ಗಂಟೇಲಿ ಆಗ್ಬೇಕು ನಗದು ರಹಿತ ಕ್ಲೈಮ್‌.. ಆರೋಗ್ಯ ವಿಮೆದಾರರಿಗೆ ನೆಮ್ಮದಿ ಸುದ್ದಿ ನೀಡಿದ ಐಆರ್ ಡಿಎಐ

Published : May 30, 2024, 05:12 PM IST
ಗಂಟೇಲಿ ಆಗ್ಬೇಕು ನಗದು ರಹಿತ ಕ್ಲೈಮ್‌.. ಆರೋಗ್ಯ ವಿಮೆದಾರರಿಗೆ ನೆಮ್ಮದಿ ಸುದ್ದಿ ನೀಡಿದ ಐಆರ್ ಡಿಎಐ

ಸಾರಾಂಶ

ಐಆರ್ ಡಿಎಐ ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಮಾಸ್ಟರ್ ಸುತ್ತೋಲೆಯನ್ನು ಹೊರಡಿಸಿದೆ. ಇದರಲ್ಲಿ ಪಾಲಿಸಿದಾರರ ಹಿತಾಸಕ್ತಿ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಶೇ.100ರಷ್ಟು ನಗದು ರಹಿತ ಕ್ಲೇಮ್‌ಗಳಿಗೆ ಪ್ರಯತ್ನಿಸಿ, 1 ಗಂಟೆಯೊಳಗೆ ಇದನ್ನು ಇತ್ಯರ್ಥಗೊಳಿಸಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.   

ಕೊರೊನಾ ನಂತ್ರ ಆರೋಗ್ಯ ವಿಮೆ ಮಹತ್ವ ಜನರಿಗೆ ಅರ್ಥವಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಜನರಿಗೆ ಅನುಕೂಲವಾಗಲು ವಿಮೆ ಸಂಸ್ಥೆಗಳು ಕೂಡ ಸಾಕಷ್ಟು ಹೊಸ ಹೊಸ ಸೌಲಭ್ಯಗಳನ್ನು ಜಾರಿಗೆ ತಂದಿವೆ. ವಿಮಾ ನಿಯಂತ್ರಕ ಐಆರ್ ಡಿಎಐ ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಮಾಸ್ಟರ್ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ, ಗ್ರಾಹಕರಿಗೆ ಉತ್ತಮ ಪರಿಹಾರ ನೀಡಲಾಗಿದೆ. ನಗದು ರಹಿತ ಚಿಕಿತ್ಸೆಗೆ ಸಂಬಂಧಿಸಿದಂತೆ 1 ಗಂಟೆಯೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಮಾ ಕಂಪನಿಗಳಿಗೆ ಐಆರ್‌ಡಿಎ ಸೂಚನೆ ನೀಡಿದೆ. ಅಲ್ಲದೆ, ವಿಮಾ ಕಂಪನಿಗಳು ಡಿಸ್ಚಾರ್ಜ್ ವಿನಂತಿಯನ್ನು ಸ್ವೀಕರಿಸಿದ 3 ಗಂಟೆಗಳ ಒಳಗೆ ಅನುಮೋದನೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಐಆರ್ ಡಿಎಐ ಹೇಳಿದೆ.

ಐಆರ್ ಡಿಎ ಸುತ್ತೋಲೆ ಪ್ರಕಾರ, ಯಾವುದೇ ಸಂದರ್ಭದಲ್ಲಿ ಪಾಲಿಸಿದಾರ (Policy Holder) ರನ್ನು ಡಿಸ್ಚಾರ್ಜ್ ಮಾಡಲು ವಿಳಂಬ ಮಾಡಿ ಅವರು ಆಸ್ಪತ್ರೆ (Hospital) ಯಲ್ಲಿ ಕಾಯುವಂತೆ ಮಾಡಬಾರದು. ಕಂಪನಿಗಳು 3 ಗಂಟೆಗಳ ಒಳಗೆ ಅನುಮೋದನೆ ನೀಡಬೇಕಾಗುತ್ತದೆ. ಇದಕ್ಕಿಂತ ಹೆಚ್ಚು ವಿಳಂಬವಾದರೆ ಹೆಚ್ಚುವರಿ ವೆಚ್ಚವನ್ನು ವಿಮಾ (Insurance) ಕಂಪನಿ ಭರಿಸಬೇಕಾಗುತ್ತದೆ ಎಂದು ಐಆರ್ ಡಿಎಐ ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ಬೆಂಗಳೂರಿನಲ್ಲಿ ಅತ್ಯಾಧುನಿಕ ಪಿಸಿಬಿ ಯುನಿಟ್‌ನಿಂದ ಉದ್ಯಮ ವಿಸ್ತರಿಸಿದ ಬಿಪಿಎಲ್‌ ಲಿಮಿಟೆಟ್

ಸಾವಿನ ಸಂದರ್ಭದಲ್ಲಿ ಅತೀ ಬೇಗ ದಾಖಲೆ ಪೂರ್ಣಗೊಳ್ಳಬೇಕು : ಪಾಲಿಸಿದಾರ ಮರಣ ಹೊಂದಿದ ಸಂದರ್ಭದಲ್ಲಿ ಆದಷ್ಟು ಬೇಗ ದಾಖಲೆಗಳನ್ನು ಪೂರ್ಣಗೊಳಿಸಿ, ಕ್ಲೈಮ್ ಹಣ ನೀಡಿ, ಕುಟುಂಬಸ್ಥರಿಗೆ ಬೇಗ ಶವ ಸಿಗುವಂತೆ ಮಾಡ್ಬೇಕೆಂದು ಐಆರ್ ಡಿಎಐ ಸೂಚನೆ ನೀಡಿದೆ. ಎಲ್ಲ ಕಂಪನಿಗಳು ಶೇಕಡಾ 100 ರಷ್ಟು ನಗದು ರಹಿತ ಕ್ಲೈಮ್ ಇತ್ಯರ್ಥದ ಗುರಿಯನ್ನು ಸಾಧಿಸಲು ಸಾಧ್ಯವಾದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು. ವಿಮಾ ಕಂಪನಿಗಳಿಗೆ ಈ ನಿಯಮಗಳನ್ನು ಜಾರಿಗೆ ತರಲು ಐಆರ್ ಡಿಎ (IRDA) ಜುಲೈ 31, 2024 ರ ಗಡುವನ್ನು ನಿಗದಿಪಡಿಸಿದೆ.  

ಸುತ್ತೋಲೆಯಲ್ಲಿ ಪಾಲಿಸಿದಾರರ ಹಿತಾಸಕ್ತಿಗಳಿಗೆ ವಿಶೇಷ ಗಮನವನ್ನು ನೀಡಲಾಗಿದೆ. ಸುತ್ತೋಲೆಯ ಅಡಿಯಲ್ಲಿ, ಪಾಲಿಸಿದಾರರು ಇಡೀ ವರ್ಷ ಯಾವುದೇ ಮೆಡಿಕ್ಲೈಮ್ ತೆಗೆದುಕೊಳ್ಳದಿದ್ದರೆ, ವಿಮಾ ಕಂಪನಿಯು ಅವರಿಗೆ ನೋ ಕ್ಲೈಮ್ ಬೋನಸ್ ನೀಡಬಹುದು. ನೋ ಕ್ಲೈಮ್ ಬೋನಸ್ ರೂಪದಲ್ಲಿ ಆರೋಗ್ಯ ವಿಮಾ ಕಂಪನಿಯು ವಿಮಾ ಮೊತ್ತವನ್ನು ಏರಿಸಬಹುದು ಇಲ್ಲವೆ ಪ್ರೀಮಿಯಂನಲ್ಲಿ ರಿಯಾಯಿತಿ ನೀಡಬೇಕು. ಇದರಲ್ಲಿ ಟೈಮ್ ಬೌಂಡ್ ಶೇಕಡಾ 100 ನಗದು ರಹಿತ ಕ್ಲೈಮ್ ನೀಡಲಾಗುವುದು ಎಂದು ಹೇಳಲಾಗಿದೆ

ಪಾಲಿಸಿದಾರನು ತನ್ನ ಆರೋಗ್ಯ ವಿಮಾ ಪಾಲಿಸಿಯನ್ನು ರದ್ದುಗೊಳಿಸಿದರೆ, ವಿಮಾ ಕಂಪನಿಯು ಅವಧಿ ಮೀರಿದ ಪಾಲಿಸಿ ಅವಧಿಯ ಪ್ರೀಮಿಯಂ ಅನ್ನು ಮರುಪಾವತಿ ಮಾಡಬೇಕು. ವಿಮಾ ಕಂಪನಿಯು ಕಳೆದ ವರ್ಷ ಕ್ಲೈಮ್ ತೆಗೆದುಕೊಂಡಿದೆ ಎಂದು ಹೇಳಿ ಪಾಲಿಸಿಯನ್ನು ನವೀಕರಿಸಲು ನಿರಾಕರಿಸುವಂತಿಲ್ಲ. ಪಾಲಿಸಿದಾರರು ವಿಮಾ ಮೊತ್ತವನ್ನು ಹೆಚ್ಚಿಸದಿದ್ದಲ್ಲಿ ಆರೋಗ್ಯ ವಿಮಾ ಕಂಪನಿಯು ಪಾಲಿಸಿಯನ್ನು ನವೀಕರಿಸುವಾಗ ಹೊಸದಾಗಿ ಅಂಡರ್‌ರೈಟಿಂಗ್ ಮಾಡುವುದಿಲ್ಲ.

ಪಾಲಿಸಿದಾರನ ಬಳಿ ನಾಲ್ಕೈದು ವಿಮೆ ಇದ್ರೆ, ಯಾವುದನ್ನು ಕ್ಲೈಮ್ ಮಾಡ್ಬೇಕು ಎಂಬುದು ಆತನ ಆಯ್ಕೆಯಾಗಿರುತ್ತದೆ. ಪಾಲಿಸಿದಾರ ಕ್ಲೈಮ್ ಸಲ್ಲಿಸುವ ಆರೋಗ್ಯ ವಿಮಾ ಕಂಪನಿಯು ಇತರ ಆರೋಗ್ಯ ವಿಮಾ ಕಂಪನಿಗಳೊಂದಿಗೆ ಪಾಲಿಸಿದಾರರ ಕ್ಲೈಮ್ ಅನ್ನು ಇತ್ಯರ್ಥಗೊಳಿಸಬೇಕು. ಇದನ್ನು ಪಾಲಿಸಿದಾರ ಮಾಡುವಂತಿಲ್ಲ.

ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ ಮಾಡಲು ಇನ್ನೆರಡೇ ದಿನ ಬಾಕಿ; ಇಲ್ಲದಿದ್ದರೆ ಏನಾಗುತ್ತೆ ಗೊತ್ತಾ?

ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವಾಗ, ವೈದ್ಯಕೀಯ ಸ್ಥಿತಿಗೆ ಅನುಗುಣವಾಗಿ ಗ್ರಾಹಕ ತನ್ನ ಉತ್ಪನ್ನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ  ವಿಮಾ ಕಂಪನಿಯು ಗ್ರಾಹಕರಿಗೆ ಮಾಹಿತಿ ದಾಖಲೆ ನೀಡುತ್ತದೆ. ಅದರಲ್ಲಿ ಪಾಲಿಸಿಯನ್ನು ಸ್ಪಷ್ಟವಾದ ಪದಗಳಲ್ಲಿ ವಿವರಿಸಬೇಕಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!