India GDP ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ!

By Suvarna News  |  First Published May 31, 2022, 8:48 PM IST
  • ಚೀನಾ, ಅಮೆರಿಕ, ಲಂಡನ್ ಹಿಂದಿಕ್ಕಿದ ಭಾರತ
  • ಭಾರತದ ಜಿಡಿಪಿ ಬೆಳವಣಿಗೆ ದರ ಶೇಕಡಾ 8.7
  • ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 4.1 ಕ್ಕೆ ಏರಿಕೆ

ನವದೆಹಲಿ(ಮೇ.31): ಕೊರೋನಾ ಬಳಿಕ ಭಾರತದ ಆರ್ಥಿಕತೆ ಇತರ ಎಲ್ಲಾ ದೇಶಗಳಿಗಿಂತ ಜಾಗತಿಕ ಮಟ್ಟದಲ್ಲಿ ತೆರೆದುಕೊಂಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಶಗಳು ಈ ಮಾತನ್ನು ಪುಷ್ಠೀಕರಿಸುತ್ತಿದೆ. ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಭಾರತದ ವಾರ್ಷಿಕ ಜಿಡಿಪಿ ದರ ಶೇಕಡಾ 8.7ಕ್ಕೆ ಏರಿಕೆಯಾಗಿದೆ. ಇದು ಚೀನಾ, ಅಮೆರಿಕಾ ಹಾಗೂ ಲಂಡನ್‌ಗಿಂತಲೂ ಅಧಿಕವಾಗಿದೆ. ಭಾರತದ 2021-22ರ ವಾರ್ಷಿಕ ಜಿಡಿಪಿ ದರ  ಶೇಕಡಾ 8.7ಕ್ಕೆ ಏರಿಕೆಯಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಚೀನಾ ವಾರ್ಷಿಕ ಜಿಡಿಪಿ ಶೇಕಡಾ 8.1. ಲಂಡನ್ ವಾರ್ಷಿಕ ಜಿಡಿಪಿ ದರ ಶೇಕಡಾ 7.4. ಇನ್ನು ಅಮೆರಿಕ ವಾರ್ಷಿಕ ಜಿಡಿಪಿ ದರ ಶೇಕಡಾ 5.7. 

Tap to resize

Latest Videos

Karnataka GDP: ಕೊರೋನಾ ವೇಳೆ ಕರ್ನಾಟಕದ ಜಿಡಿಪಿ ದಾಖಲೆ: ದೇಶದಲ್ಲೇ ನಂ.1 ಸ್ಥಾನ

ಕಳೆದ ವರ್ಷ ಭಾರತದ ಜಿಡಿಪಿ ದರ ಶೇಕಡಾ 6.6 ರಷ್ಟು ವೃದ್ಧಿಯಾಗಿತ್ತು. ಕೊರೋನಾದಿಂದ ಚೇತರಿಸಿಕೊಂಡ ಭಾರತ ಇದೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. 2021-22ರ ಜನವರಿ-ಮಾರ್ಚ್ ತಿಂಗಳ 4ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 4.1 ರಷ್ಟು ವೃದ್ಧಿಯಾಗಿದೆ. 

 

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ
ಭಾರತದ ಜಿಡಿಪಿ ಬೆಳವಣಿಗೆ ಶೇಕಡಾ 8.7, ಚೀನಾ, ಲಂಡನ್, ಅಮೆರಿಕ ಜಿಡಿಪಿ ಹಿಂದಿಕ್ಕಿ ಅತೀ ವೇಗವವಾಗಿ ಮುನ್ನಗ್ಗುತ್ತಿರುವ ಭಾರತ pic.twitter.com/qCnBbtEBGy

— Asianet Suvarna News (@AsianetNewsSN)

 

2020-21ರ ಅವಧಿಯಲ್ಲಿ ಶೇಕಡ 6.6 ರಷ್ಟು ಸಂಕುಚಿತಗೊಂಡಿತ್ತು. ಆದರೆ 2021-22ರ ಅವಧಿಯಲ್ಲಿ ಜಿಡಿಪಿ ದರ ಶೇಕಡಾ 8.7ರಷ್ಟು ಜಿಗಿತ ಕಂಡಿದೆ ಎಂದು NSO ಬಿಡುಗಡೆ ಮಾಡಿರುವ ಅಂಕಿ ಅಂಶಗಳ ವರದಿಯಲ್ಲಿ ಹೇಳಿದೆ. GDP ಬೆಳವಣಿಗೆಯ ಅಂದಾಜು ಎರಡನೇ ಮುಂಗಡ ಅಂದಾಜಿನ 8.9 ಶೇಕಡಾಕ್ಕಿಂತ ಕಡಿಮೆಯಾಗಿದೆ (ಫೆಬ್ರವರಿ 28 ರಂದು ಬಿಡುಗಡೆ ವರದಿ)  ಭಾರತೀಯ ರಿಸರ್ವ್ ಬ್ಯಾಂಕ್ (RBI) 2022-23 ಕ್ಕೆ ಭಾರತದ GDP ಬೆಳವಣಿಗೆ ದರವು 7.2 ಶೇಕಡಾ ಎಂದು ಅಂದಾಜಿಸಿದೆ.

ಡ್ರ್ಯಾಗನ್ ಮೀರಿಸಿದ ಭಾರತ, ಭಾರತದ ಜಿಡಿಪಿ ಚೀನಾಗಿಂತ ದುಪ್ಪಟ್ಟು!

ಆರ್ಥಿಕ ಪ್ರಗತಿ: ವಿಶ್ವದಲ್ಲೇ ಭಾರತ ನಂ.1; ವಿಶ್ವಸಂಸ್ಥೆ ವರದಿ
ಉಕ್ರೇನ್‌-ರಷ್ಯಾ ನಡುವಿನ ಯುದ್ಧ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದರೂ ಭಾರತ ವಿಶ್ವದಲ್ಲೇ ಅತಿ ವೇಗದ ಆರ್ಥಿಕ ಪ್ರಗತಿ ಕಾಣಲಿರುವ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 2022ನೇ ಸಾಲಿನಲ್ಲಿ ಭಾರತ ಶೇ.6.4ರ ದರದಲ್ಲಿ ಪ್ರಗತಿ ಕಾಣಲಿದೆ ಎಂದು ಅದು ತಿಳಿಸಿದೆ.

ಬುಧವಾರ ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ‘ವಿಶ್ವ ಆರ್ಥಿಕ ಪರಿಸ್ಥಿತಿ ಹಾಗೂ ಮುನ್ನೋಟ’ ಎಂಬ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ 2022ರಲ್ಲಿ ವಿಶ್ವವು ಕೇವಲ ಶೇ.3.1ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಜನವರಿಯಲ್ಲಿ ವಿಶ್ವವು ಶೇ.4ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ವರದಿ ಅಂದಾಜಿಸಲಾಗಿತ್ತು.

ಭಾರತವು ಈ ಮುನ್ನ ಶೇ.8.8ರ ಬೆಳವಣಿಗೆ ದರ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಪ್ರಗತಿ ದರದ ಅಂದಾಜು ಶೇ.6.4ಕ್ಕೆ ಇಳಿದರೂ ಇಷ್ಟುವೇಗದ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಏಕೈಕ ದೇಶವಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಈ ನಡುವೆ 2023ನೇ ಸಾಲಿನಲ್ಲಿ ಭಾರತ ಶೇ.6ರ ದರದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅದು ಅಂದಾಜಿಸಿದೆ.

ಭಾರತದ ಬಗ್ಗೆ ಪ್ರಶಂಸೆ:
ಈ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ಮುಖ್ಯಸ್ಥ ಹಮೀದ್‌ ರಷೀದ್‌, ‘ಪೂರ್ವ ಏಷ್ಯಾ ಹಾಗೂ ದಕ್ಷಿಣ ಏಷ್ಯಾ ಹೊರತುಪಡಿಸಿ ಮಿಕ್ಕೆಲ್ಲ ವಿಶ್ವವು ಹಣದುಬ್ಬರದಿಂದ ದುಷ್ಪರಿಣಾಮ ಎದುರಿಸುತ್ತಿವೆ. ಆದರೆ ಭಾರತದ ಮೇಲೆ ಹಣದುಬ್ಬರದ ಪ್ರಭಾವ ಕಡಿಮೆ ಇದ್ದು, ಇದ್ದುದಲ್ಲೇ ಉತ್ತಮ ಸ್ಥಾನದಲ್ಲಿದೆ. ಇನ್ನೂ 1-2 ವರ್ಷ ಭಾರತದ ಆರ್ಥಿಕತೆ ಬಲಿಷ್ಠವಾಗಿಯೇ ಮುಂದುವರಿಯಲಿದೆ. ಆದಾಗ್ಯೂ ವಿದೇಶಿ ಪರಿಣಾಮಗಳಿಂದ ಅಪಾಯ ಇದ್ದೇ ಇದೆ’ ಎಂದರು.

click me!