ಏರಿಕೆಯಾಗಿದ್ದು, ಧೂಮಪಾನಿಗಳ ಜೇಬಿಗೆ ಕತ್ತರಿ ಬೀಳುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ಐಟಿಸಿ ಕಂಪನಿಯ ಕಿಂಗ್‌, ಕಿಂಗ್‌ ಲೈಟ್‌ ಸಿಗರೆಟಿನ ದರ .2 ಏರಿಕೆಯಾಗಿದೆ. ಈ ಹಿಂದೆ .15 ಇದ್ದ ಸಿಗರೆಟು ಇದೀಗ .17 ಆಗಿದೆ. ಒಂದು ಪ್ಯಾಕ್‌ ಕಿಂಗ್‌ ಹಾಗೂ ಕಿಂಗ್‌ ಲೈಟ್‌ ಈ ಹಿಂದೆ .150 ಇತ್ತು. ಇದೀಗ ಒಂದು ಪ್ಯಾಕ್‌ .15 ಹೆಚ್ಚಳವಾಗಿದೆ. ಅಂದರೆ, .165 ಮುಟ್ಟಿದೆ. ಕಳೆದೆರಡು ದಿನಗಳಿಂದ ಐಟಿಸಿ ಕಂಪನಿಯ ಸಿಗರೆಟುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಚಿಲ್ಲರೆ ಮಾರಾಟಗಾರರು ಸಿಗರೆಟಿಗಾಗಿ ಎದುರು ನೋಡುತ್ತಿದ್ದಾರೆ.

ದರ ಏರಿಕೆ ಹಿನ್ನೆಲೆಯಲ್ಲಿ ಸಿಗರೆಟುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಜೆಟ್‌ನಲ್ಲಿ ಸಿಗರೆಟ್‌ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದೇ ಸಿಗರೆಟ್‌ಗಳ ದರ ಏರಿಕೆಗೆ ಪ್ರಮುಖ ಕಾರಣ. ಇದೀಗ ಐಟಿಸಿ ಕಂಪನಿ ಮಾತ್ರ ಎರಡು ಬ್ರ್ಯಾಂಡ್‌ಗಳ ದರ ಏರಿಕೆ ಮಾಡಿದೆ. ಇದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಇತರೆ ಕಂಪನಿಗಳು ಸಿಗರೆಟ್‌ಗಳ ದರ ಏರಿಸುವ ಸಾಧ್ಯತೆಯಿದೆ.

#NewsIn100Seconds ಪ್ರಮುಖ ಹೆಡ್‌ಲೈನ್ಸ್

"

click me!