ಇದ್ದಕ್ಕಿದ್ದಂತೆ ಚಿನ್ನದ ದರ ಭಾರೀ ಏರಿಕೆ ಹಿಂದಿದೆ ‘ಆ’ ಕೈವಾಡ

By Suvarna NewsFirst Published Feb 24, 2020, 5:43 PM IST
Highlights

ಏರಿಕೆಯ ಹಾದಿ ಹಿಡಿದ ಚಿನ್ನದ ದರ/ 1 ಗ್ರಾಂಗೆ 4500 ಸಾವಿರ ರೂ. ಸಮೀಪ/ ಹಬ್ಬದ ಸೀಸನ್, ಮದುವೆಯ ಸೀಸನ್ ಪರಿಣಾಮ/ ಎಲ್ಲ ಮಹಾನಗರಗಳಿಂದಲೂ ಒಂದೇ ವಾರ್ತೆ

ಬೆಂಗಳೂರು[ಫೆ. 24]  ಒಂದು ಕಡೆ ಹಬ್ಬ ಮತ್ತು ಮದುವೆ ಸೀಸನ್ ಶುರುವಾಗಿದ್ದು ಚಿನ್ನದ ದರ ಏರಿಕೆಗೂ ವೇಗ ತಾಗಿದೆ.   ಆಭರಣ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಸಿಗುತ್ತಲೇ ಇದೆ. ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕೊರೋನಾ ವೈರಸ್ ಭೀತಿಯೂ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಚಿನ್ನ ಚಿನ್ನ ಎನ್ನುವವರು ಮತ್ತೆ ಮತ್ತೆ ಆಲೋಚನೆ ಮಾಡಲೇಬೇಕಾಗಿದೆ. 1 ಗ್ರಾಂ ಚಿನ್ನ 4,500 ರೂ ಸಾವಿರ ರೂ. ಗಡಿದಾಟುತ್ತಾ  ಎನ್ನುವ ಅನುಮಾನ ಶುರುವಾಗಿದೆ.  ಬೆಂಗಳೂರಿನಲ್ಲಿ 22 ಕ್ಯಾರಟ್ ನ 1 ಗ್ರಾಂ ಚಿನ್ನಕ್ಕೆ 4051 ರೂ ನೀಡಬೇಕಾದರೆ 24 ಕ್ಯಾರೆಟ್ ನ  ಗ್ರಾಂ ಚಿನ್ನಕ್ಕೆ 4360 ರೂ. ನೀಡಬೇಕಾದ ಸ್ಥಿತಿ ಇದೆ.

3000 ಟನ್ ಚಿನ್ನ ಸಿಕ್ಕಿದ್ದು ನಿಜಾನಾ? ಉತ್ತರ ಪ್ರದೇಶದ ಕತೆ ಏನು?

ಫೆ.20ರಂದು ಒಂದು ಗ್ರಾಂ ಚಿನ್ನಕ್ಕೆ 3812 ರೂ .ಇದ್ದ ಬೆಲೆ ದಿಢೀರ್  ಏರಿಕೆ ಕಂಡಿತು.  ದೆಹಲಿಯಲ್ಲಿ 22 ಕ್ಯಾರೆಟ್ ನ  ಒಂದು ಗ್ರಾಂ ಚಿನ್ನದ ಬೆಲೆ 4,162 ರೂ. ತಲುಪಿದೆ.  24 ಕ್ಯಾರೆಟ್ ನ 1 ಗ್ರಾಂ ಚಿನ್ನಕ್ಕೆ4282 ರೂ. ಆಗಿದೆ ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 4,152 ರೂ‌‌ ಏರಿಕೆ.. 24 ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 4.252 ರೂ. ಆಗಿದೆ. ಇದೇ ರೀತಿ ಕೆಜಿ ಬೆಳ್ಳಿ ಬೆಲೆ ಸಹ 50 ಸಾವಿರದ ಗಡಿ ದಾಟಿದ್ದು, 51,000 ರೂ ದಾಖಲಾಗಿದೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಇಂದು 10 ಗ್ರಾಂ ಆಭರಣದ ಬೆಲೆ 10 ರೂ. ಏರಿಕೆಯಾಗಿ 41,570 ರೂಪಾಯಿ ಮತ್ತು ಬೆಳ್ಳಿ ದರ 51,000 ರೂಪಾಯಿ ಇದೆ.ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 10 ರೂ ಏರಿಕೆಯಾಗಿ 40,740 ರೂ ದಾಖಲಾಗಿದ್ದರೆ ಒಂದು ಕೆ.ಜಿ. ಬೆಳ್ಳಿ ದರ 51,000 ರೂಪಾಯಿ ಇದೆ.

click me!
Last Updated Feb 24, 2020, 6:15 PM IST
click me!