ಪ್ರತಿ ಲೀ. ಡೀಸೆಲ್‌ನಿಂದ 3 ರೂ. ನಷ್ಟ ಪೆಟ್ರೋಲ್ ಬೆಲೆ ಇಳಿಕೆ ಸದ್ಯಕ್ಕೆ ಇಲ್ಲ?

By Kannadaprabha NewsFirst Published Feb 8, 2024, 10:21 AM IST
Highlights

ಸದ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಇಳಿಕೆಯಾಗುವ ಸಾಧ್ಯತೆಗಳಿಲ್ಲ ಎಂದು ತಿಳಿದು ಬಂದಿದೆ.ರ್ಕಾರಿ ಸ್ವಾಮ್ಯದ ಪೆಟ್ರೋಲ್, ಡೀಸೆಲ್ ಮಾರಾಟ ಕಂಪನಿಗಳು 1 ಲೀ. ಡೀಸೆಲ್ ಮಾರಾಟದಿಂದ 3 ರು. ನಷ್ಟ ಅನುಭವಿಸುತ್ತಿವೆ. ಅಲ್ಲದೇ ಬೆಲೆ ಏರಿಕೆಯಿಂದ ಪೆಟ್ರೋಲ್‌ನಿಂದ ದೊರೆಯುತ್ತಿದ್ದ ಲಾಭವೂ ಸಹ ಕುಂಠಿತಗೊಂಡಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಪೆಟ್ರೋಲ್, ಡೀಸೆಲ್ ಮಾರಾಟ ಕಂಪನಿಗಳು 1 ಲೀ. ಡೀಸೆಲ್ ಮಾರಾಟದಿಂದ 3 ರು. ನಷ್ಟ ಅನುಭವಿಸುತ್ತಿವೆ. ಅಲ್ಲದೇ ಬೆಲೆ ಏರಿಕೆಯಿಂದ ಪೆಟ್ರೋಲ್‌ನಿಂದ ದೊರೆಯುತ್ತಿದ್ದ ಲಾಭವೂ ಸಹ ಕುಂಠಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸದ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಇಳಿಕೆಯಾಗುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಸಂಸ್ಥೆಗಳು ದೇಶದ ಶೇ.90ರಷ್ಟು ಇಂಧನ ಪೂರೈಕೆಯನ್ನು ನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಕಳೆದ 2 ವರ್ಷಗಳಿಂದ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಯನ್ನು ಬದಲಾವಣೆ ಮಾಡಿಲ್ಲ. ಪ್ರಸ್ತುತ ಡೀಸೆಲ್ ಮಾರಾಟದಲ್ಲಿ ಲೀಟರ್‌ಗೆ 3 ರು. ನಷ್ಟ ಅನುಭವಿಸುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ಪೆಟ್ರೋಲ್ ಮಾರಾಟದಿಂದ ಲೀಟರ್‌ಗೆ 3 ಅಥವಾ 4 ರು. ಮಾತ್ರ ಲಾಭ ದೊರೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Latest Videos

ಕಚ್ಚಾತೈಲ ಬೆಲೆ 80 ಡಾಲರ್‌ಗೆ: ಕೇಂದ್ರದಿಂದ ಶೀಘ್ರ ಇಂಧನ ದರ ಕಡಿತ ಘೋಷಣೆ?

ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ, ಬೆಲೆಯನ್ನು ಆಧರಿಸಿ ನಿರ್ಧಾರ ಕೈಗೊಳ್ಳುವಂತೆ ಕಂಪನಿಗಳಿಗೆ ಸರ್ಕಾರ ಸೂಚಿಸುವುದಿಲ್ಲ. ಈಗಲೂ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಇದೆ ಎಂದು ಕಂಪನಿಗಳು ಹೇಳುತ್ತಿವೆ ಎಂದು ಹೇಳಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೂ ಈ ಕಂಪನಿಗಳು 39 ಸಾವಿರ ಕೋಟಿ ರು. ಲಾಭ ಗಳಿಸಿದ್ದರೂ ಸಹ, ಹಿಂದಿನ ನಷ್ಟವನ್ನು ಸರಿದೂಗಿಸಿಕೊಳ್ಳುವ ಉದ್ದೇಶದಿಂದ ಬೆಲೆ ಇಳಿಕೆ ಮಾಡಿರಲಿಲ್ಲ. ಇದೀಗ ಮತ್ತೆ ನಷ್ಟವಾಗುತ್ತಿದೆ ಎಂದು ಹೇಳಿರುವುದರಿಂದ ಬೆಲೆ ಇಳಿಯುವ ಸಾಧ್ಯತೆ ಬಹಳ ದೂರವಾಗಿದೆ.

 

click me!