ಅನೇಕ ಬಾರಿ ನಮ್ಮ ಖುಷಿ ನಮ್ಮಲ್ಲೆ ಇದ್ರೆ ಚೆಂದ. ಸಂತೋಷದಲ್ಲಿ ನಾವು ಒಂದಿಷ್ಟು ಫೋಟೋ ಹೊಡೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತೇವೆ. ಆದ್ರೆ ಅದ್ರಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ.
ನಾವೀಗ ಸಂಪೂರ್ಣ ಡಿಜಿಟಲ್ ಯುಗದಲ್ಲಿದ್ದೇವೆ. ಕಚೇರಿ, ಸಾರ್ವಜನಿಕ ಸ್ಥಳಗಳು, ಹೊಟೇಲ್, ರೆಸ್ಟೋರೆಂಟ್, ಬೀದಿ ವ್ಯಾಪಾರಿಗಳು, ಮಾರುಕಟ್ಟೆ ಎಲ್ಲವೂ ಡಿಜಿಟಲ್ ಆಗಿದೆ. ನಗದು ವಹಿವಾಟು ಬಹಳ ಕಡಿಮೆ. ಪೇಮೆಂಟ್ ಆನ್ಲೈನ್ ನಲ್ಲಿ ಆಗ್ತಿರುವ ಕಾರಣ ಜನರಿಗೆ ಪರ್ಸ್ ನಲ್ಲಿ ನಗದು ಇಟ್ಕೊಂಡು ಹೋಗ್ಬೇಕೆಂಬ ಚಿಂತೆ ಇಲ್ಲ. ಆದ್ರೆ ಇದೇ ಆನ್ಲೈನ್ ಅನೇಕ ಮೋಸಕ್ಕೂ ಕಾರಣವಾಗ್ತಿದೆ. ನಮ್ಮ ಎಚ್ಚರದಲ್ಲಿ ನಾವಿಲ್ಲವೆಂದ್ರೆ ನಮ್ಮ ಖಾತೆ ಖಾಲಿಯಾಗುತ್ತದೆ. ಮೋಸ ಹೇಗೆ ಹೇಗೆ ನಡೆಯುತ್ತೆ ಅನ್ನೋದನ್ನು ಹೇಳೋದು ಕಷ್ಟ.
ಮೊದಲೇ ಹೇಳಿದಂತೆ ಈಗ ರೆಸ್ಟೋರೆಂಟ್ (Restaurant) ಗಳು ಡಿಜಿಟಲ್ (Digital) ಆಗಿವೆ. ನಿಮ್ಮ ಬಳಿ ವೇಟರ್ ಬರ್ಬೇಕು, ಅವರಿಗೆ ಆರ್ಡರ್ ಮಾಡ್ಬೇಕು ಅನ್ನೋದಿಲ್ಲ. ಪ್ರತಿಯೊಂದು ಟೇಬಲ್ ಮುಂದೆ ಕ್ಯೂ ಆರ್ ಕೋಡ್ ಇರುತ್ತೆ. ಅದನ್ನು ಸ್ಕ್ಯಾನ್ (scan) ಮಾಡಿ, ನಿಮಗೆ ಬೇಕಾದ ಆಹಾರ ಆರ್ಡರ್ ಮಾಡಿ, ಅಲ್ಲಿಯೇ ಬಿಲ್ ಪಾವತಿಸಬಹುದು. ಈ ಸೌಲಭ್ಯವೇ ಮಹಿಳೆಗೆ ದುಬಾರಿಯಾಗಿದೆ.
'ನಾನು ನಂದಿನಿ ತಿರುಪತಿಗೆ ಬರ್ತೀನಿ..' ಎಂದ ಕೆಎಂಎಫ್, ನೋ ವೇ ಚಾನ್ಸೇ ಇಲ್ಲ ಎಂದ ತಿಮ್ಮಪ್ಪ!
ಒಂದ್ಕಡೆ ವಿಶ್ವ ಡಿಜಿಟಲ್ ಆಗ್ತಿದ್ದರೆ ಇನ್ನೊಂದು ಕಡೆ ಜನರ ಸೋಶಿಯಲ್ ಹುಚ್ಚು ಹೆಚ್ಚಾಗಿದೆ. ಪ್ರತಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರೇ ಹೆಚ್ಚು. ಮನೆಯಲ್ಲಿ ನಡೆದ ಘಟನೆ ಇರಲಿ, ಮನೆಯ ಹೊರಗೆ ನಡೆದ ವಿಷ್ಯವಿರಲಿ ಟಕ್ ಅಂತಾ ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡ್ತಾರೆ. ಇದು ತಪ್ಪಲ್ಲ. ಆದ್ರೆ ಎಲ್ಲಿ, ಏನು ಪೋಸ್ಟ್ ಮಾಡ್ತಿದ್ದೇವೆ ಎನ್ನುವುದು ಗೊತ್ತಿರಬೇಕು. ಈ ಮಹಿಳೆ ಅದ್ಯಾವುದರ ಪರಿವೆ ಇಲ್ಲದೆ ತಪ್ಪು ಮಾಡಿದ್ದಾಳೆ.
ಈ ಘಟನೆ ನಡೆದಿದ್ದು ಚೀನಾದಲ್ಲಿ. ವಾಂಗ್ ಹೆಸರಿನ ಮಹಿಳೆ ರೆಸ್ಟೋರೆಂಟ್ ಗೆ ಬಂದಿದ್ದಾಳೆ. ಅಲ್ಲಿ ಟೇಬಲ್ ಮೇಲಿದ್ದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಆಹಾರ ಆರ್ಡರ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಆಹಾರ ಸರ್ವ್ ಆಗ್ತಿದಂತೆ ತನ್ನ ಸ್ನೇಹಿತರ ಜೊತೆ ಆಹಾರದ ಒಂದಿಷ್ಟು ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ.
ಈ ಘಟನೆ ನಡೆದು ಸ್ವಲ್ಪ ಹೊತ್ತಿನ ಬಳಿಕ ಆಕೆ ಟೇಬಲ್ ಬಳಿ ಬಂದ ರೆಸ್ಟೋರೆಂಟ್ ಸಿಬ್ಬಂದಿ, 430,000 ಯುವಾನ್ ಸುಮಾರು 10 ಲಕ್ಷ ರೂಪಾಯಿಯ ಬೃಹತ್ ಆರ್ಡರ್ ಕನ್ಫರ್ಮ್ ಮಾಡುವಂತೆ ಕೇಳಿದ್ದಾನೆ. ಆತ ಹೇಳಿದ್ದನ್ನು ಕೇಳಿ ವಾಂಗ್ ದಂಗಾಗಿದ್ದಾಳೆ. ಆಕೆ ತಾನು ಇಷ್ಟೊಂದು ಮೊತ್ತದ ಆಹಾರ ಆರ್ಡರ್ ಮಾಡಿಲ್ಲ ಎಂದಿದ್ದಾಳೆ. ತಕ್ಷಣ ಆಕೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಫೋಟೋ ನೆನಪಾಗಿದೆ. ಅದನ್ನು ಚೆಕ್ ಮಾಡಿದಾಗ, ಆಹಾರದ ಜೊತೆ ಕ್ಯೂ ಆರ್ ಕೋಡ್ ಕೂಡ ಫೋಟೋದಲ್ಲಿ ಬಂದಿದೆ. ಅದನ್ನು ನೋಡಿದ ಜನರು, ಮಜಾ ತೆಗೆದುಕೊಳ್ಳಲು ಒಂದಿಷ್ಟು ಆಹಾರ ಆರ್ಡರ್ ಮಾಡಿದ್ದಾರೆ. ಆ ಕ್ಷಣವೆ ವಾಂಗ್ ಫೋಟೋವನ್ನು ಡಿಲಿಟ್ ಮಾಡಿದ್ದಾಳೆ. ಆದ್ರೆ ಯಾರೂ ಅದನ್ನು ಡೌನ್ಲೋಡ್ ಮಾಡಿದ್ದ ಕಾರಣ ಮತ್ತೆ ಮತ್ತೆ ಆರ್ಡರ್ ಬಂದಿದೆ.
ಪಿಯುಸಿ ಫೇಲ್ ಆಗಿ, ಮೊದಲ ಕೆಲಸಕ್ಕೆ ಕೇವಲ 11000 ಸಂಬಳ ಪಡೆದ ವ್ಯಕ್ತಿ ಈಗ ಕೋಟ್ಯಾಧಿಪತಿ!
ರೆಸ್ಟೋರೆಂಟ್ ಪ್ರಕಾರ, ಜನರು ಆ ಕೋಡ್ ಬಳಸಿ 1,850 ತಾಜಾ ಬಾತುಕೋಳಿ ರಕ್ತ, 2,580 ಸ್ಕ್ವಿಡ್ ಮತ್ತು 9,990 ಸೀಗಡಿ ಪೇಸ್ಟ್ ಅನ್ನು ಆರ್ಡರ್ ಮಾಡಿದ್ದಾರೆ. ಪುಣ್ಯಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ವಾಂಗ್ ತಪ್ಪನ್ನು ಕ್ಷಮಿಸಿದ್ದಾರೆ. ಈ ಆಹಾರಕ್ಕೆ ಯಾವುದೇ ಬಿಲ್ ಪಾವತಿ ಮಾಡಿಲ್ಲ. ಅಲ್ಲದೆ ಆಕೆಗೆ ಬೇರೆ ಟೇಬಲ್ ನೀಡಿದ್ದಾರೆ. ಯಾರು ಆಹಾರ ಆರ್ಡರ್ ಮಾಡಿದ್ದಾರೆ ಅನ್ನೋದನ್ನು ಪತ್ತೆ ಹಚ್ಚೋದು ಕಷ್ಟ ಅಂತಾ ರೆಸ್ಟೋರೆಂಟ್ ಹೇಳಿದೆ. ನನ್ನ ತಪ್ಪಿನ ಅರಿವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೊದಲು ನಾನು ಹತ್ತು ಬಾರಿ ಆಲೋಚನೆ ಮಾಡ್ತೇನೆ ಎನ್ನುತ್ತಾಳೆ ವಾಂಗ್.