ದೆಹಲಿಗೆ ಹೋಗದೆ ನೀವಿರೋ ಊರಿನಿಂದಲೇ ದೆಹಲಿಯ ಅಂಗಡಿಗಳಿಗೆ ಭೇಟಿ ನೀಡಬಹುದು. ಅಲ್ಲಿನ ವಿಶೇಷ, ತಿನಿಸು, ವಸ್ತುಗಳನ್ನು ಖರೀದಿಸಬಹುದು. ಅದು ಹೇಗೆ ಅಂತೀರಾ? ಇಂಥದೊಂದು ಸಾಧ್ಯತೆಯನ್ನು ಕೇಜ್ರಿವಾಲ್ ಇ-ಕಾಮರ್ಸ್ ತಾಣದ ಮೂಲಕ ಒದಗಿಸಿಕೊಡಲು ಹೊರಟ್ಟಿದ್ದಾರೆ.
-ಡೆಲ್ಲಿ ಮಂಜು, ದೆಹಲಿ ಪ್ರತಿನಿಧಿ
ನವದೆಹಲಿ (ಡಿ.6): ದಿಲ್ಲಿ ಬಜಾರ್..! ಡೆಲ್ಲಿಯ(Delhi) ಹೊಸ ಬಜಾರ್ ಇದು. ಹಾಗಂತ ಡೆಲ್ಲಿಯಲ್ಲಿ ಇಳಿದ ಕೂಡಲೇ ಹೊಸ ಬಜಾರ್ ನಲ್ಲಿ ಒಂದು ಲುಕ್ ಹಾಕೋಣ ಅಂಥ ತೀರ್ಮಾನ ಮಾಡಬೇಡಿ. ಇದು ಸಿಗೋದು ಇ-ಪೋಟ೯ಲ್ ನಲ್ಲಿ(e-portal) ಮಾತ್ರ ಅಂದರೆ ಇ- ಸಂತೆ! ಅಯ್ಯೋ ಇದ್ರಲ್ಲಿ ವಿಶೇಷ ಏನಪ್ಪ? ಗೂಗಲ್ ಜೀ ಗೆ ಕೇಳಿದರೆ ಅರೆಕ್ಷಣದಲ್ಲಿ, ಜೆಸ್ಟ್ ಒಂದು ಟಚ್ ನಲ್ಲಿ (touch) ದುನಿಯಾದಲ್ಲಿರೋ ಎಲ್ಲಾ ಮಾರ್ಕೆಟ್ ಗಳನ್ನು ಜಾಲಾಡಿ, ಸಚ್೯(Search) ಮಾಡಿಕೊಟ್ಟು ಕೇಳಿದ್ದು ತೋರಿಸುತ್ತೆ. ದೆಹಲಿಯದ್ದೇ ಏನು ಸ್ಪೆಷಲ್? ಈ ಪ್ರಶ್ನೆ ಕಾಡಿದರೂ ಕೂಡ ಆಶ್ಚರ್ಯ ಇಲ್ಲ. ಇ-ಕಾರ್ಮಸ್ (e-commerce)ಅಥವಾ ಇ- ಪೋರ್ಟಲ್ ಗಳು (e-portals) ಸಾಮಾನ್ಯಕ್ಕೆ ಖಾಸಗಿ ಮಹಾರಾಜರ ಸ್ವತ್ತು ಆಗಿರುತ್ತವೆ. ಅಂತರ್ಜಾಲ ಆಟದಲ್ಲಿ ಗ್ರಾಹಕರನ್ನು ಆಕರ್ಷಿಸಿ,ಬೇಕಾಗಿದ್ದನ್ನು ಮನೆಗೆ ಕಳುಹಿಸುವ ಪ್ರಯತ್ನವೂ ಹೌದು.
ಇದು ಕೇವಲ ಖಾಸಗಿಗೆ ಮಾತ್ರ ಏಕೆ ಸಿಮೀತವಾಗಿರಬೇಕು ? ಅನ್ನೋ ಇ- ಪ್ರಶ್ನೆಗೆ ಡೆಲ್ಲಿಯ ಕೇಜ್ರಿವಾಲ್ ಸರ್ಕಾರ ಉತ್ತರ ಹುಡುಕಿದೆ. ಜಗತ್ತಿನ ಜನರಿಗಾಗಿ, ಡೆಲ್ಲಿ ಜನರಿಂದ (For world people,from Delhi people) ಅನ್ನೋ ಸ್ಲೋಗನ್ ಗೆ ಹೊಸ ಆಯಾಮದ ಟಚ್ ನೀಡಿದೆ. ಜೊತೆ ಈ ಪರಿಕಲ್ಪನೆ ಗೆ ಇ-ಟಚ್ (e-touch)ಕೊಟ್ಟರೆ ಸರ್ಕಾರಕ್ಕೂ ಆದಾಯ ಅನ್ನೋದು ಆಪ್ ಸರ್ಕಾರದ ಯೋಚನೆ ಹಾಗೂ ಯೋಜನೆ.
ಏ.1ರಿಂದ ಟೋಬಿ ಕ್ಸು ನೂತನ ಮುಖ್ಯ ಹಣಕಾಸು ಅಧಿಕಾರಿ
ದೀಪಾವಳಿ ಹೊತ್ತಲ್ಲಿ ಹುಟ್ಟಿದ ಯೋಚನೆ
ದೀಪಾವಳಿ ಹೊತ್ತಲ್ಲಿ ಈ ಐಡಿಯಾ ಹುಟ್ಟಿದ್ದು, ಮೊದಲ ಭಾಗಿವಾಗಿ ಡೆಲ್ಲಿಯ ವ್ಯಾಪಾರಿಗಳನ್ನು ಮೊನ್ನೆ ಒಟ್ಟು ಹಾಕಿದೆ ಕೇಜ್ರಿವಾಲ್ ಸರ್ಕಾರ. ಡೆಲ್ಲಿಯ ವ್ಯಾಪಾರಿಗಳು, ಉದ್ಯಮಿಗಳು ಹಾಗು ವೃತ್ತಿ ಪರಿಣಿತರನ್ನು ಈ ವರ್ಚುವಲ್(Vertual) ವೇದಿಕೆಗೆ ತಂದು ಮಾತುಕತೆ ನಡೆಸಿದೆ. ಬಿ ಟು ಸಿ -ಅಂದರೆ ಬಿಜಿನೆಸ್ ಟು ಕನ್ಸೂಮರ್ (business to consumer),ಬಿ ಟು ಬಿ- ಬಿಜಿನೆಸ್ ಟು ಬಿಜಿನೆಸ್ (business to business) ಜೊತೆಗೆ ವರ್ಚುವಲ್ ಮೇಳಗಳನ್ನು ಕೂಡ ಇ-ವೇದಿಕೆಯ ಮೂಲಕ ಆಯೋಜಿಸುವ ಇರಾದೆ ಡೆಲ್ಲಿ ಸರ್ಕಾರದ್ದಾಗಿದೆ.
ಆಗಸ್ಟ್ ನಲ್ಲಿ ಚಾಲನೆ ಸಿಗೋ ಸಾಧ್ಯತೆ
ಈ ಕುರಿತು ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ಇ-ಯೋಜನೆ ಸಿದ್ದತೆ ನಡೆಯುತ್ತಿದೆ. ಆಗಸ್ಟ್-2022ಕ್ಕೆ ಚಾಲನೆ ನೀಡುವ ಉದ್ದೇಶ ಇದೆ. ದೆಹಲಿ ತನ್ನದ್ದೇ ಒಂದು ಸ್ವಂತ ಇ ಮಾರ್ಕೆಟ್ ಹೊಂದಲಿದೆ. ಚಿಕ್ಕ, ದೊಡ್ಡ ಎಲ್ಲಾ ಉದ್ಯಮಿದಾರರು ಇ-ಕಾರ್ಮಸ್ ಸ್ಟೋರ್ ಹೊಂದಬಹುದಾಗಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಅಮೆರಿಕಾದಲ್ಲಿ ಕೂತು ಡೆಲ್ಲಿ ಮೂಲೆಯಲ್ಲಿರುವ ಅಂಗಡಿಯವನಿಂದ ವಸ್ತುಗಳು ಖರೀದಿಸಬಹುದಾಗಿದೆ ಅಂತ ವಿವರಿಸಿದರು. ಇದಕ್ಕೆ ವ್ಯಾಪಾರಿಗಳು ಕೂಡು ಒಪ್ಪಿದ್ದಾರೆ. ಫ್ಲಿಪ್ ಕಾಟ್೯, ಅಮೆಜಾನ್ ಗೆ ಡೆಲ್ಲಿ ಬಜಾರ್ ಸಡ್ಡು ಹೊಡೆಯಲಿದೆ ಅನ್ನೋದು ಕೇಜ್ರಿವಾಲರ ಐಡಿಯಾ.
ವಾರೆನ್ ಬಫೆಟ್ ಗೆ ಬಿಟ್ ಕಾಯಿನ್ ಅಂದ್ರೆ ಅಲರ್ಜಿ, ಯಾಕ್ ಗೊತ್ತಾ?
ಆನ್ ಲೈನ್ ಶಾಪಿಂಗ್ ನತ್ತ ಒಲವು
ಈಗ ಲೈಫಲ್ಲಿ ಎಲ್ಲರೂ ಬ್ಯುಸಿ. ಯಾರಿಗೆ ಅಂಗಡಿಗೆ ಹೋಗಿ ಶಾಪಿಂಗ್ ಮಾಡುವ ಮನಸ್ಸಾಗಲಿ, ಟೈಮಾಗಲಿ ಇರೋಲ್ಲ. ಹಾಗಾಗಿ ಎಲ್ಲರೂ ಆನ್‌ಲೈನ್ ಶಾಪಿಂಗ್ ಮೇಲೆಯೇ ಅವಲಂಬಿತರಾಗಿದ್ದಾರೆ. ಬ್ಯಾಂಕ್ ಬ್ಯಾಲೆನ್ಸ್ ಭರ್ತಿ ಇರುತ್ತೆ. ಕೈಯಲ್ಲಿ ಸ್ಮಾರ್ಟ್ ಫೋನ್ ಎಂಬ ಹೆಸರಲ್ಲಿ ಜಗತ್ತೇ ಕೈಯಲ್ಲಿದೆ. ಇನ್ನೇನು ಬೇಕು ಹೇಳಿ? ಕಂಡಿದ್ದು, ಕೇಳಿದ್ದು, ನೋಡಿದ್ದು...ಎಲ್ಲವನ್ನೂ ಆನ್‌ಲೈನ್‌ನಲ್ಲಿಯೇ ಬುಕ್ ಮಾಡಿಕೊಂಡು ಶಾಪ್ ಮಾಡುವ ಜಮಾನವಿದು. ಯಾವುದೋ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಊರಿನ ಹಳ್ಳಿ ಹಳ್ಳಿಗೂ ತಲುಪಿ, ಜನರಲ್ಲಿ ಕೊಳ್ಳಬಾಕ ಸಂಸ್ಕೃತಿಯನ್ನು ಹೆಚ್ಚುಸುತ್ತಿದ್ದು, ಅವರ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಅಂಥದ್ರಲ್ಲಿ ಸರಕಾರವೇ ಅಂಥದ್ದೊಂದು ಇ-ಕಾರ್ಮಸ್ ಬ್ಯುಸಿನೆಸ್ ಆರಂಭಿಸಬಾರದೇಕೆ? ನಮ್ಮವರಿಗೇ ಉದ್ಯೋಗವೂ ಸಿಗುತ್ತೆ, ಆರ್ಥಿಕ ವ್ಯವಸ್ಥೆಯೂ ಬಲಗೊಳ್ಳುತ್ತದೆ ಎಂಬುವುದು ಐಐಟಿ ವಿದ್ಯಾರ್ಥಿ ಅರವಿಂದ್ ಕೇಜ್ರೀವಾಲ್ ಅವರ ಚಿಂತನೆ. ಇವರ ಪ್ಲ್ಯಾನ್ ನೋಡಿದರೆ ಈ ಯೋಜನೆಯಲ್ಲಿ ಕೇಜ್ರಿವಾಲ್ ಪೂರ್ತಿ ಯಶಸ್ವಿಯಾಗುವುದು ಖಂಡಿತವೆನಿಸುತ್ತಿದೆ.