ಟೈರ್‌ ಇಲ್ಲದಿದ್ರೂ ರಸ್ತೆಯಲ್ಲಿ ಸುಂಯ್ಯನೇ ಸಾಗುವ ಕಾರು: ವೀಡಿಯೋ ವೈರಲ್

By Anusha Kb  |  First Published Jun 29, 2023, 1:58 PM IST

ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಕಾರು ಎಂದು ಹೇಳಲಾದ ಕಾರಿನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋವನ್ನು 13 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 


ಮನೆಯಲ್ಲೊಂದು ಕಾರು ಇದ್ರೆ ಎಷ್ಟು ಚೆನ್ನ, ಮನೆಯವರೆಲ್ಲರೂ  ಜೊತೆಯಾಗಿ ಎಲ್ಲಾದರೂ ಹೋಗ್ಬಹುದು, ಪ್ರವಾಸಿ ತಾಣಗಳನ್ನು ನೋಡ್ಬಹುದು, ಬಸ್ ರೈಲುಗಳಿಗೆ ಕಾಯುವ ಅಗತ್ಯವಿಲ್ಲ ನಮಗೆ ಬೇಕಾದ ಸಮಯಕ್ಕೆ ಹೊರಟು ಬೇಕಾದ ಸಮಯಕ್ಕೆ ಬರಬಹುದು ಎಂಬುದು ಬಹುತೇಕ ಸಣ್ಣ ಮಧ್ಯಮ ವರ್ಗದ ಜನರ ಕನಸು.  ಆದರೆ ಕಾರುಗಳ ಬೆಲೆ ಏರಿರುವುದರಿಂದ ಅನೇಕರಿಗೆ ಈ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ಈ ಮಧ್ಯೆ ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಕಾರು ಎಂದು ಹೇಳಲಾದ ಕಾರಿನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋವನ್ನು 13 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ವಿಶಿಷ್ಟ ವಿನ್ಯಾಸಗಳು ಮತ್ತು ವಿಶಿಷ್ಟ ವೈಶಿಷ್ಟ್ಯಗಳ ಜೊತೆ ಹೊಸತನ ಹೆಚ್ಚು ಬೇಡಿಕೆ ಇರುವ ಆಟೋಮೊಬೈಲ್‌ ಜಗತ್ತಿನಲ್ಲಿ ಈ ವಿಭಿನ್ನ ಕಾರಿನ ವೀಡಿಯೋ ಸಂಚಲನ ಸೃಷ್ಟಿಸಿದೆ. ವಾಹನ ಚಾಲನೆಗೆ ಮುಖ್ಯವಾಗಿ ಬೇಕಿರುವುದು ಟೈರ್ ಆದರೆ ಈ ಹೊಸ ಕಾರಿನಲ್ಲಿ ಕಾರಿಗೆ ಟೈರೇ ಇಲ್ಲ, ಸಮತಟ್ಟದ ರಸ್ತೆಯಲ್ಲಿ ಇದು ಸುಯ್ಯನೇ ಸಾಗುತ್ತಿದ್ದಾರೆ ನೋಡುಗರು ಈ ಅಚ್ಚರಿಯನ್ನು ನೋಡಿ ಫೋಟೋ ತೆಗೆಯುವುದರಲ್ಲಿ ಮಗ್ನರಾಗಿದ್ದಾರೆ. ಈ ವಿಶೇಷ ವಿಭಿನ್ನ ಕಾರು ನೋಡುಗರನ್ನು ಅಚ್ಚರಿಗೆ ದೂಡಿರುವುದರ ಜೊತೆಗೆ ಕಾರು ಕಂಪನಿಗಳಲ್ಲಿ ಟೈರುಗಳಿಲ್ಲದ ಕಾರಿನ ಸೃಷ್ಟಿಯ ಹೊಸ ಸಾಧ್ಯತೆಯ ಬಗ್ಗೆ ಯೋಚನೆ ಮಾಡುವಂತೆ ಮಾಡಿದೆ. 

Tap to resize

Latest Videos

undefined

ಭಾರತದಲ್ಲಿ ಅತ್ಯಂತ ದುಬಾರಿ ಕಾರಿನ ಮಾಲೀಕ ಅಂಬಾನಿ,ಅದಾನಿ ಅಲ್ಲ; ಈತ ಬೆಂಗಳೂರಿಗ!

ಟಯರು ಹಾಗೂ ಗೇಟ್‌ಗಳಿಲ್ಲದ ಕಾರು ಅಂದ್ರೆ ಎಲ್ಲರಿಗೂ ಅಚ್ಚರಿ ಆಗುತ್ತೆ. ಅನೇಕರು ಇದೇನೋ ಮಕ್ಕಳ ಆಟ ಸಾಮಾನಿರಬೇಕು  ಎಂದು ಗೊಂದಲಕ್ಕೊಳಗಾಗುತ್ತಾರೆ. ಆದರೆ ಈ ಕಾರು ರಸ್ತೆಯಲ್ಲಿ ಓಡುವುದನ್ನು ನೋಡಿದರೆ ಅನೇಕರು ಅಚ್ಚರಿ ಹಾಗೂ ಬೆರಗುಗಣ್ಣುಗಳಿಂದ ಅದನ್ನೇ ನೋಡುತ್ತಾ ಮೈ ಮರೆಯುತ್ತಾರೆ. ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಮಸಿಮೋ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ವಿಶ್ವದ ಅತ್ಯಂತ ಕಡಿಮೆ ಬೆಲೆಯ ಕಾರು ಎಂದು ಬರೆದಿದ್ದಾರೆ. 9 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಕಾರು ರಸ್ತೆಯಲ್ಲಿ ಸಾಗುತ್ತಿದ್ದರೆ, ನೋಡುಗರು ಅಚ್ಚರಿಯಿಂದ ಅದರತ್ತಲೇ ನೋಡುತ್ತಿದ್ದು, ಫೋಟೋ ತೆಗೆದುಕೊಳ್ಳಲು ವೀಡಿಯೋ ಮಾಡಲು ಮುಂದಾಗುತ್ತಿದ್ದಾರೆ. 

ಮಹೀಂದ್ರದಿಂದ ಗುಡ್ ನ್ಯೂಸ್, 5 ಡೋರ್ ಥಾರ್ ಕಾರು ಆಗಸ್ಟ್ 6ಕ್ಕೆ ಅನಾವರಣ!

ಅಂದಹಾಗೆ ಈ ಕಾರನ್ನು ಇಟಲಿಯ ಆಟೋಮೊಬೈಲ್ ಉತ್ಸಾಹಿ (automobile influencer), ಕ್ಯಾರಮಗೆಡ್ಡನ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಯುವಕ ತಯಾರಿಸಿದ್ದು, ಇನ್ಸ್ಟಾಗ್ರಾಮ್ ಹಾಗೂ  ಯೂಟ್ಯೂಬ್‌ನಲ್ಲಿ ಈ ಕಾರಿನ ಮೇಕಿಂಗ್ ವೀಡಿಯೋ ಇದೆ. ಹಳೆಯ ಹಾಳಾದ ಕಾರೊಂದನ್ನು ಬಳಸಿ ಅವರು ವಿಶ್ವದ ಅತ್ಯಂತ ಕಡಿಮೆ ಬೆಲೆಯ ಕಾರು ತಯಾರಿಸಿದ್ದಾರೆ. ಅಲ್ಲದೇ ಕಾರಿನ ಮೇಲೆ ಗ್ರೋ ಪ್ರೋ ಕ್ಯಾಮರಾವನ್ನು ಕೂಡ ಅವರು ಅಳವಡಿಸಿದ್ದು, ಇದರಿಂದ ಕಾರು ಸಾಗುವ ಮಾರ್ಗದಲ್ಲಿ ಏನಾದರು ಅಡಚಣೆಗಳಿದ್ದರೆ ಮೊದಲೇ ನೋಡಬಹುದಾಗಿದೆ.  ಅಧಿಕೃತವಾಗಿ, ಪೀಲ್ ಇಂಜಿನಿಯರಿಂಗ್ ಕಂಪನಿ ತಯಾರಿಸಲ್ಪಟ್ಟ PLP 50 ಎಂಬ ಕಾರು ಇದುವರೆಗೆ ನಿರ್ಮಿಸಲಾದ ಅತ್ಯಂತ ಚಿಕ್ಕ ಕಾರಾಗಿದೆ. ಇದು  52.8 ಇಂಚು  (134 ಸೆಂಟಿಮೀಟರ್‌ಗಳು) ಉದ್ದ, 39 ಇಂಚುಗಳು (99 ಸೆಂಟಿಮೀಟರ್‌ಗಳು) ಅಗಲ ಮತ್ತು 39.4 ಇಂಚುಗಳು (100 ಸೆಂಟಿಮೀಟರ್‌ಗಳು) ಎತ್ತರವಿದೆ. 

The lowest car in the world

[📹 carmagheddon (IT): https://t.co/9z0IrZySua]pic.twitter.com/AvExqIFJnA

— Massimo (@Rainmaker1973)

 

click me!