3 ದಶಕದಲ್ಲಿ ಭಾರತದಲ್ಲಿ 27 ಏರ್‌ಲೈನ್ಸ್‌ಗಳು ಬಂದ್‌: ಪ್ರತಿ ವರ್ಷ ಒಂದಲ್ಲಾ ಒಂದು ಕಂಪನಿ ಸೇವೆ ಸ್ಥಗಿತ

By Kannadaprabha News  |  First Published May 4, 2023, 7:28 AM IST

 ವಾಡಿಯಾ ಸಮೂಹ ಒಡೆತನದ ‘ಗೋ ಫಸ್ಟ್‌’ ವಿಮಾನಯಾನ ಕಂಪನಿ ಆರ್ಥಿಕ ಸಂಕಷ್ಟದಿಂದಾಗಿ ಸೇವೆ ಸ್ಥಗಿತಗೊಳಿಸುವುದರೊಂದಿಗೆ, ಬಹುತೇಕ ಪ್ರತಿ ವರ್ಷ ಒಂದಲ್ಲಾ ಒಂದು ವಿಮಾನ ಕಂಪನಿ ಬಂದ್‌ ಆಗುವ ಸಂಪ್ರದಾಯ ದೇಶದಲ್ಲಿ ಮುಂದುವರಿದಂತಾಗಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.


ಪಿಟಿಐ ನವದೆಹಲಿ/ಮುಂಬೈ:  ವಾಡಿಯಾ ಸಮೂಹ ಒಡೆತನದ ‘ಗೋ ಫಸ್ಟ್‌’ ವಿಮಾನಯಾನ ಕಂಪನಿ ಆರ್ಥಿಕ ಸಂಕಷ್ಟದಿಂದಾಗಿ ಸೇವೆ ಸ್ಥಗಿತಗೊಳಿಸುವುದರೊಂದಿಗೆ, ಬಹುತೇಕ ಪ್ರತಿ ವರ್ಷ ಒಂದಲ್ಲಾ ಒಂದು ವಿಮಾನ ಕಂಪನಿ ಬಂದ್‌ ಆಗುವ ಸಂಪ್ರದಾಯ ದೇಶದಲ್ಲಿ ಮುಂದುವರಿದಂತಾಗಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ. ಸರ್ಕಾರದ ಬಿಗಿ ಹಿಡಿತದಲ್ಲಿದ್ದ ವಾಯುಯಾನ ಕ್ಷೇತ್ರ ದೇಶದಲ್ಲಿ ಖಾಸಗಿ ವಲಯಕ್ಕೂ ಮುಕ್ತವಾಗಿದ್ದು 1994ರಲ್ಲಿ. ಅಂದಿನಿಂದ ಇಂದಿನವರೆಗೆ ಕನಿಷ್ಠ 27 ವಿಮಾನ ಕಂಪನಿಗಳು ಒಂದೋ ಸೇವೆಯನ್ನು ಸ್ಥಗಿತಗೊಳಿಸಿವೆ ಇಲ್ಲವೇ ಸೇವೆ ಮುಂದುವರಿಸಲು ಆಗದೆ ಮಾರಾಟ ಅಥವಾ ವಿಲೀನ ಆಗಿವೆ ಎಂದು ಉದ್ಯಮ ವಲಯ ಮಾಹಿತಿ ನೀಡಿದೆ.

ಇದರಿಂದಾಗಿ ಹಂತಹಂತವಾಗಿ ವೈಮಾನಿಕ ಉದ್ಯಮ ವಲಯ ಕೆಲವೇ ಕಂಪನಿಗಳ ಹಿಡಿತಕ್ಕೆ ಸಿಕ್ಕಿಬಿದ್ದಿದೆ ಎಂದು ಉದ್ಯಮ ವಲಯ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಮೊದಲು ಸೇವೆ ಸ್ಥಗಿತಗೊಳಿಸಿದ ಖಾಸಗಿ ವಿಮಾನಯಾನ ಕಂಪನಿ ಈಸ್ಟ್‌ ವೆಸ್ಟ್‌ ಟ್ರಾವೆಲ್ಸ್‌ ಅಂಡ್‌ ಟ್ರೇಡ್‌ ಲಿಂಕ್‌ ಲಿಮಿಟೆಡ್‌. ಉದ್ಯಮ ಖಾಸಗಿ ವಲಯಕ್ಕೆ ತೆರೆದುಕೊಂಡ ಎರಡೇ ವರ್ಷದಲ್ಲಿ ಇದು ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಅದೇ ವರ್ಷ ಮೋದಿಲುಫ್ಟ್ ಎಂಬ ಕಂಪನಿ ಕಾರ್ಯಾಚರಣೆ ನಿಲ್ಲಿಸಿತ್ತು.

Tap to resize

Latest Videos

1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್‌ನಿಂದ ಇಂಡಿಪೆಂಡೆನ್ಸ್ ಡೇ ಸೇಲ್‌

1996ರಲ್ಲಿ ಎನ್‌ಇಪಿಸಿ ಮಿಕಾನ್‌, ಸ್ಕೈಲೈನ್‌ (Skyline), 2000ರಲ್ಲಿ ಲುಫ್ತಾನ್ಸಾ ಕಾರ್ಗೋ (Lufthansa Cargo), 2007ರಲ್ಲಿ ಇಂಡಸ್‌ ಏರ್‌ವೇಸ್‌ (Indus Airways), 2008ರಲ್ಲಿ ಜಾಗ್ಸನ್‌, 2009ರಲ್ಲಿ ಎಂಡಿಎಲ್‌ಆರ್‌, 2010ರಲ್ಲಿ ಪ್ಯಾರಾಮೌಂಟ್‌, 2011ರಲ್ಲಿ ಆರ‍್ಯನ್‌ ಕಾರ್ಗೋ, 2012ರಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌, 2014ರಲ್ಲಿ ಡೆಕ್ಕನ್‌ ಕಾರ್ಗೋ, 2017ರಲ್ಲಿ ಏರ್‌ ಕಾರ್ನಿವಲ್‌ (Air Carnival), ಏರ್‌ ಪೆಗಾಸಸ್‌, ರೆಲಿಗೇರ್‌ ಏವಿಯೇಷನ್‌(Religare Aviation), ಏರ್‌ ಕಾಸ್ಟಾ, ಕ್ವಿಕ್‌ಜೆಟ್‌ ಕಾರ್ಗೋ ಬಂದ್‌ ಆಗಿದ್ದವು. 2019ರಲ್ಲಿ ಜೆಟ್‌ ಏರ್‌ವೇಸ್‌ ಬಂದಾಗಿತ್ತು. ಈ ಮೊದಲು ಸಹಾರಾ ಏರ್‌ಲೈನ್ಸ್‌ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳಿಕ ಜೆಟ್‌ ಲೈಟ್‌ ಹೆಸರಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಸಂಸ್ಥೆ ಕೂಡಾ 2019ರಲ್ಲಿ ಬಾಗಿಲು ಹಾಕಿತ್ತು. 2020ರಲ್ಲಿ ಝೂಮ್‌ ಏರ್‌, ಡೆಕ್ಕನ್‌ ಚಾರ್ಟರ್ಡ್‌ ಹಾಗೂ ಏರ್‌ ಒಡಿಶಾ ಏವಿಯೇಷನ್‌ ಕಂಪನಿಗಳು ಸೇವೆ ನಿಲ್ಲಿಸಿದ್ದವು, 2022ರಲ್ಲಿ ಹೆರಿಟೇಜ್‌ ಏವಿಯೇಷನ್‌ ಕಂಪನಿ ಸೇವೆ ನಿಲ್ಲಿಸಿತ್ತು ಎಂದು ಉದ್ಯಮ ವಲಯ ತಿಳಿಸಿದೆ.

ವಾಡಿಯಾ ಗ್ರೂಪ್‌ನ ಗೋ ಫಸ್ಟ್‌ ದಿವಾಳಿಗೆ ಕಾರಣ ಏನು?

17 ವರ್ಷಗಳ ಹಿಂದೆ ಆರಂಭವಾಗಿದ್ದ ಗೋ ಫಸ್ಟ್‌ ಪ್ರಸಕ್ತ ಒಟ್ಟಾರೆ 9000 ಕೋಟಿ ರು. ಸಾಲದ ಬಾಧೆ ಹೊಂದಿದೆ. ಎಂಜಿನ್‌ ಸಮಸ್ಯೆಯ ಪರಿಣಾಮ 2022ರಲ್ಲಿ ಮಾರುಕಟ್ಟೆಯಲ್ಲಿ ಶೆ.8.8ರಷ್ಟು ಪಾಲು ಹೊಂದಿದ್ದ ಸಂಸ್ಥೆ ಪ್ರಸಕ್ತ ವರ್ಷದ ಪಾಲು ಶೇ.6ರ ಆಸುಪಾಸಿಗೆ ಕುಸಿದಿತ್ತು. ವಿಮಾನಯಾನ ಸಂಸ್ಥೆ ಪುನರುಜ್ಜೀವನಕ್ಕಾಗಿ ಪ್ರವರ್ತಕರು ಕಳೆದ 3 ವರ್ಷದಲ್ಲಿ 3200 ಕೋಟಿ ಹೂಡಿಕೆ ಮಾಡಿದ್ದರು. ಜೊತೆಗೆ ಐಪಿಐ ಬಿಡುಗಡೆ ಮೂಲಕ ಹಣ ಸಂಗ್ರಹಕ್ಕೂ ಕಂಪನಿ ಯೋಜಿಸಿತ್ತು. ಆದರೆ ಒಂದಾದ ಮೇಲೊಂದರಂತೆ ವಿಮಾನಗಳ ಸಂಚಾರ ರದ್ದಾಗಿ ಕಂಪನಿಯ ಎಲ್ಲಾ ಆಸೆಗಳಿಗೆ ಪೆಟ್ಟು ನೀಡಿತ್ತು. 

ಕಿಂಗ್‌ಫಿಶರ್‌, ಜೆಟ್‌ ಏರ್‌ವೇಸ್‌ ಕಂಪನಿಗಳು ಬಾಗಿಲು ಹಾಕಿದ ಬೆನ್ನಲ್ಲೇ, ಗೋ ಫಸ್ಟ್‌ ವಿಮಾನಯಾನ ಸಂಸ್ಥೆ ಕೂಡಾ ದಿವಾಳಿಯಾಗಿದೆ. ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಕಂಪನಿ, ಬುಧವಾರದಿಂದ 3 ದಿನಗಳ ಕಾಲ ತನ್ನ ಎಲ್ಲಾ ಸಂಚಾರ ರದ್ದುಗೊಳಿಸಿರುವುದಾಗಿ ಪ್ರಕಟಿಸಿದೆ. ಜತೆಗೆ ದಿವಾಳಿಯಿಂದ ರಕ್ಷಣೆ ಕೋರಿ ಸ್ವಯಂ ಅದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದೆ.

ಎಂಜಿನ್‌ ಸಮಸ್ಯೆಯಿಂದಾಗಿ 28 ವಿಮಾನದ ಸಂಚಾರ ಸ್ಥಗಿತಗೊಳಿಸಿದ್ದೇವೆ. ಇದು ಹಣದ ಹರಿವಿನ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಅನಿವಾರ್ಯವಾಗಿ ದಿವಾಳಿಯಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಇದೊಂದು ದುರದೃಷ್ಟಕರ ನಿರ್ಧಾರ. ಆದರೆ ಕಂಪನಿಯ ಹಿತದೃಷ್ಟಿಯಿಂದ ಇಂಥ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಕಂಪನಿ ಮುಖ್ಯಸ್ಥ ಕೌಶಿಕ್‌ ಕೋನಾ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ರದ್ದಾದ ಸಂಚಾರದ ಹಣವನ್ನು ನಾವು ಪಾವತಿ ಮಾಡಲಿದ್ದೇವೆ. ನಮ್ಮ ಮುಂದಿನ ಯೋಜನೆ ಬಗ್ಗೆ ಸರ್ಕಾರಕ್ಕೆ ವಿಸ್ತೃತ ಮಾಹಿತಿ ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ.

ಬಾಂಬೆ ಡೈಯಿಂಗ್‌ ಖ್ಯಾತಿಯ ವಾಡಿಯಾ ಗ್ರೂಪ್‌ನ ಗೋ ಫಸ್ಟ್‌ ದಿವಾಳಿಗೆ ಕಾರಣ ಏನು?

ಅದರ ಬೆನ್ನಲ್ಲೇ ಏಕಾಏಕಿ ಸಂಚಾರ ಸ್ಥಗಿತಗೊಳಿಸಿದ ಗೋ ಫಸ್ಟ್‌ಗೆ ನಾಗರಿಕ ವಿಮಾನಯಾನ ಸಚಿವಾಲಯ ನೋಟಿಸ್‌ ಜಾರಿ ಮಾಡಿದೆ. ಮತ್ತೊಂದೆಡೆ ಘಟನೆ ಬಗ್ಗೆ ನೋವು ಮತ್ತು ಕಳವಳ ವ್ಯಕ್ತಪಡಿಸಿರುವ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ನ್ಯಾಯಾಂಗದ ಪ್ರಕ್ರಿಯೆಯನ್ನು ನಾವು ಕಾದು ನೋಡಲಿದ್ದೇವೆ ಎಂದು ಹೇಳಿದ್ದಾರೆ. 

click me!