Tariff Plans For Keypad Phone Users: ಕೀಪ್ಯಾಡ್ ಫೋನ್ ಬಳಕೆದಾರರಿಗೆ ಪ್ರತ್ಯೇಕ ಮತ್ತು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್‌ಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ಕೇಂದ್ರ ಸರ್ಕಾರವೇ ಸ್ಪಷ್ಟನೆಯನ್ನು ನೀಡಿದೆ.
ನವದೆಹಲಿ: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಮತ್ತು ಕೀಬೋರ್ಡ್ ಫೋನ್ ಬಳಕೆದಾರರಿಗೆ ಒಂದೇ ರೀತಿಯ ರೀಚಾರ್ಜ್‌ಗಳಿವೆ. ಕೀಬೋರ್ಡ್ ಫೋನ್ ಬಳಕೆದಾರರು ಇಂಟರ್‌ನೆಟ್ ಬಳಕೆ ಮಾಡದಿದ್ರೂ ಡೇಟಾ ಪ್ಯಾಕ್ ಆಕ್ಟಿವೇಟ್ ಮಾಡಿಕೊಳ್ಳುತ್ತಿರುತ್ತಾರೆ. ಕೀಪ್ಯಾಡ್ ಫೋನ್ ಬಳಕೆದಾರರಿಗೆ ಪ್ರತ್ಯೇಕ ಮತ್ತು ಕಡಿಮೆ ಬೆಲೆ ರೀಚಾರ್ಜ್ ಪ್ಲಾನ್‌ಗಳು ಬರುತ್ತಾ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಕೀ ಬೋರ್ಡ್ ಫೋನ್ ಬಳಕೆದಾರರಿಗೆ ಪ್ರತ್ಯೇಕ ನಿಯಮಗಳನ್ನು ತರೋದರ ಬಗ್ಗೆ ಟೆಲಿಕಾಂ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಕ್ರಿಯಿಸಿದೆ.
ಲೋಕಸಭಾ ಕಲಾಪದ ವೇಳೆ, ನಮ್ಮ ದೇಶದಲ್ಲಿ ಇಂದಿಗೂ ಹಲವರು ಸ್ಮಾರ್ಟ್‌ಫೋನ್ ಬಳಕೆ ಮಾಡೋದಿಲ್ಲ. ಕೀಪ್ಯಾಡ್‌ನಂತಹ ಚಿಕ್ಕ ಫೋನ್ ಬಳಕೆ ಮಾಡುತ್ತಿರೋದರಿಂದ ಇವರಿಗೆ ಯಾವುದೇ ಡೇಟಾದ ಅಗತ್ಯವಿರಲ್ಲ. ಒಂದು ವೇಳೆ ಇದ್ರೂ ಅದು ತುಂಬಾ ವಿರಳವಾಗಿರುತ್ತದೆ. ಹಾಗಾಗಿ ಈ ವರ್ಗದ ಬಳಕೆದಾರರಿಗೆ ವಿಶೇಷ ಟ್ಯಾರಿಫ್ ಪ್ಲಾನ್‌ಗಳು ಪರಿಚಯಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆಯಾ ಎಂದು ಪ್ರಶ್ನೆ ಮಾಡಲಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ದೂರ ಸಂಚಾರ ಸಚಿವಾಲಯ, ಸದ್ಯಕ್ಕೆ ಸರ್ಕಾರರ ಮುಂದೆ ಆ ರೀತಿಯ ಯಾವುದೇ ಯೋಜನೆ ಇಲ್ಲ. ಈ ಸಂಬಂದ ಯಾವುದೇ ಪ್ರಸ್ತಾವನೆಯೂ ಸಲ್ಲಿಕೆಯಾಗಿಲ್ಲ ಎಂದು ಸದನಕ್ಕೆ ಉತ್ತರ ನೀಡಿದೆ.
ಇದನ್ನೂ ಓದಿ: Samsung 430MP ರಿಂಗ್ ಕ್ಯಾಮೆರಾವುಳ್ಳ 5G ಸ್ಮಾರ್ಟ್‌ಫೋನ್; 7300mAh ಬ್ಯಾಟರಿಯೊಂದಿಗೆ 512GB ಸ್ಟೋರೇಜ್
ಕೇಂದ್ರ ದೂರ ಸಂಚಾರ ಸಚಿವಾಲಯ ನೀಡಿರುವ ಉತ್ತರದ ಪ್ರಕಾರ, ಸ್ಮಾರ್ಟ್‌ಫೋನ್ ಮತ್ತು ನಾನ್-ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈಗ ಲಭ್ಯವಿರೋ ರೀಚಾರ್ಜ್ ಪ್ಲಾನ್‌ಗಳು ಮುಂದುವರಿಯಲಿವೆ. ನೀವು ಕೀ ಪ್ಯಾಡ್ ಫೋನ್ ಬಳಕೆದಾರರಾಗಿದ್ರೆ ಅದಕ್ಕಾಗಿ ಸದ್ಯ ಯಾವುದೇ ಹೊಸ ರೀಚಾರ್ಜ್ ಪ್ಲಾನ್‌ಗಳ ಪರಿಚಯಿಸಲ್ಲ ಎಂಬುದನ್ನು ಕೇಂದ್ರ ದೂರ ಸಂಚಾರ ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ.
2024ರ ಜೂನ್ ಬಳಿಕ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಟ್ಯಾರಿಫ್ ಬೆಲೆ ಏರಿಕೆ ಮಾಡಿಕೊಂಡಿವೆ. ಬೆಲೆ ಏರಿಕೆ ನಂತರ ಗ್ರಾಹಕರು ಬಿಎಸ್‌ಎನ್ಎಲ್ ನೆಟ್‌ವರ್ಕ್‌ನತ್ತ ಮುಖ ಮಾಡುತ್ತಿದ್ದಾರೆ. ಇತ್ತ ಬಿಎಸ್‌ಎನ್‌ಎಲ್ 4G ಟವರ್ ಅಳವಡಿಕೆಯಲ್ಲಿ ನಿರತವಾಗಿದ್ದು, 2025ರ ಅಂತ್ಯಕ್ಕೆ 5G ನೆಟ್‌ವರ್ಕ್‌ಗೆ ಶಿಫ್ಟ್ ಆಗುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಜಸ್ಟ್ 599 ರೂಪಾಯಿಯಲ್ಲಿ ಸಿಗ್ತಿದೆ ₹33,999 ಬೆಲೆಯ Vivo V40e 5G AI ಸ್ಮಾರ್ಟ್‌ಫೋನ್