ಕಳೆದ ಆರ್ಥಿಕ ಸಾಲಿನಲ್ಲಿ ಭಾರತದ ಸ್ಟಾರ್ಟ್ ಅಪ್ ಗಳು ಉದ್ಯೋಗಿಗಳ ವೇತನದಲ್ಲಿ ಎಷ್ಟು ಹೆಚ್ಚಳ ಮಾಡಿವೆ ಗೊತ್ತಾ?

By Suvarna News  |  First Published Aug 11, 2023, 12:17 PM IST

2022-23ನೇ ಸಾಲಿನಲ್ಲಿ ಭಾರತದ ಸ್ಟಾರ್ಟ್ ಅಪ್ ಗಳು ಉದ್ಯೋಗಿಗಳ ವೇತನದಲ್ಲಿ ಸರಾಸರಿ ಶೇ.8-10 ಹೆಚ್ಚಳ ಮಾಡಿವೆ ಎಂದು ವರದಿಯೊಂದು ತಿಳಿಸಿದೆ.


ನವದೆಹಲಿ (ಆ.11): ಭಾರತೀಯ ಸ್ಟಾರ್ಟ್ ಅಪ್ ಉದ್ಯೋಗಿಗಳು 2022-23ನೇ ಸಾಲಿನಲ್ಲಿ ಸರಾಸರಿ ಶೇ.8-10 ವೇತನ ಹೆಚ್ಚಳ ಪಡೆದಿದ್ದಾರೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ. ಗುಣಮಟ್ಟ ಹಾಗೂ ಕೌಶಲ್ಯದ ಮಟ್ಟ, ಸ್ಥಳ, ವ್ಯಕ್ತಿ ಮತ್ತು ಕಂಪನಿ ಕಾರ್ಯದಕ್ಷತೆ ಆಧರಿಸಿ ಈ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ. ವೆಂಚರ್ ಕ್ಯಾಪಿಟಲ್ ಸಂಸ್ಥೆ ಎಲೆವೇಷನ್ ಕ್ಯಾಪಿಟಲ್  ಪ್ರಕಾರ ವೇತನ ಹೆಚ್ಚಳದಲ್ಲಿ ಶೇ.50ರಷ್ಟು ಉದ್ಯೋಗಿಗಳ ಕಾರ್ಯನಿರ್ವಹಣೆಯನ್ನು ಅವಲಂಬಿಸಿದೆ. ಇದರ ಜೊತೆಗೆ ಬಡ್ತಿ ಹಾಗೂ ಹೆಚ್ಚುವರಿ ಜವಾಬ್ದಾರಿಗಳ ಪಾಲು ಸುಮಾರು ಶೇ.20ರಷ್ಟಿದೆ. ಇನ್ನು ಈ ವರಿ ಪ್ರಕಾರ ಕಂಪನಿಗಳು ಆಯಕಟ್ಟಿನ ಹುದ್ದೆ ಅಥವಾ ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಹುದ್ದೆಗಳಿಗೆ ವೇತನ ಹೆಚ್ಚಳದಲ್ಲಿ ವಿಳಂಬ ಮಾಡಿವೆ ಅಥವಾ ನಗದು ಬಡ್ತಿ ಬದಲು ಹೊಸ ಸ್ಟಾಕ್ ಅನುದಾನಗಳು ನೀಡಿವೆ ಎಂದು ಈ ವರದಿ ತಿಳಿಸಿದೆ. ಸಿಎಕ್ಸ್ ಒ ಹಾಗೂ ಕಾರ್ಯನಿರ್ವಹಣಾ ಮುಖ್ಯಸ್ಥರು ಮುಂತಾದ  ಆಯಕಟ್ಟಿನ ಹುದ್ದೆಗಳಿಗೆ ಸ್ಟಾಕ್ ಆಧಾರಿತ ಹೆಚ್ಚಳಗಳನ್ನು ಹುಡುಕೋದು ಹೆಚ್ಚು ಸೂಕ್ತವೆನಿಸುತ್ತದೆ. ಕೆಲವು ತ್ರೈಮಾಸಿಕದಲ್ಲಿ ನಗದು ಭಾಗವನ್ನು ಮರುಪರಿಶೀಲಿಸುವ ಯೋಜನೆ ಕೂಡ ನಡೆಯುತ್ತಿದೆ ಎಂದು ಈ ವರದಿ ತಿಳಿಸಿದೆ.

ಟೆಕ್ ಪರಿಣಿತರ ಲಭ್ಯತೆಯಲ್ಲಿ ಬೆಂಗಳೂರು ಹಾಗೂ ಹೈದರಾಬಾದ್ ಟಾಪ್ ಸ್ಥಾನಗಳಲ್ಲಿವೆ. ಟೆಕ್ ಪರಿಣಿತರ ಲಭ್ಯತೆಯಲ್ಲಿ ಈ ಎರಡೂ ನಗರಗಳ ಒಟ್ಟು ಪಾಲು ಶೇ.72ರಷ್ಟಿದೆ. ಆದರೆ, ನೇಮಕಾತಿ ವೆಚ್ಚ ಹಾಗೂ ಕೌಶಲ್ಯದ ಮಟ್ಟ ಮುಂತಾದ ಅಂಶಗಳನ್ನು ಸ್ಟಾರ್ಟ್ ಅಪ್ ಗಳು ಮುಖ್ಯವಾಗಿ ಗಮನಿಸಬೇಕಾಗಿದೆ. ಕಂಪನಿಗಳಿಗೆ ಪ್ರಾರಂಭಿಕ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಲ್ಲಿ ಸಿಬ್ಬಂದಿಗಳ ಮುಖ್ಯಸ್ಥರು, ಕಚೇರಿ ಸ್ಥಾಪಕರು, ಹಣಕಾಸು ಅಧಿಕಾರಿಗಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ.

Tap to resize

Latest Videos

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಗೆ ಜಾಕ್ ಪಾಟ್; 5,980 ಕೋಟಿ ರೂ. ನಿಧಿ ಸಂಗ್ರಹ

'ದೊಡ್ಡ ಸವಾಲುಗಳ ಸಂದರ್ಭದಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳು ಹಣದುಬ್ಬರ ಆಧಾರಿತ ವೇತನ ಹೆಚ್ಚಳದ ಮೂಲಕ ಕೌಶಲ್ಯ ಹೊಂದಿರುವ ಸಿಬ್ಬಂದಿಯನ್ನು ಆಕರ್ಷಿಸುವ ಹಾಗೂ ಉಳಿಸಿಕೊಳ್ಳುವ 
ಪ್ರಯತ್ನಗಳನ್ನು ನಡೆಸುತ್ತಿದೆ. ಹಾಗಿದ್ದರೂ ವ್ಯತ್ಯಾಸಗಳು ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಸ್ಟಾರ್ಟ್ ಅಪ್ ಗಳಲ್ಲಿ ತಂತ್ರಜ್ಞಾನ ವೃತ್ತಿಪರರು ಮಧ್ಯಮ ಪ್ರಮಾಣದಲ್ಲಿ ವೇತನ ಹೆಚ್ಚಳವನ್ನು ಪಡೆಯುತ್ತಿದ್ದಾರೆ' ಎಂದು ಎಲೆವೇಷನ್ ಕ್ಯಾಪಿಟಲ್ ಉಪಾಧ್ಯಕ್ಷ ಕಲ್ಲನ್ ಎಚ್. ತಿಳಿಸಿದ್ದಾರೆ.

ವರದಿ ಅನ್ವಯ ತಂತ್ರಜ್ಞಾನ ಪರಿಣತಿ ಹೊಂದಿರುವ ಉದ್ಯೋಗಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೆಯೇ ಸ್ಟಾರ್ಟ್ ಅಪ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿ ಈ ಹಿಂದೆ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರೋರಿಗೆ ಹೆಚ್ಚಿನ ಬೇಡಿಕೆಯಿದೆ. 

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚಿದೆ. ಇದರಿಂದ ಉದ್ಯೋಗಾವಕಾಶದಲ್ಲಿ ಕೂಡ ಏರಿಕೆಯಾಗಿದೆ. ಕೆಲವು ಸ್ಟಾರ್ಟ್ ಅಪ್ ಗಳು ಉತ್ತಮ ಕೌಶಲ್ಯ ಹೊಂದಿರುವ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಹೆಚ್ಚಿನ ವೇತನವನ್ನು ನೀಡುತ್ತಿವೆ ಕೂಡ. ಹಾಗೆಯೇ ಪರಿಣಿತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕೂಡ ದೊಡ್ಡ ಪ್ರಮಾಣದಲ್ಲಿ ವೇತನ ಏರಿಕೆ ಮಾಡುತ್ತಿವೆ. ಇನ್ನು ಕೇಂದ್ರ ಸರ್ಕಾರ ಕೂಡ ಮೇಕ್ ಇನ್ ಇಂಡಿಯಾ ಮುಂತಾದ ಕಾರ್ಯಕ್ರಮಗಳ ಮೂಲಕ ಸ್ಟಾರ್ಟ್ ಅಪ್ ಗಳಿಗೆ ಹೆಚ್ಚಿನ ಉತ್ತೇಜನ ಹಾಗೂ ಬಲ ತುಂಬುವ ಕೆಲಸವನ್ನು ಕೂಡ ಮಾಡುತ್ತಿದೆ. 

ಹೋಟೆಲ್ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ; ಏನಿವರ ಸಕ್ಸಸ್ ಗುಟ್ಟು?

59.80 ಕೋಟಿ ರೂ. ನಿಧಿ ಸಂಗ್ರಹಿಸಿದ ಸ್ಟಾರ್ಟ್ ಅಪ್
ಬೆಂಗಳೂರು ಮೂಲದ ಇಂಜಿನಿಯರ್ ಹಾರ್ಡ್ ವೇರ್ ಸ್ಟಾರ್ಟ್ ಅಪ್ ಎಥೆರಿಯಲ್ ಮಷಿನ್ಸ್ ಪ್ರಾರಂಭಿಕ ಹಂತದಲ್ಲಿರುವ ನವೋದ್ಯಮಗಳಿಗೆ  ಹಣಕಾಸಿನ ನೆರವು ಒದಗಿಸುವ ಕಾರ್ಯಕ್ರಮವೊಂದರಲ್ಲಿ 59.80 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ನಿಧಿ ಸಂಗ್ರಹಿಸಿದೆ. ಪ್ರಾರಂಭಿಕ ಹಂತದಲ್ಲಿರುವ ಸ್ಟಾರ್ಟ್ ಅಪ್ ಗಳ ನಿಧಿ ಸಂಗ್ರಹಕ್ಕೆ ನೆರವು ನೀಡಲು  ಪೀಕ್ ಎಕ್ಸ್ ವಿ ಪಾರ್ಟನರ್ಸ್, ಬ್ಲೂಮ್ ವೆಂಚರ್ಸ್ ಹಾಗೂ ಏಂಜೆಲ್ ಹೂಡಿಕೆದಾರರು  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  59.80 ಕೋಟಿ ರೂ. ನಿಧಿ ಸಂಗ್ರಹಿಸಿರೋದಾಗಿ ಎಥೆರಿಯಲ್ ಮಷಿನ್ಸ್  ಮಾಹಿತಿ ನೀಡಿದೆ. 

click me!