ಐಟಿ ದೈತ್ಯ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು, ತಮ್ಮ ದೀರ್ಘ ಕಾಲದ ನಂಬಿಕೆಯಾದ ಸಂಸ್ಥೆಯ ಸ್ಥಾಪಕರುಗಳ ಮಕ್ಕಳು ಅಥವಾ ಮುಂದಿನ ತಲೆಮಾರು ಯಾವುದೇ ಕಾರಣಕ್ಕೂ ಸಂಸ್ಥೆಯ ವ್ಯವಹಾರದಲ್ಲಿ ಭಾಗಿಯಾಗುವಂತಿಲ್ಲ ಎಂಬ ತಮ್ಮ ದೀರ್ಘಕಾಲದ ಚಿಂತನೆಯ ಬಗ್ಗೆ ಬೇಸರವಿದೆ ಎಂಬ ಬಗ್ಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಬೆಂಗಳೂರು: ಐಟಿ ದೈತ್ಯ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು, ತಮ್ಮ ದೀರ್ಘ ಕಾಲದ ಚಿಂತನೆಯಾಗಿದ್ದ ಸಂಸ್ಥೆಯ ಸ್ಥಾಪಕರುಗಳ ಮಕ್ಕಳು ಅಥವಾ ಮುಂದಿನ ತಲೆಮಾರು ಯಾವುದೇ ಕಾರಣಕ್ಕೂ ಸಂಸ್ಥೆಯ ವ್ಯವಹಾರದಲ್ಲಿ ಭಾಗಿಯಾಗುವಂತಿಲ್ಲ ಎಂಬ ತಮ್ಮ ದೀರ್ಘಕಾಲದ ಚಿಂತನೆಯ ಬಗ್ಗೆ ಬೇಸರವಿದೆ ಎಂಬ ಬಗ್ಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಇನ್ಫೋಸಿಸ್ ವೃತ್ತಪರತೆಯ (professionalism) ಮೇಲೆ ನಡೆಯುವ ಸಂಸ್ಥೆಯಾಗಿದ್ದು, ಸಂಸ್ಥೆಯ ಪ್ರವರ್ತಕರ ಅಥವಾ ಸಂಸ್ಥಾಪಕರ ಮಕ್ಕಳನ್ನು ಸಂಸ್ಥೆಯ ಯಾವುದೇ ನಿರ್ವಹಣಾ (management) ಹುದ್ದೆಗಳಿಂದ ದೂರ ಇಡಬೇಕು ಎಂದು ಮೂರ್ತಿ ನಂಬಿದ್ದರು. ನನ್ನ ಈ ನಿರ್ಧಾರ ಸಂಪೂರ್ಣ ತಪ್ಪಾಗಿತ್ತು. ಈ ನಂಬಿಕೆಯಿಂದಾಗಿ ಈ ಸಂಸ್ಥೆಯನ್ನು ನಾನು ಕಾನೂನುಬದ್ಧ ಪ್ರತಿಭೆಗಳಿಗೆ ಅವಕಾಶ ನೀಡದೇ ವಂಚಿಸುತ್ತಿದೆ. ಹೀಗಾಗಿ ನಾನು ಈ ನನ್ನ ಈ ನಂಬಿಕೆ ನಿರ್ಧಾರಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ಅವನು ಅಥವಾ ಅವಳು ಯಾರೇ ಆಗಿರಬಹುದು ಹುದ್ದೆಯೊಂದಕ್ಕೆ ಸಮರ್ಥರು ಎನಿಸಿದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು ಎಂದು ಇನ್ಫಿ ನಾರಾಯಣ ಮೂರ್ತಿ (Narayana Murthy) ಹೇಳಿದ್ದಾರೆ.
ಅವರು ಇನ್ಫೋಸಿಸ್ 40ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರವರ್ತರ ಪುತ್ರರು ಎಂಬ ಕಾರಣಕ್ಕೆ ಕೆಲವು ಜನರು ಯೋಗ್ಯತೆ ಇಲ್ಲದ ವ್ಯಕ್ತಿಗಳನ್ನು ಆ ಹುದ್ದೆಗೆ ತರಬಹುದು ಎಂಬ ಭಯವಿತ್ತು. ಆದರೆ ಸಂಸ್ಥೆಯ ಭವಿಷ್ಯ ಸಧೃಡವಾಗಿರಬೇಕು ಎಂದು ನಾನು ಬಯಸಿದ್ದೆ ಆ ಕಾರಣಕ್ಕೆ ಆಗ ನಾನು ಆಗ ಈ ರೀತಿಯ ಚಿಂತನೆ ನಡೆಸಿದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಸಂಸ್ಥೆಯಲ್ಲಿ ಹುದ್ದೆಯೊಂದಕ್ಕೆ ವ್ಯಕ್ತಿಯನ್ನು ಆಯ್ಕೆ ಮಾಡುವಾಗ ಬೇರೆ ಎಲ್ಲಾ ಅರ್ಹತೆಗಳಿಗಿಂತ ಮುಖ್ಯವಾಗಿ ಆತ ಹುದ್ದೆಗೆ ಅರ್ಹನಾಗಿರಬೇಕು, ಆ ಸಾಮರ್ಥ್ಯ ಹೊಂದಿರಬೇಕು ಎಂದು ಮೂರ್ತಿ ಹೇಳಿದ್ದಾರೆ.
ಸುತ್ತೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು: ಇನ್ಫೋಸಿಸ್ ನಾರಾಯಣ ಮೂರ್ತಿ
ಈ ವಿಚಾರವಾಗಿ ಇನ್ಪೋಸಿಸ್ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ (Nandan Nilekani) ಅವರನ್ನು ಪ್ರಶ್ನಿಸಿದಾಗ ಅವರು, ನಾವು ಎಂದಿಗೂ ಹಿಮ್ಮುಖ ಚಲಿಸುವ (reverse discrimination) ತಾರತಮ್ಯವನ್ನು ಅಭ್ಯಾಸ ಮಾಡಬಾರದು ಎಂದರು. ಕೋವಿಡ್ ಕಾರಣದಿಂದಾಗಿ ಇನ್ಫೋಸಿಸ್‌ನ 40ನೇ ವರ್ಷದ ಸಂಭ್ರಮಾಚರಣೆಯನ್ನು ಒಂದು ವರ್ಷದ ಕಾಲ ಮುಂದೂಡಲಾಗಿತ್ತು. ಈ ವಾರ್ಷಿಕ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರೆಲ್ಲರೂ ಜೊತೆಯಾಗಿ ವೇದಿಕೆ ಹಂಚಿಕೊಂಡು ಸಂಸ್ಥೆ ಬೆಳೆದು ಬಂದ ಹಾದಿ ತಮ್ಮ ಅನುಭವಗಳನ್ನು ಸ್ಮರಿಸುತ್ತಾರೆ.
ಇನ್‌ಫೋಸಿಸ್ ತಳಮಟ್ಟದಿಂದ ಬೆಳೆದು ಬಂದು ಇಂದು ಬೃಹದಾಕಾರವಾಗಿ ಬೆಳೆದು ನಿಂತ ಐಟಿ ಸಂಸ್ಥೆ. ನಾರಾಯಣ ಮೂರ್ತಿಯವರು ತಮ್ಮ ಪತ್ನಿ ಶ್ರೀಮತಿ ಸುಧಾಮೂರ್ತಿಯವರಿಂದ (Sudhamurthy) 10 ಸಾವಿರ ರೂಪಾಯಿ ಬಂಡವಾಳ ಸಾಲ ಪಡೆದು ಒಂದು ಬೆಡ್ ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈಗ ಈ ಸಂಸ್ಥೆ 17 ಶತಕೋಟಿ ಡಾಲರ್ ಮೊತ್ತದ ಆದಾಯದೊಂದಿಗೆ 78 ಶತಕೋಟಿ ಡಾಲರ್ ವ್ಯವಹಾರವನ್ನು ನಡೆಸುತ್ತಿದೆ.
ಯುಪಿಎ ಅವಧಿಯಲ್ಲಿ ಭಾರತ ಸ್ಥಗಿತ: ಇನ್ಫೋಸಿಸ್ ನಾರಾಯಣ ಮೂರ್ತಿ