ಪ್ರಕೃತಿ ಪ್ರೀಯರನ್ನು ಕೈಬೀಸಿ ಕರೆಯೋ ಉಗಲವಾಟದ ರಾಮತೀರ್ಥ ತಾಣ| ಬೆಟ್ಟಗಳ ಮಧ್ಯೆ, ಸುಂದರ ಪ್ರಕೃತಿಯ ಮಧ್ಯೆ ಜಲಧಾರೆ| ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಿಸರ್ಗ ತಾಣ ರಾಮತೀರ್ಥ| ರಾಮತೀರ್ಥ ನಿಸರ್ಗ ತಾಣಕ್ಕೆ ಪ್ರಕೃತಿ ಪ್ರೀಯರ ಲಗ್ಗೆ| ಹಸಿರು ಬೆಟ್ಟಗಳ ಮಧ್ಯೆ ಧುಮ್ಮಿಕ್ಕುವ ಜಲಧಾರೆ| ನಿತ್ಯ ಸ್ನೇಹಿತರೊಂದಿಗೆ ಆಗಮಿಸುವ ಯುವ ಸಮುದಾಯ| ಕುಟುಂಬ ಸಮೇತರಾಗಿಯೂ ಬಂದು ದಿನವಿಡೀ ಎಂಜಾಯ್ ಮಾಡುವ ಜನ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಅ.31): ಕನ್ನಡ ನಾಡಿನ ಹಲವು ಪ್ರಕೃತಿ ತಾಣಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಬಳಿ ಬೆಟ್ಟದಲ್ಲಿರುವ ರಾಮತೀರ್ಥ ಇದೀಗ ಎಲ್ಲರ ಕಣ್ಮನ ಸಳೆಯೋ ಹಾಟ್ ಫೆವರೆಟ್ ತಾಣವಾಗಿದೆ.
ಎಲ್ಲೆಲ್ಲೂ ಹಸಿರು, ಬೆಟ್ಟಗಳ ಮಧ್ಯೆ ಸುಳಿಯುವ ನೀರಿನ ಝರಿ, ತಂಪು ನೀಯುವ ವಿಶಾಲವಾದ ಮರಗಳು, ಸ್ನಾನಕ್ಕೆಂದು ನಿರ್ಮಾಣವಾಗಿರುವ ಕೊಳ, ಹೀಗೆ ಈ ನಿಸರ್ಗ ತಾಣವನ್ನು ಬಿಟ್ಟು ಹೋಗಲು ಮನಸ್ಸಾಗುವುದಿಲ್ಲ.
ಕೆರೂರ ಪಟ್ಟಣದಿಂದ ಏಳೆಂಟು ಕಿಮೀ ದೂರದಲ್ಲಿರುವ ಈ ರಾಮತೀರ್ಥದಲ್ಲಿ ಕೆಲವು ಚಿಕ್ಕಪುಟ್ಟ ದೇಗುಲಗಳಿವೆ. ಮಳೆ ಬಂದರೆ ಸಾಕು ಇಲ್ಲಿರುವ ಕಲ್ಲು ಬಂಡೆಗಳ ಮಧ್ಯೆ ನುಸುಳಿ ಬರುವ ನೀರಿನ ಝರಿ, ಎಂತವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ.
ಹೀಗಾಗಿ ನಿತ್ಯವೂ ಇಲ್ಲಿಗೆ ಯುವಕ ಯುವತಿಯರು ತಮ್ಮ ತಮ್ಮ ಪ್ರೆಂಡ್ಸ್ ಜೊತೆ ಬಂದು ದಿನವಿಡಿ ಕಾಲ ಕಳೆಯುತ್ತಾರೆ. ಅಲ್ಲದೆ ಇತ್ತ ಕುಟುಂಬಸ್ಥರು ಸಹ ತಮ್ಮ ಮನೆ ಮಂದಿ ಜೊತೆ ಬಂದು ಎಂಜಾಯ್ ಮಾಡ್ತಾರೆ. ಈ ಮಧ್ಯೆ ಇಲ್ಲಿರೋ ನೀರಿನ ಕೊಳವಂತೂ ಇಲ್ಲಿಗೆ ಬರೋ ಪ್ರತಿಯೊಬ್ಬರಿಗೂ ಇಷ್ಟವಾಗಿದೆ.
ಅಷ್ಟೇನೂ ಆಳವಾಗಿರದಿದ್ದರೂ ತಂಪಾದ ಗಿಡಗಳ ಮಧ್ಯೆ ಇರೋ ಈ ಈಜುಕೊಳದಲ್ಲಿ ಯುವಕರು ಜಿಗಿದು ಜಿಗಿದು ಸಂತಸಪಟ್ಟು ಎಂಜಾಯ್ ಮಾಡ್ತಾರೆ. ಈ ಮದ್ಯೆ ಜೋಕಾಲಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಮಕ್ಕಳು ಇದರಲ್ಲಿ ಈಜಿ ಸಖತ್ ಖುಷಿಪಡ್ತಾರೆ. ಇತ್ತ ಚಿಕ್ಕ ಚಿಕ್ಕ ಕಲ್ಲಿನ ಸಂದಿಗಳಲ್ಲಿ ಹಾಯ್ದು ಬರೋ ನೀರಂತೂ ಕಿವಿಗೆ ಇಂಪಾದ ಸ್ವರವನ್ನೂ, ಕಣ್ಣಿಗೆ ವಿಭಿನ್ನ ರೀತಿಯ ನಿಸರ್ಗ ಸದಬಿರುಚಿಯನ್ನು ಸವಿಯುವಂತೆ ಮಾಡುತ್ತದೆ.
ಇನ್ನು ಇಷ್ಟೆಲ್ಲಾ ಆದ ಮೇಲೆ ಇದಕ್ಕೆ ಇನ್ನಷ್ಟು ಮೆರಗು ನೀಡುತ್ತಿರೋದು ಇಲ್ಲಿರುವ ಶಿವನ ಪಾರ್ಕ್. ಈ ಪಾರ್ಕ್ ಮಧ್ಯದಲ್ಲಿ ಶಿವನ ಮೂರ್ತಿ ಇದ್ದು, ಎದುರಿಗೆ ಬಸವಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪಾರ್ಕ್ ಸುತ್ತಲೂ ಮೂರ್ನಾಲ್ಕು ಮೆಟ್ಟಿಲುಗಳ ಸಾಲಿನ ರೂಪದಲ್ಲಿ ನೂರಾರು ಲಿಂಗಗಳ ಪ್ರತಿಷ್ಠಾಪನೆ ಮಾಡಲಾಗಿದೆ.
ಹೀಗಾಗಿ ಕೇವಲ ಪ್ರಕೃತಿಯ ತಾಣವಷ್ಟೇ ಅಲ್ಲದೆ ರಾಮತೀರ್ಥ ಭಕ್ತಿಯ ತಾಣವೂ ಆಗಿದೆ. ಆದ್ರೆ ಈ ಪ್ರದೇಶಕ್ಕೆ ಹೋಗೋಕೆ ಸರಿಯಾದ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲ ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರದ ಶಾಸಕರಾಗಿದ್ದು ಕೂಡಲೇ ಈ ರಾಮತೀರ್ಥಕ್ಕೆ ಅಗತ್ಯವಿರೋ ಸೌಲಬ್ಯಗಳನ್ನ ನೀಡಿ ಇದನ್ನೊಂದು ಪ್ರವಾಸಿತಾಣವನ್ನಾಗಿ ಮಾಡಲಿ ಅಂತಾರೆ ಇಲ್ಲಿನ ಜನ.