ಬೈಕ್‌ನಲ್ಲಿ ಹೋಗುತ್ತಿದ್ದ ರೌಡಿಯ ಅಟ್ಟಾಡಿಸಿ ಹತ್ಯೆ! ಹಾಡಹಗಲೆ ಭೀಕರ ಕೊಲೆ

By Kannadaprabha News  |  First Published Oct 26, 2019, 8:14 AM IST

ರೌಡೀಶೀಟರ್ ಓರ್ವನನ್ನು ಅಟ್ಟಾಡಿಸಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಾಡಹಗಲೇ ಈ ದುಷ್ಕೃತ್ಯ ನಡೆದಿದೆ.


ಬೆಂಗಳೂರು [ಅ.26]:  ರೌಡಿಶೀಟರ್‌ವೊಬ್ಬನನ್ನು ಮಹದೇವಪುರದ ಫೀನಿಕ್ಸ್‌ ಮಾಲ್‌ ಬಳಿ ಹತ್ಯೆ ಮಾಡಿರುವ ಘಟನೆ  ಮಧ್ಯಾಹ್ನ ನಡೆದಿದೆ.

ಕಾಡುಬೀಸನಹಳ್ಳಿ ನಿವಾಸಿ ಮಂಜುನಾಥ ಅಲಿಯಾಸ್‌ ಮಂಜು (28) ಕೊಲೆಯಾದವನು. ಮಂಜುನಾಥ ಮಾರತ್ತಹಳ್ಳಿಯ ಠಾಣಾ ವ್ಯಾಪ್ತಿಯ ರೌಡಿಶೀಟರ್‌. ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊಂದ ಬಳಿಕವೂ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತ ಮಂಜುನಾಥ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಯುವತಿಯೊಬ್ಬರನ್ನು ಎನ್‌ಫೀಲ್ಡ್‌ ಬೈಕ್‌ನಲ್ಲಿ ಕೂರಿಸಿಕೊಂಡು ಮಹದೇವಪುರದ ಫಿನ್ಸಿಕ್ಸ್‌ ಮಾಲ್‌ ಬಳಿ ಹೋಗುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಮಂಜನ ಮೇಲೆ ಎರಗಿ ಮನಬಂದಂತೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ತೀವ್ರ ರಕ್ತಸ್ರಾವವಾಗಿ ಮಂಜ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಮೃತನ ಜತೆಗಿದ್ದ ಯುವತಿ ಕೃತ್ಯದಿಂದ ಹೆದರಿ ಚೀರಾಡುತ್ತಾ ಸ್ಥಳದಿಂದ ಓಡಿ ಹೋಗಿದ್ದಾಳೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

click me!