ಅತಿಯಾದ ತೆರಿಗೆ; ಭಾರತದಲ್ಲಿ ಉದ್ಯಮ ವಿಸ್ತರಿಸುವುದಿಲ್ಲ ಎಂದ ಟೊಯೋಟಾ!

By Suvarna News  |  First Published Sep 15, 2020, 5:52 PM IST

ಪ್ರಧಾನಿ ನರೇಂದ್ರ ಮೋದಿ ಹೊಸ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಆತ್ಮನಿರ್ಭರ್ ಭಾರತ, ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಪರಿಕಲ್ಪನೆಗಳಿಂದ ವಿದೇಶಿ ಬ್ರ್ಯಾಂಡ್ ಹಾಗೂ ಉತ್ವನ್ನದ ಮೇಲೆ ಅತಿಯಾದ ತೆರೆಗಿ ವಿಧಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರ ಇದೀಗ ಉಲ್ಟಾ ಹೊಡೆಯುತ್ತಿದೆ. ಟೊಯೋಟಾ ಮೋಟಾರ್ಸ್ ಇದೀಗ ಭಾರತದಲ್ಲಿ ಉದ್ಯಮ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


ಬೆಂಗಳೂರು(ಸೆ.15): ಭಾರತದಲ್ಲಿ ಉದ್ಯಮ ವಿಸ್ತರಿಸುವುದಿಲ್ಲ ಎಂದು ಟೊಯೋಟಾ ಮೋಟಾರ್ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾಗತಿಕ ಕಂಪನಿಗಳಿಗೆ ಅತಿಯಾದ ತೆರಿಗೆ ಹಾಕುತ್ತಿದೆ. ಆರ್ಥಿಕತೆ ಕುಸಿದಿದೆ, ಆಟೋಮೊಬೈಲ್ ಮಾರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರ ನಡುವೆ ಅತಿಯಾದ ತೆರಿಗೆ ಕಂಪನಿಗೆ ನಷ್ಟವಾಗುತ್ತಿದೆ ಎಂದು ಟೊಯೋಟಾ ಇಂಡಿಯಾ ಹೇಳಿದೆ.

ಸೆ.23ಕ್ಕೆ ಟೊಯೋಟಾ ಅರ್ಬನ್ ಕ್ರೂಸರ್ SUV ಬಿಡುಗಡೆ!

Tap to resize

Latest Videos

ಜಾಗತಿ ಕಂಪನಿಗಳ ಕಾರು ಬೈಕ್ ಉತ್ಪಾದನೆ ಹಾಗೂ ಮಾರಾಟದ ಮೇಲೆ  ಮೋದಿ ಸರ್ಕಾರ ಅತಿಯಾ ತೆರಿಗೆ ಹಾಕುತ್ತಿದೆ. ಹೀಗಾಗಿ ಭಾರತದಲ್ಲಿ ಟೊಯೋಟಾ ಉದ್ಯಮ ವಿಸ್ತರಿಸುವ ಯೋಜನೆ ಕೈಬಿಡಲಾಗಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮುಖ್ಯಸ್ಥ ಶೇಖರ್ ವಿಶ್ವನಾಥನ್ ಹೇಳಿದ್ದಾರೆ. 

ಟೊಯೋಟಾ ಯಾರಿಸ್ ಕ್ರಾಸ್ ಹೈಬ್ರಿಡ್ ಕಾಂಪಾಕ್ಟ್ SUV ಬಿಡುಗಡೆ!

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ಕಚ್ಚಾ ವಸ್ತುಗಳ ಆಮದಿನ ಮೇಲೆ ಹೆಚ್ಚಿನ ತೆರಿಗೆ, ಪ್ರತಿ ಹಂತದಲ್ಲಿ ಅತಿಯಾದ ತೆರಿಗೆ ಹಾಕಲಾಗುತ್ತಿದೆ. ಭಾರತದಿಂದ ನಾವು ನಿರ್ಗಮಿಸುವುದಿಲ್ಲ. ಆದರೆ ಉದ್ಯಮ ವಿಸ್ತರಣೆ ಮಾಡುವುದಿಲ್ಲ. ಇದರಿಂದ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಶೇಖರ್ ಹೇಳಿದ್ದಾರೆ.

ವಿಶ್ವದ ಅತೀ ದೊಡ್ಡ ಕಾರ್ ಮೇಕರ್ ಟೊಯೋಟಾ ಭಾರತದಲ್ಲಿ 1997ರಲ್ಲಿ ಘಟಕ ಆರಂಭಿಸಿತು. ಸ್ಥಳೀಯ ಆಟೋಮೇಕರ್ ಹಾಗೂ  ಜಪಾನ್‌‌ನ ಟೊಯೋಟಾ ಸಹಭಾಗಿತ್ವದಲ್ಲಿ ಕಂಪನಿ ಆರಂಭಿಲಾಗಿದೆ. ಭಾರತದ ಟೊಯೋಟಾ ಕಿರ್ಲೋಸ್ಕರ್‌ನಲ್ಲಿ ಜಪಾನ್ ಆಟೋಮೇಕರ್ ಶೇಕಡಾ 89ರಷ್ಚು ಪಾಲು ಹೊಂದಿದೆ. ಇಂಧನ ವಾಹನಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸುತ್ತಿದೆ. 

ಭಾರತೀಯ ಉದ್ಯಮಗಳ ಪೋಷಣೆ ಹೆಸರಲ್ಲಿ ಭಾರತದಲ್ಲಿ ನೆಲೆಯೂರಿರುವ ಹಾಗೂ ಭಾರತದ ಆರ್ಥಿಕತೆ, ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಪ್ರಹಾರ ನಡೆಸುತ್ತಿದೆ. ಇದು ಮತ್ತೊಂದು ಅಧಪತನಕ್ಕೆ ದಾರಿಯಾಗಲಿದೆ ಎಂದು ಟೊಯೋಟಾ ಮೋಟಾರ್ಸ್ ಹೇಳಿದೆ.

click me!