ಸನ್ಯಾಸಿಗಳೇಕೆ ಕಾವಿ ವಸ್ತ್ರ ಧರಿಸುತ್ತಾರೆ?

By Web DeskFirst Published Apr 21, 2019, 2:54 PM IST
Highlights

ಕೋಮುವಾದ, ಜಾತೀವಾದದ ನಡುವೆ ಕೆಲವು ಆಚಾರ - ವಿಚಾರಗಳಿಗೆ ಬೇರೆಯದ್ದೇ ಅರ್ಥ ಹುಟ್ಟಿಕೊಂಡಿವೆ. ಅದರಲ್ಲಿಯೂ ಸನ್ಯಾಸತ್ವ ಹಾಗೂ ಅವರು ಧರಿಸುವ ವಸ್ತ್ರಕ್ಕೆ ತನ್ನದೇ ಆದ ಮೌಲ್ಯಗಳಿವೆ. ಆದರರ್ಥವೇನು?

ಸನ್ಯಾಸಿಗಳು ಅಂದರೆ ಅಧ್ಯಾತ್ಮದ ಹಾದಿಯಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಅಥವಾ ದೇವರನ್ನು ಹುಡುಕುವುದಕ್ಕೆ ಹೊರಟವರು. ಅವರು ಜನಸಾಮಾನ್ಯರಿಗಿಂತ ಭಿನ್ನವಾಗಿ ಕಾಣಿಸಬೇಕು. ಇಲ್ಲದಿದ್ದರೆ ಜನರಿಗೆ ಅವರು ಸನ್ಯಾಸಿ ಎಂದು ತಿಳಿಯುವುದಿಲ್ಲ. ಸನ್ಯಾಸಿಯು ತಾನು ಸನ್ಯಾಸಿ ಎಂದು ತೋರಿಸಿಕೊಳ್ಳದಿದ್ದರೆ ಜನರು ಅವನ ಖಾಸಗೀತನವನ್ನು ಗೌರವಿಸುವುದಿಲ್ಲ. 

  • ಇದಕ್ಕಾಗಿ ಕೇಸರಿ ಬಣ್ಣ ಆಯ್ದುಕೊಂಡಿದ್ದಕ್ಕೆ ಕಾರಣವೆಂದರೆ, ಬಟ್ಟೆಯ ಸಾಮಾನ್ಯ ಬಣ್ಣ ಬಿಳಿ. ಹಿಂದಿನ ಕಾಲದಲ್ಲಿ ಅದಕ್ಕೆ ಬೇರಾವುದೇ ಬಣ್ಣ ಸುಲಭವಾಗಿ ಸಿಗುತ್ತಿರಲಿಲ್ಲ.  ಗಿಡಮೂಲಿಕೆಗಳನ್ನು ಬಳಸಿ ಬಟ್ಟೆಗೆ ಬಣ್ಣ ಹಾಕುವುದಾದರೆ ಕೇಸರಿ ಬಣ್ಣ ತಯಾರಿಸುವುದು ಸುಲಭವಿತ್ತು. 
  • ಸನ್ಯಾಸಿಗಳು ಕಾವಿ ವಸ್ತ್ರವನ್ನು ಧರಿಸುವುದಕ್ಕೆ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ. ಸೂರ್ಯೋದಯ ಮತ್ತು ಸೂರ್ಯಾಸ್ತಗಳಲ್ಲಿ ಪ್ರಧಾನವಾಗಿ ಇರುವ ಬಣ್ಣ ಕಿತ್ತಳೆ, ಕೇಸರಿ, ಕೆಂಪು ಮಿಶ್ರಿತ ಹಳದಿ ಬಣ್ಣ. ಅಗ್ನಿಯೂ ಹಳದಿ ಮಿಶ್ರಿತ ಕೆಂಪು ಬಣ್ಣ. ಪ್ರಾಕೃತಿಕ ಶಕ್ತಿಗಳ ಸಂಕೇತವಾಗಿ ಕಾವಿ ಬಟ್ಟೆ ಧರಿಸುತ್ತಿದ್ದರು.

ಈ ಸಾಧು ಸಂತರ ಬದುಕು ಅಗೋರ....

  • ಕಾವಿ ಬಟ್ಟೆಯನ್ನು ನೈಸರ್ಗಿಕ ಬಣ್ಣಗಳ ಮೂಲಕ ತಯಾರಿಸುವುದು ಸುಲಭ. ಬಿಳಿ ಬಟ್ಟೆಯನ್ನು ಕೇಸರಿಯೊಡನೆ ಬೆರೆಸಿದರೆ ಕೇಸರಿ ಬಣ್ಣದ ಬಟ್ಟೆ ಸಿದ್ಧವಾಗುತ್ತದೆ. 
  • ಬಿಳಿ ಬಟ್ಟೆಯನ್ನು ಹಲಸಿನ ಮರದ ತುಂಡುಗಳ ಜೊತೆಯಲ್ಲಿ ಕುದಿಸಿದರೂ ಕಾವಿ  ಬಟ್ಟೆ ರೂಪುಗೊಳ್ಳುತ್ತದೆ. 
  • ದೃಕ್ ಶಾಸ್ತ್ರಕ್ಕೂ ಕಾವಿ ಬಣ್ಣಕ್ಕೂ ಸಂಬಂಧವುಂಟು. ಪ್ರಕೃತಿಯಲ್ಲಿರುವ ಅಸಂಖ್ಯ ಬಣ್ಣಗಳಲ್ಲಿ ಮನುಷ್ಯನ ಕಣ್ಣು ಪ್ರಧಾನವಾಗಿ ಆಂಬರ್ ಅಥವಾ ಕಿತ್ತಳೆ ಬಣ್ಣವನ್ನು ಗುರುತಿಸುತ್ತದೆ. ಅದಕ್ಕೇ ಊಟಿ, ಕೊಡೈಕೆನಾಲ್‌ನಂಥ ಮಂಜಿನ ಪ್ರದೇಶಗಳಲ್ಲಿ ಸೋಡಿಯಂ ವೇಪರ್ ಲ್ಯಾಂಪನ್ನು ಹೆಚ್ಚಾಗಿ ಬಳಸುತ್ತಾರೆ. ರಾತ್ರಿ ಹೊತ್ತಲ್ಲಿ ಟ್ರಾಫಿಕ್ ಬ್ಲಿಂಕರ್ಸ್ ಆಗಿ ಬಳಸುವುದು ಆಂಬರ್ ಬಣ್ಣದ ದೀಪವನ್ನು. ರೆಸ್ಕ್ಯೂ ಸಿಗ್ನಲ್ ಆಗಿ ಬಳಸುವುದು ಕಿತ್ತಳೆ ಬಣ್ಣದ ಹೊಗೆಯನ್ನು. ಲೈಫ್ ಜಾಕೆಟ್ ಬಣ್ಣವೂ ಸಾಮಾನ್ಯವಾಗಿ ಕಿತ್ತಳೆ ಇಲ್ಲವೇ ಫ್ಲೂರಸೆಂಟ್ ಬಣ್ಣದ್ದಾಗಿರುತ್ತದೆ. ಹಾಗೆಯೇ ಕಾವಿ ಬಣ್ಣದ ಬಟ್ಟೆಯನ್ನು ಧರಿಸಿದ ವ್ಯಕ್ತಿಯನ್ನು ಎಷ್ಟೇ ಜನಜಂಗುಳಿಯಲ್ಲಾಗಲಿ ಸುಲಭವಾಗಿ ಗುರುತಿಸಬಹುದು.
click me!