7 ವರ್ಷಗಳ ನಂತರ ಬಂದು ಆನಂದ್ ಮಹೀಂದ್ರಾಗೆ ತನ್ನ ಪರಿಚಯಿಸಿಕೊಂಡ ಹುಡುಗಿ: ಏನಿದು ಸ್ಟೋರಿ

By Anusha Kb  |  First Published Jun 14, 2023, 1:19 PM IST

7 ವರ್ಷಗಳ ಹಿಂದೆ ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಗಾಡಿಯ ಸ್ಟೇರಿಂಗ್ ಹಿಡಿದ ಒಂದೂವರೆ ವರ್ಷದ ಮಗುವಿನ ಫೋಟೋವನ್ನು ಶೇರ್ ಮಾಡಿದ್ದರು. ಈಗ ಅದೇ ಹುಡುಗಿ 7 ವರ್ಷಗಳ ಬಳಿಕ ಬಂದು ಆನಂದ್ ಮಹೀಂದ್ರ ಅವರಿಗೆ ತನ್ನನ್ನು ಪರಿಚಯಿಸಿಕೊಂಡು ಖುಷಿ ಪಟ್ಟಿದ್ದಾಳೆ.


ಮುಂಬೈ: ಮಹೀಂದ್ರ ಗ್ರೂಪ್‌ನ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಒಂದಲ್ಲಾ ಒಂದು ಸ್ವಾರಸ್ಯಕರ ವೀಡಿಯೋ ಅಥವಾ ಫೋಸ್ಟ್‌ಗಳನ್ನು ಮಾಡುವ ಮೂಲಕ ಅವರು ತಮ್ಮ 10 ಮಿಲಿಯನ್‌ಗೂ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್‌ಗಳನ್ನು ಸದಾ ಅಚ್ಚರಿಗೆ ದೂಡ್ತಿರ್ತಾರೆ.  ಅಲ್ಲದೇ ಕೆಲವೊಮ್ಮೆ ತಾವು ಹಾಕಿದ ಪೋಸ್ಟ್‌ಗಳಲ್ಲಿರುವವರಿಗೆ ನೆರವು ನೀಡುವುದಕ್ಕೂ ಮುಂದಾಗಿದ್ದಾರೆ. ಕೆಲವು ಪ್ರತಿಭಾವಂತರಿದ್ದು, ಉದ್ಯೋಗವಿಲ್ಲದವರಿಗೆ ಉದ್ಯೋಗವನ್ನು ನೀಡಿದ್ದಾರೆ. ಅದೇ ರೀತಿ 7 ವರ್ಷಗಳ ಹಿಂದೆ ಅವರು ಒಂದು ಪುಟ್ಟ ಮಗು ಮಹೀಂದ್ರ ಗಾಡಿಯ ಸ್ಟೇರಿಂಗ್‌ ಹಿಡಿದಿರುವ ಫೋಟೋವೊಂದನ್ನು ಶೇರ್ ಮಾಡಿದ್ದರು. ಈಗ ಅದೇ ಮಗು ಸ್ವಲ್ಪ ದೊಡ್ಡವಳಾಗಿದ್ದು, ತನ್ನ ತಂದೆಯ ಜೊತೆ ಆನಂದ್‌ ಮಹೀಂದ್ರಾ ಅವರನ್ನು ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದಲ್ಲದೇ, ನೀವು ಅಮದು ಶೇರ್ ಮಾಡಿದ್ದ ಫೋಟೋದಲ್ಲಿದ್ದ ಹುಡುಗಿ ನಾನೇ ಎಂದಿದ್ದಾಳೆ. ಈ ಸುಂದರ ಕ್ಷಣದ ಫೋಟೋವನ್ನು ಆನಂದ್ ಮಹೀಂದ್ರಾ ಮತ್ತೆ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, 

ನಿನ್ನೆ ಸಂಜೆ ಈ ಆಕರ್ಷಕ ಹುಡುಗಿ, ರಿಯಾ, ನನ್ನ ಬಳಿಗೆ ಬಂದು, ಏಳು ವರ್ಷಗಳ ಹಿಂದೆ, ಅವಳು ಒಂದು ವರ್ಷದವಳಿದ್ದಾಗ ನಾನು ಅವಳ ಚಿತ್ರವನ್ನು ಟ್ವೀಟ್ ಮಾಡಿದ್ದೆ ಎಂದು ನನಗೆ ನೆನಪಿಸಿದಳು! ಧನ್ಯವಾದ @Gaurishrulz ಆ ಟ್ವೀಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ. ಕ್ಷಣಗಣನೆ ಮುಂದುವರಿದಿದೆ. ನಾನು ಸಹ, ಅವಳು ನಮ್ಮ ಕಾರನ್ನು ಓಡಿಸುವುದನ್ನು ನೋಡಲು ಕಾಯಲಾಗುತ್ತಿಲ್ಲ(ಮತ್ತು ಹಾಗೆ ಮಾಡಲು ಪರವಾನಗಿ ಸಹ ಬೇಕು!)  ಬಹುಶಃ ಆಕೆ ಇಲೆಕ್ಟ್ರಿಕ್ ವಾಹನ ಓಡಿಸಬಹುದು ಎಂದು ಆನಂದ್ ಮಹೀಂದ್ರಬರೆದುಕೊಂಡಿದ್ದು, ಜೊತೆಗೆ 8 ವರ್ಷದ ಹುಡುಗಿಯೊಂದಿಗೆ ತಾವು ನಿಂತಿರುವ ಫೋಟೋವನ್ನು ಹಾಕಿದ್ದಾರೆ..

Tap to resize

Latest Videos

undefined

ಭಾರತದಲ್ಲಿ ನೋಡ್ಲೇಬೇಕಾದ ಅದ್ಭುತ ಸ್ಥಳಗಳು, ಆನಂದ್ ಮಹೀಂದ್ರಾ ಶೇರ್ ಮಾಡಿರೋ ಬಕೆಟ್ ಲಿಸ್ಟ್‌ ಇಲ್ಲಿದೆ

ಏಳು ವರ್ಷಗಳ ಹಿಂದೆ ಬಾಲಕಿಯ ತಂದ ಗೌರಿಶ್ ರೂಲ್ಸ್ (@Gaurishrulz) ಎಂಬುವವರು  2016ರಲ್ಲಿ ತಮ್ಮ ಮಗಳು ಮಹೀಂದ್ರಾ ಗಾಡಿಯ ಸ್ಟೇರಿಂಗ್ ಹಿಡಿದಿರುವ ಫೋಟೋವೊಂದನ್ನು ಹಾಕಿ ' ನನಗೆ ಯಾವಾಗ 18 ತುಂಬುತ್ತದೆ. ಇನ್ನೂ 16.5 ವರ್ಷ ಕಾಯಬೇಕು ಕಾರಿನ ಮೇಲೆ ಪ್ರೀತಿ ಎಂದು ಬರೆದು ಆನಂದ್ ಮಹೀಂದ್ರಾ ಅವರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ ಹಹಾ ಈ ಫೋಟೋ ನಮ್ಮ ಆಟೋ ಆರ್ಕೈವ್ ಸೇರಲಿದೆ. ನಾವು ಎಳೆವೆಯಲ್ಲೇ ಅವರನ್ನು ನಮ್ಮತ್ತ ಸೆಳೆಯುವುದನ್ನು ಇಷ್ಟಪಡುತ್ತೇವೆ ಎಂದು ಬರೆದುಕೊಂಡು ರಿಟ್ವಿಟ್ ಮಾಡಿದ್ದರು.  ಅದೇ ಹುಡುಗಿ 7 ವರ್ಷಗಳ ನಂತರ ಉದ್ಯಮಿ ಆನಂದ್ ಮಹೀಂದ್ರ ಅವರನ್ನು ಭೇಟಿಯಾಗಿ ತನ್ನ ಪರಿಚಯ ಮಾಡಿಕೊಂಡಿದ್ದಾಳೆ. ಇಬ್ಬರು ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದು, ಆನಂದ್ ಮಹೀಂದ್ರಾ ಅವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಮತ್ತೆ ಶೇರ್ ಮಾಡಿದ್ದಾರೆ. 

ಕಾರು ಖರೀದಿಸಿದ ಖುಷಿ: ಶೋ ರೂಮ್‌ನಲ್ಲಿ ಕುಟುಂಬದ ಬಿಂದಾಸ್ ಡಾನ್ಸ್: ವಿಡಿಯೋ ವೈರಲ್

ಈ ಪೋಸ್ಟ್‌ನ್ನು 3 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.  ಆಕೆ ಮುಂದೆ ಖಂಡಿತ ಮಹೀಂದ್ರ ಗಾಡಿ ಖರೀದಿ ಮಾಡುತ್ತಾಳೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ವಿನ್ರಮತೆ ಹಾಗೂ ಕರುಣೆಗೆ ದೊಡ್ಡ ನಮಸ್ಕಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾವಾಗಲೂ ಜನ ನಮ್ಮ ವಸ್ತುವನ್ನು ಖರೀದಿಸಲಿ ಎಂದು ಗ್ರಾಹಕರಿಗೆ ಕಾಯುತ್ತಾರೆ.. ಆದರೆ ನಿಮ್ಮ ಗ್ರಾಹಕರು ನಿಮ್ಮ ಉತ್ಪನ್ನಗಳನ್ನು ಖರೀದಿಸಲು ಕಾಯುತ್ತಿದ್ದಾರೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಫೋಟೋದಲ್ಲಿದ್ದ ಒಂದೂವರೆ ವರ್ಷ ಮಗು 7 ವರ್ಷಗಳ ನಂತರ  ಬಂದು ಆನಂದ್ ಮಹೀಂದ್ರ ಅವರನ್ನು  ಪರಿಚಯಿಸಿಕೊಂಡಿದ್ದು, ಆನಂದ್ ಮಹೀಂದ್ರಾ ಅವರಿಗೂ ಅಚ್ಚರಿ ಮೂಡಿಸಿದೆ.

Haha. This pic goes into our auto archives. We love catchin' 'em young! https://t.co/aPGCWdJAyu

— anand mahindra (@anandmahindra)

Yesterday evening, this charming young lady, Rhea, came up to me & reminded me I had tweeted a pic of her seven years ago, when she was a year old! Thank you for sharing that tweet. The countdown continues. I, too, can’t wait for her to get behind the wheel (and… pic.twitter.com/n0LmilWqqN

— anand mahindra (@anandmahindra)

 

click me!