Semicon India 2022: ಸೆಮಿಕಂಡಕ್ಟರ್‌ ಉದ್ದಿಮೆ ಉತ್ತೇಜನಕ್ಕೆ 6 ಒಪ್ಪಂದ

By Girish Goudar  |  First Published May 1, 2022, 6:54 AM IST

*  ಭವಿಷ್ಯದ ಪೀಳಿಗೆ ಮೈಕ್ರೋ ಪ್ರೊಸೆಸರ್‌ ಅಭಿವೃದ್ಧಿಗೆ ಒಡಂಬಡಿಕೆ
*  ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸಮ್ಮುಖದಲ್ಲಿ ಅಂಕಿತ
*  130 ಬಿಲಿಯನ್‌ ಡಾಲರ್‌ ಉತ್ಪಾದನೆ ಗುರಿ 


ಬೆಂಗಳೂರು(ಮೇ.01):  ದೇಶದ ಅರೆ ವಾಹಕ (Semi-Conductor) ಉದ್ಯಮ ವಲಯ ಉತ್ತೇಜಿಸಲು ಹಾಗೂ ಮುಂದಿನ ಪೀಳಿಗೆಯ ಮೈಕ್ರೋ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಲು ‘ಸೆಮಿಕಾನ್‌ ಇಂಡಿಯಾ- 2022’ ವೇದಿಕೆಯಲ್ಲಿ ಸ್ವದೇಶಿ ಡಿಐಆರ್‌-5 (ಡಿಜಿಟಲ್‌ ಇಂಡಿಯಾ ರಿಸ್ಕ್‌-5) ಕಾರ್ಯಕ್ರಮದ ಅಡಿ ಕೇಂದ್ರ ಐಟಿ-ಬಿಟಿ, ಸಂವಹನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಸಮ್ಮುಖದಲ್ಲಿ ಆರು ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು.

ಇತ್ತೀಚೆಗೆ ಮುಂದಿನ ಪೀಳಿಗೆಯ ಮೈಕ್ರೋ ಪ್ರೊಸೆಸರ್‌, ಶಕ್ತಿ ಹಾಗೂ ವೆಗಾ ಪ್ರೊಸೆಸರ್‌ಗಳ ಉತ್ಪಾದನೆ ಪ್ರೋತ್ಸಾಹಿಸಲು ಐಐಟಿ ಮದ್ರಾಸ್‌ನ ನಿರ್ದೇಶಕ ಪ್ರೊ.ಕಾಮಕೋಟಿ ನೇತೃತ್ವದಲ್ಲಿ ಸ್ವದೇಶಿ ಡಿಐಆರ್‌-ವಿ (ಡಿಜಿಟಲ್‌ ಇಂಡಿಯಾ ರಿಸ್ಕ್‌-5) ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ರೂಪಿಸಿದೆ.

Tap to resize

Latest Videos

Semicon India 2022: ಭಾರತ ಸೆಮಿ ಕಂಡಕ್ಟರ್‌ ಹಬ್‌: ಮೋದಿ ಗುರಿ

ಇದರಡಿ ಸಿಸ್ಟಂ ಸರ್ವರ್‌ ಪರಿಹಾರಗಳು, ಮೊಬೈಲ್‌ ಸಾಧನ, ಆಟೋಮೋಟಿವ್‌ ತಂತ್ರಜ್ಞಾನ, ಮೈಕ್ರೊಪ್ರೊಸೆಸರ್‌ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರ ಸೃಷ್ಟಿಸಲು ಸ್ಟಾರ್ಟ್‌ಅಪ್‌, ಶೈಕ್ಷಣಿಕ ಸಂಸ್ಥೆ ಹಾಗೂ ಎಂಎನ್‌ಸಿ ಕಂಪನಿಗಳ ಸಹಯೋಗದಲ್ಲಿ ಆರು ಒಡಂಬಡಿಕೆಗಳಿಗೆ ಶನಿವಾರ ಸಹಿ ಹಾಕಲಾಗಿದೆ.

130 ಬಿಲಿಯನ್‌ ಡಾಲರ್‌ ಉತ್ಪಾದನೆ ಗುರಿ- ಆರ್‌ಸಿ:

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಸೆಮಿ ಕಂಡಕ್ಟರ್‌ (ಅರೆ ವಾಹಕ) ವಲಯದಲ್ಲಿ 2030ರ ವೇಳೆಗೆ 130 ಬಿಲಿಯನ್‌ ಡಾಲರ್‌ ಉತ್ಪಾದನೆ ಗುರಿಯನ್ನು ಹೊಂದಿದ್ದೇವೆ. ಇದಕ್ಕಾಗಿ ವಿನ್ಯಾಸ ಮತ್ತು ಇನ್ನೋವೇಟಿವ್‌ ಇಕೊಸಿಸ್ಟಂ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಅರೆ ವಾಹಕ ವಲಯದಲ್ಲಿ ಮುಂದಿನ ದಿನಗಳಲ್ಲಿ ಭಾರತವನ್ನು(India) ಜಾಗತಿಕ ಮಟ್ಟದಲ್ಲಿ ಬಲಿಷ್ಠಗೊಳಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಈ ಒಪ್ಪಂದಗಳು ಪೂರಕವಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.

Semicon India -2022: ಸ್ಟಾರ್ಟ್‌ಅಪ್‌ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಆರ್‌ಸಿ ಸಂವಾದ

6 ಒಡಂಬಡಿಕೆ ವಿವರಗಳು:

ಮೊದಲನೆಯದಾಗಿ ಸೋನಿ ಇಂಡಿಯಾ ಜತೆ ಐಐಟಿ ಮದ್ರಾಸ್‌ ವತಿಯಿಂದ ಶಕ್ತಿ ಪ್ರೊಸೆಸರ್‌ ಅಭಿವೃದ್ಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹೆಚ್ಚು ಕಾರ್ಯಕ್ಷಮತೆಯ ಎಸ್‌ಒಸಿ (ಸಿಸ್ಟಂ ಆನ್‌ ಚಿಪ್‌) ಹಾಗೂ ಫಾಲ್ಟ್‌ ಟಾಲರೆಂಟ್‌ ಕಂಪ್ಯೂಟ್‌ ಸಿಸ್ಟಂ ಸಿದ್ಧಪಡಿಸಲು ತಿರುವನಂತಪುರಂನ ಇಸ್ರೋ ಇಂಟೆಲ್‌ ಸಿಸ್ಟಮ್‌ ಯೂನಿಟ್‌ (ಐಐಎಸ್‌ಯು) ಹಾಗೂ ಡಿಐಆರ್‌-5 ಶಕ್ತಿ ಪ್ರೊಸೆಸರ್‌ ತಂಡದ (ಐಐಟಿ ಮದ್ರಾಸ್‌) ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಐಜಿಸಿಎಆರ್‌ ಉತ್ಪನ್ನಗಳ ಅಭಿವೃದ್ಧಿಗೆ ಇಂದಿರಾಗಾಂಧಿ ಸೆಂಟರ್‌ ಫಾರ್‌ ಆಟೋಮಿಕ್‌ ರಿಸಚ್‌ರ್‍ (ಐಜಿಸಿಎಆರ್‌) ಹಾಗೂ ಡಿಐಆರ್‌-5 ಶಕ್ತಿ ಪ್ರೊಸೆಸರ್‌ (ಐಐಟಿ-ಮದ್ರಾಸ್‌) ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ರುದ್ರ ಸರ್ವರ್‌ ಬೋರ್ಡ್‌, ಸೈಬರ್‌ ಭದ್ರತೆ, ಭಾಷಾ ಪರಿಹಾರಗಳಿಗಾಗಿ ಬಿಇಎಲ್‌ ಹಾಗೂ ಡಿಐಆರ್‌-5 ವೆಗಾ ಪ್ರೊಸೆಸರ್‌ (ಸಿ-ಡ್ಯಾಕ್‌) ನಡುವೆ ಒಪ್ಪಂದ, 4ಜಿ/5ಜಿ, ಬ್ರಾಡ್‌ಬ್ಯಾಂಡ್‌ ಪರಿಹಾರಗಳಿಗಾಗಿ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಟೆಲಿಮ್ಯಾಟಿಕ್ಸ್‌ (ಸಿ-ಡಾಟ್‌) ಹಾಗೂ ಡಿಐಆರ್‌-5 ವೆಗಾ ಪ್ರೊಸೆಸರ್‌ (ಸಿ-ಡ್ಯಾಕ್‌) ನಡುವೆ ಹಾಗೂ ಕ್ವಾಂಟಂ ತಂತ್ರಜ್ಞಾನ ಅಭಿವೃದ್ಧಿಗೆ ಐಐಎಸ್ಸಿ ಬೆಂಗಳೂರು ಹಾಗೂ ಸೆಮಿ, ಯುಎಸ್‌ಒ ನಡುವೆ ಒಪ್ಪಂದಕ್ಕೆ ಸಹಿ ಬಿದ್ದಿದೆ.
 

click me!