ಆ್ಯಂಬುಲೆನ್ಸ್‌ಗಾಗಿ ಸೆನ್ಸರ್ ಸಿಗ್ನಲ್: ಸಲೀಂ

By Kannadaprabha News  |  First Published Jan 17, 2023, 9:26 AM IST

ಬೆಂಗಳೂರಿನಲ್ಲಿ ಟ್ರಾಫಿಕ್ ಕಾಮನ್. ಇಂಥ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಸಿಕ್ಕಾಕಿಕೊಂಡು ರೋಗಿಗಳ ಜೀವವೂ ಅಪಾಯದಲ್ಲಿ ಇರುತ್ತದೆ. ಇದನ್ನು ತೆಡಯಲು ಬೆಂಗಳೂರು ಟ್ರಾಫಿಕ್ ಪೊಲೀಸ್ ಹೊಸ ಸೆನ್ಸರ್ ಸಿಗ್ನಲ್ ಅಳವಡಿಸಲು ಚಿಂತಿಸುತ್ತಿದೆ. ಏನಿದು? 


ಬೆಂಗಳೂರು: ರಸ್ತೆ ಬಳಕೆದಾರರ ಸುಗಮ ಸಂಚಾರ ಹಾಗೂ ಸುರಕ್ಷತೆಗಾಗಿ ಬೆಂಗಳೂರು ಸಂಚಾರ ಪೊಲೀಸ್‌ ಹಾಗೂ ಸಾರಿಗೆ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2023’ರ ಪ್ರಯುಕ್ತ ರಸ್ತೆ ಸುರಕ್ಷತಾ ರಾರ‍ಯಲಿ ಹಮ್ಮಿಕೊಳ್ಳಲಾಗಿತ್ತು.

ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರು ಕಬ್ಬನ್‌ ಪಾರ್ಕ್ನ್‌ನಲ್ಲಿ ರಸ್ತೆ ಸುರಕ್ಷತಾ ರಾರ‍ಯಲಿಗೆ ಚಾಲನೆ ನೀಡಿದರು.

Tap to resize

Latest Videos

ರಾರ‍ಯಲಿಯಲ್ಲಿ ನಗರದ ವಿವಿಧ ಶಾಲೆಗಳ ಸುಮಾರು 1500 ವಿದ್ಯಾರ್ಥಿಗಳು, ಸಂಚಾರ ಪೊಲೀಸರು, ಟ್ರಾಫಿಕ್‌ ವಾರ್ಡನ್‌ಗಳು ಭಾಗವಹಿಸಿದ್ದರು. ಕಬ್ಬನ್‌ ಪಾರ್ಕ್ನಿಂದ ಆರಂಭವಾದ ರಾರ‍ಯಲಿಯು ಕ್ವೀನ್ಸ್‌ ಸರ್ಕಲ್‌ ಮುಖಾಂತರ ಎಂ.ಜಿ. ರಸ್ತೆಯಲ್ಲಿ ಸಾಗಿ ಕಾವೇರಿ ಆಟ್ಸ್‌ರ್‍ ಆ್ಯಂಡ್‌ ಕ್ರಾಫ್ಟ್‌, ಓಪೆರಾ ಜಂಕ್ಷನ್‌, ರೆಸಿಡೆನ್ಸಿ ರಸ್ತೆ, ಸುಲೇವಾನ್‌ ಹಾಕಿ ಕ್ರೀಡಾಂಗಣದಲ್ಲಿ ಅಂತ್ಯವಾಯಿತು. ಈ ರಾರ‍ಯಲಿಯಲ್ಲಿ ವಿದ್ಯಾರ್ಥಿಗಳ ಜತೆಗೆ ಆಟೋರಿಕ್ಷಾ, ಕ್ಯಾಬ್‌, ಲಾರಿ, ಬಸ್ಸುಗಳ ಚಾಲಕರು ಹಾಗೂ ವಾಹನ ತರಬೇತಿ ಶಾಲೆಯ ಮುಖ್ಯಸ್ಥರು ಭಾಗವಹಿಸಿದ್ದರು. ವಾಹನ ಚಾಲನೆ ವೇಳೆ ಸಂಚಾರ ನಿಯಮ ಪಾಲಿಸುವಂತೆ ಭಿತ್ತಿ ಫಲಕ ಪ್ರದರ್ಶಿಸಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ಸೇರಿದಂತೆ ಹಲವು ಅಧಿಕಾರಿಗಳಿದ್ದರು.

ಬಿಯಾಂಡ್ ಬೆಂಗಳೂರು ಅಭಿವೃದ್ಧಿಗೆ ಸರ್ಕಾರದ ಯೋಜನೆ: ಸಿಎಂ ಬೊಮ್ಮಾಯಿ

ಆ್ಯಂಬುಲೆನ್ಸ್‌ ಸುಗಮ ಸಂಚಾರಕ್ಕೆ ಅತ್ಯಾಧುನಿಕ ತಂತ್ರಜ್ಞಾನ: ಸಲೀಂ
ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ ಎಂ.ಎ.ಸಲೀಂ, ನಗರದಲ್ಲಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕಾಗಿ ಸೆನ್ಸಾರ್‌ ಮಾದರಿಯ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 163 ಅಡಾಪ್ಟೀವ್‌ ಸಿಗ್ನಲ್‌ ಲೈಟ್ಸ್‌ ಖರೀದಿಸಲು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್‌)ಕ್ಕೆ ಡಿಪಿಆರ್‌ ನೀಡಲಾಗಿದೆ. ಇನ್ನು 2-3 ತಿಂಗಳಲ್ಲಿ ಕೆಆರ್‌ಡಿಸಿಎಲ್‌ ಈ ಅಡಾಪ್ಟೀವ್‌ ಸಿಗ್ನಲ್‌ ಲೈಟ್ಸ್‌ ಖರೀದಿ ಪ್ರಕ್ರಿಯೆ ಮುಗಿಸಲಿದೆ. ಬಳಿಕ ನಿಗದಿತ ಜಂಕ್ಷನ್‌, ರಸ್ತೆಗಳಲ್ಲಿ ಈ ಸಿಗ್ನಲ್‌ ಲೈಟ್ಸ್‌ ಅಳಡಿಸಲಾಗುವುದು. ಈ ಸೆನ್ಸಾರ್‌ ಮಾದರಿಯ ಅಡಾಪ್ಟೀವ್‌ ಸಿಗ್ನಲ್‌ ಅಳವಡಿಕೆಯಿಂದ ಆ್ಯಂಬುಲೆನ್ಸ್‌ 200 ಮೀಟರ್‌ ದೂರದಲ್ಲಿ ಇರುವಾಗಲೇ ಅದನ್ನು ಗುರುತಿಸಿ ಸ್ವಯಂಚಾಲಿತವಾಗಿ ಸಿಗ್ನಲ್‌ಗಳು ಹತ್ತಿಕೊಂಡು ಆ್ಯಂಬುಲೆನ್ಸ್‌ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಲಿದೆ ಎಂದು ಹೇಳಿದರು.

Yellow Board Vehicle: ಯೆಲ್ಲೋ ಬೋರ್ಡ್‌ ವಾಹನಕ್ಕೆ ಎಫ್‌ಸಿ ಪಡೆಯಲು ಪೊಲೀಸರ ಎನ್ಒಸಿ ಕಡ್ಡಾಯ?

ಕಳೆದ ವರ್ಷ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ 1 ಕೋಟಿ ಪ್ರಕರಣ ದಾಖಲಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಕೇಸ್‌ ಹಾಗೂ ದಂಡ ವಿಧಿಸುವುದೇ ಪರಿಹಾರವಿಲ್ಲ. ಜನರ ಮನಸಿನಲ್ಲಿ ಕಾನೂನು ಪಾಲನೆ ಮೂಡಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ರಸ್ತೆಗಳಲ್ಲಿ ಸಂಚಾರ ಪೊಲೀಸರು ಇರುವುದಿಲ್ಲ. ಅಲ್ಲಿನ ಜನರೇ ಸ್ವಯಂಪ್ರೇರಿತರಾಗಿ ಸಂಚಾರ ನಿಯಮ ಪಾಲಿಸುತ್ತಾರೆ ಎಂದರು.

ರಸ್ತೆ ಸುರಕ್ಷತೆ (Road Safety) ಎಂಬುದು ಒಂದು ವಾರಕ್ಕೆ ಮಾತ್ರ ಸೀಮಿತವಾಗಬಾರದು. ಇಡೀ ವರ್ಷ ರಸ್ತೆ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಶಾಲಾ ಮಕ್ಕಳ ಮುಖಾಂತರ ಅವರ ಪೋಷಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.

-ಸಿ.ಎಚ್‌.ಪ್ರತಾಪ್‌ ರೆಡ್ಡಿ, ನಗರ ಪೊಲೀಸ್‌ ಆಯುಕ್ತ

 

click me!