ಭಾರತದ ಆರ್ಥಿಕಪ್ರಗತಿಯ ದರ ವಿಶ್ವದಲ್ಲೇ ಅತೀ ವೇಗದ್ದು!

By Suvarna NewsFirst Published Nov 11, 2021, 7:43 AM IST
Highlights

* ಭಾರತವು ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ 

* ಹಣಕಾಸು ಸಚಿವಾಲಯದ ವರದಿ

* ಕೊರೋನಾ ಹೊಡೆತದಿಂದ ಆರ್ಥಿಕವಾಗಿ ಜರ್ಜರಿತವಾಗಿದ್ದ ದೇಶದ ಆರ್ಥಿಕತೆ ಹಳಿಗೆ ಬರುತ್ತಿದೆ

ನವದೆಹಲಿ(ನ.11): ಭಾರತವು (India) ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿ (Economy) ಹೊರಹೊಮ್ಮುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ (Finance Ministry) ವರದಿಯೊಂದು ಹೇಳಿದೆ. ಕೊರೋನಾ (Covid Crisis)ಹೊಡೆತದಿಂದ ಆರ್ಥಿಕವಾಗಿ ಜರ್ಜರಿತವಾಗಿದ್ದ ದೇಶದ ಆರ್ಥಿಕತೆ ಹಳಿಗೆ ಬರುತ್ತಿದೆ ಎಂಬ ಸಂದೇಶವನ್ನು ಈ ವರದಿ ರವಾನಿಸಿದೆ.

‘ಒಂದು ಕಡೆ ದೇಶದಲ್ಲಿ ಕೋವಿಡ್‌ ಲಸಿಕಾಕರಣ (vaccination) ಶರವೇಗದಲ್ಲಿ ಸಾಗಿದೆ. ಇನ್ನೊಂದು ಕಡೆ ಹಬ್ಬ ಹರಿದಿನಗಳು-ಉತ್ಸವಗಳು-ಸಭೆ ಸಮಾರಂಭಗಳು ಮತ್ತೆ ಮೊದಲಿನಂತೆ ನಡೆಯುತ್ತಿವೆ. ಇದರಿಂದಾಗಿ ಪೂರೈಕೆ ಹಾಗೂ ಬೇಡಿಕೆ ನಡುವಿನ ವ್ಯತ್ಯಾಸ ತಗ್ಗುತ್ತಿದೆ ಹಾಗೂ ಸಾಕಷ್ಟುಉದ್ಯೋಗಾವಕಾಶಗಳೂ ಲಭ್ಯವಾಗುತ್ತಿವೆ’ ಎಂದು ಸಚಿವಾಲಯ ಸಿದ್ಧಪಡಿಸಿದ ಮಾಸಿಕ ಆರ್ಥಿಕ ಪರಿಶೀಲನಾ ವರದಿ ಹೇಳಿದೆ.

‘ಭಾರತದ ಆರ್ಥಿಕ ಚೇತರಿಕೆಯಲ್ಲಿ ಆತ್ಮನಿರ್ಭರ ಭಾರತ (Atmanirbhar Bharat) ಆಂದೋಲನ ಪ್ರಮುಖ ಪಾತ್ರ ವಹಿಸುತ್ತಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಉತ್ತೇಜನಕಾರಿಯಾಗಿದೆ. ರಫ್ತು ಕೂಡ ಹೆಚ್ಚುತ್ತಿದೆ ಹಾಗೂ ಕೃಷಿ ವಲಯದ ಬೆಳವಣಿಗೆ ಚೇತೋಹಾರಿಯಾಗಿದೆ. ಇದರಿಂದಾಗಿ ವಿಶ್ವದಲ್ಲೇ ಭಾರತದ ಆರ್ಥಿಕತೆ ಅತಿ ವೇಗದಲ್ಲಿ ಬೆಳವಣಿಗೆ ಆಗುತ್ತಿದೆ’ ಎಂದು ವರದಿ ಬಣ್ಣಿಸಿದೆ.

ಈ ಹಿಂದೆ ಜನವರಿಯಲ್ಲಿ ಪ್ರಕಟವಾದ ಆರ್ಥಿಕ ಸಮೀಕ್ಷೆಯು (Economic Survey), ದೇಶದ ಜಿಡಿಪಿ 2022ರ ಮಾಚ್‌ರ್‍ ಅಂತ್ಯದ ವೇಳೆಗೆ ಶೇ.11ರಷ್ಟುಬೆಳವಣಿಗೆ ಕಾಣಬಹುದು ಎಂದು ಅಂದಾಜಿಸಿತ್ತು. ಈ ನಡುವೆ, ಅಕ್ಟೋಬರ್‌ನಲ್ಲಿ ಪ್ರಕಟವಾಗಿದ್ದ ಐಎಂಎಫ್‌ ಅಂದಾಜಿನಲ್ಲಿ ಭಾರತ ಆರ್ಥಿಕತೆ 2021ರಲ್ಲಿ ಶೇ.9.5ರಷ್ಟುಬೆಳವಣಿಗೆ ಕಾಣಲಿದ್ದು, ವಿಶ್ವದ ಇತರ ದೇಶಗಳನ್ನು ಮೀರಿಸಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ವಿತ್ತ ಸಚಿವಾಲಯ ತನ್ನ ವರದಿ ಪ್ರಕಟಿಸಿದೆ.

ಆರ್ಥಿಕ ನಿರ್ವಹಣೆ: ಭಾರತಕ್ಕೆ ಐಎಂಎಫ್‌ ಭೇಷ್‌!

ಕೋವಿಡ್‌-19ನಿಂದ(Covid 19) ಉದ್ಭವಿಸಿದ ಪರಿಸ್ಥಿತಿಗೆ ಭಾರತ ಸರ್ಕಾರವು ತೋರಿದ ಪ್ರತಿಕ್ರಿಯೆ ಅತ್ಯಂತ ತ್ವರಿತವಾಗಿತ್ತು ಹಾಗೂ ಸದೃಢವಾಗಿತ್ತು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಶಂಸಿಸಿದೆ. ಇತ್ತೀಚೆಗೆ ಭಾರತವು 2021-22ರಲ್ಲಿ ವಿಶ್ವದ ನಂ.1 ಆರ್ಥಿಕತೆಯಾಗಲಿದೆ ಎಂದು ಐಎಂಎಫ್‌ ಹೇಳಿತ್ತು. ಅದರ ಬೆನ್ನಲ್ಲೇ ಈ ಮತ್ತೊಂದು ಮೆಚ್ಚುಗೆ ಪ್ರಕಟಿಸಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಆರ್ಥಿಕತೆಯ ಮೇಲೆ ಪರಿಣಾಮ ಉಂಟಾಯಿತು. ಆದರೆ ಅತ್ಯಂತ ಸಮರ್ಥವಾಗಿ ಹಾಗೂ ಲಗುಬಗೆಯಿಂದ ಭಾರತ ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಿತು. ಆರ್ಥಿಕ ಸಂಕಟಕ್ಕೆ ಒಳಗಾದ ಜನರಿಗೆ ಹಣಕಾಸು ನೆರವು ನೀಡಿತು. ಕಠಿಣ ಆರ್ಥಿಕ ನಿಯಮಗಳನ್ನು ಸಡಿಲಗೊಳಿಸಿತು. ಸಾಲ ಸೌಲಭ್ಯ ಒದಗಿಸಿತು ಎಂದು ತನ್ನ ವರದಿಯಲ್ಲಿ ಐಎಂಎಫ್‌ ಹೇಳಿದೆ.

ಕೋವಿಡ್‌ನಿಂದ ಅರ್ಥವ್ಯವಸ್ಥೆ ಮೇಲೆ ಒಂದು ಕಡೆ ಪರಿಣಾಮ ಆಗುತ್ತಿದ್ದರೂ ಭಾರತ ಸರ್ಕಾರ ಆರ್ಥಿಕ ಸುಧಾರಣಾ ನೀತಿಗಳನ್ನು ಕೈಬಿಡಲಿಲ್ಲ. ಖಾಸಗೀಕರಣ ಹಾಗೂ ಕಾರ್ಮಿಕ ಸುಧಾರಣಾ ನೀತಿಗಳನ್ನು ಮುಂದುವರಿಸಿತು ಎಂದು ಅದು ಮೆಚ್ಚುಗೆ ಪ್ರಕಟಿಸಿದೆ.

ಇದೇ ವೇಳೆ, ಆರ್ಥಿಕತೆ ಮೇಲೆ ಕೊರೋನಾ ಪರಿಣಾಮ ಬೀರಿದ್ದರೂ, ಅಂದುಕೊಂಡಿದ್ದಕ್ಕಿಂತ ಅತ್ಯಂತ ಬೇಗ ಚೇತರಿಕೆ ಆಗಲಿದೆ ಎಂದಿದೆ.

ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವ ನಂ.1

ಕೊರೋನಾದಿಂದ(Coronavirus) ದೇಶದ ಆರ್ಥಿಕತೆಗೆ(Economy) ಭಾರಿ ಹೊಡೆತ ಬಿದ್ದಿದ್ದರೂ, ಭಾರತವು 2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವೇಗದಿಂದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎನ್ನಿಸಿಕೊಳ್ಳಲಿದೆ. ಭಾರತದIndia) ಜಿಡಿಪಿ(GDP) ಬೆಳವಣಿಗೆ ದರ 2021ರಲ್ಲಿ ಶೇ.9.5 ಹಾಗೂ 2022ರಲ್ಲಿ ಶೇ.8.5 ಇರಲಿದೆ. ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಭಾರತ ಮೀರಿಸಲಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ (IMF) ಹೇಳಿದೆ.

ತನ್ನ ಆರ್ಥಿಕ ಅಭಿವೃದ್ಧಿ(Economic Development) ಮುನ್ನೋಟದಲ್ಲಿ ಈ ಮಾಹಿತಿಯನ್ನು ಅದು ದಾಖಲಿಸಿದೆ. ‘ಭಾರತವು ಕೊರೋನಾ 2ನೇ ಅಲೆಯ(Second Wave Of Covid 19) ಹಿನ್ನಡೆಯಿಂದ ಹೊರಬಂದಿದೆ’ ಎಂದು ಐಎಂಎಫ್‌ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌Gita Gopinath) ಶಹಬ್ಬಾಸ್‌ಗಿರಿ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ(BJP) ಈ ವರದಿಯನ್ನು ಸ್ವಾಗತಿಸಿದ್ದು, ‘ನರೇಂದ್ರ ಮೋದಿ(Narendra Modi) ಸರ್ಕಾರವು ಹಾಕಿದ ಸುಭದ್ರ ಆರ್ಥಿಕ ಅಡಿಪಾಯದ ಪರಿಣಾಮ ಈಗ ಕಾಣುತ್ತಿದೆ’ ಎಂದು ಹರ್ಷಿಸಿದೆ. ಭಾರತದ ಆರ್ಥಿಕತೆಯು ಇತ್ತೀಚೆಗೆ ಕೊರೋನಾ ಹೊಡೆತಕ್ಕೆ ಸಿಲುಕಿ ಶೇ.7.3ರಷ್ಟುಸಂಕುಚಿತ ಆಗಿದ್ದು ಇಲ್ಲಿ ಗಮನಾರ್ಹ.

click me!