Vastu Dosha on Couple: ಒಂದು ವೇಳೆ ನಿಮ್ಮ ಮನೆಯಲ್ಲಿ ಹೀಗೆ ಆಗುತ್ತಿದ್ದರೆ ವಾಸ್ತುದೋಷ ಸರಿಪಡಿಸಿಕೊಳ್ಳಬೇಕು. ಮನೆ ಕಟ್ಟುವಾಗಲೇ ವಾಸ್ತು ನೋಡಿಕೊಳ್ಳಬೇಕು. ವಾಸ್ತುಶಾಸ್ತ್ರಜ್ಞರ ಪ್ರಕಾರ ಆ ದೋಷಗಳು ಏನು ಅಂತ ನೋಡೋಣ ಬನ್ನಿ
ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಆದ್ರೆ ಕೆಲವು ಸಂಸಾರಗಳಲ್ಲಿ (Husband-Wife) ಏನೇ ಮಾಡಿದ್ರೂ, ಎಷ್ಟೇ ಸಮಾಧಾನದಿಂದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ರೂ ದಂಪತಿ ನಡುವಿನ ಮನಸ್ತಾಪ ಮಾತ್ರ ಕಡಿಮೆ ಆಗಲ್ಲ. ಎಲ್ಲವೂ ಚೆನ್ನಾಗಿದ್ರೂ ಆದ್ರೂ ವಾಸಿಸುವ ಮನೆಯಲ್ಲಿ ನಕಾರಾತ್ಮಕ ಶಕ್ತಿಯ (Negative Energy) ಪ್ರಭಾವದಿಂದ ಜೀವನದಲ್ಲಿ ಶಾಂತಿಯೇ ಇರಲ್ಲ. ಇದಕ್ಕೆ ಕಾರಣ ವಾಸ್ತುದೋಷ (Vastu Dosha) ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮನೆಯಲ್ಲಿಯ ಕೆಲ ವಾಸ್ತುದೋಷಗಳಿಂದ ದಂಪತಿ ನಡುವೆ ಪದೇ ಪದೇ ಮನಸ್ತಾಪ ಉಂಟಾಗುತ್ತಿರುತ್ತದೆ. ದೋಷದ ತೀವ್ರತೆ ಹೆಚ್ಚಿದ್ರೆ ಗಂಡ-ಹೆಂಡತಿ ಬೇರೆಯಾಗುವ ಸಾಧ್ಯತೆಗಳಿರುತ್ತವೆ.
ಪತಿ-ಪತ್ನಿಯರ ನಡುವಿನ ಸಮಸ್ಯೆಗಳ ಹಿಂದೆ ಹಲವಾರು ಕಾರಣಗಳಿರಬಹುದು. ವಾಸಿಸುವ ಮನೆಯೂ ಅಲ್ಲಿರುವ ಜನರ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹೀಗೆ ಆಗುತ್ತಿದ್ದರೆ ವಾಸ್ತುದೋಷ ಸರಿಪಡಿಸಿಕೊಳ್ಳಬೇಕು. ಮನೆ ಕಟ್ಟುವಾಗಲೇ ವಾಸ್ತು ನೋಡಿಕೊಳ್ಳಬೇಕು. ವಾಸ್ತುಶಾಸ್ತ್ರಜ್ಞರ ಪ್ರಕಾರ ಆ ದೋಷಗಳು ಏನು ಅಂತ ನೋಡೋಣ ಬನ್ನಿ.
1.ಸಮತೋಲನ ವಾಸ್ತು: ಮನೆಯಲ್ಲಿ ಪಂಚಭೂತಗಳು ಸಮತೋಲನ ಸ್ಥಿತಿಯಲ್ಲಿರಬೇಕು. ಮನೆ ನಿರ್ಮಿಸುವಾಗ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶಕ್ಕೆ ಮೊದಲ ಆದ್ಯತೆ ನೀಡಬೇಕು. ಮನೆಯಲ್ಲಿ ಸೂರ್ಯನ ಬೆಳಕು, ಶುದ್ಧ ಗಾಳಿ ಬರುವಂತೆ ನೋಡಿಕೊಳ್ಳಬೇಕು.
ಚಾಣಕ್ಯ ನೀತಿ: ಹೆಂಡತಿ ತನ್ನ ಪತಿಗೆ ಎಂದಿಗೂ ಈ ವಿಷಯಗಳನ್ನು ಹೇಳಿಕೊಳ್ಳಬಾರದು!
2.ಅಡುಗೆ ಮನೆ: ಗಂಡ ಮತ್ತು ಹೆಂಡತಿ ನಡುವಿನ ಸಂಬಂಧ ಗಟ್ಟಿಗೊಳಿಸಲು ಅಡುಗೆ ಮನೆಯ ವಾಸ್ತು ಪ್ರಭಾವ ಬೀರುತ್ತದೆ. ಅಡುಗೆಕೋಣೆ ಮನೆಯ ಆಗ್ನೇಯ ಭಾಗದಲ್ಲಿರುವಂತೆ ನೋಡಿಕೊಳ್ಳಬೇಕು. ಇಲ್ಲಿ ತಯಾರಾಗುವ ಆಹಾರವನ್ನೇ ಮನೆಯ ಸದಸ್ಯರು ಸೇವನೆ ಮಾಡೋದರಿಂದ ವಾಸ್ತುವಿನ ಪ್ರಭಾವ ಎಲ್ಲರ ಮೇಲೆ ಬೀರುತ್ತದೆ. ಅಡುಗೆಕೋಣೆಗೆ ಶುದ್ಧ ಗಾಳಿ ಮತ್ತು ಬೆಳಕು ಬರುವಂತೆ ನೋಡಬೇಕು.
3.ಬೆಡ್‌ರೂಮ್ ವಾಸ್ತು: ಗಂಡ-ಹೆಂಡತಿಗೆ ಬೆಡ್‌ರೂಮ್ ಪ್ರಮುಖವಾದ ಸ್ಥಳ. ಇಲ್ಲಿಯೇ ಹೊಸ ಜೀವ ಸೃಷ್ಟಿಗೆ ಮೂಲ. ಬೆಡ್ ಗೋಡೆಗೆ ಅಂಟಿಕೊಂಡಿದ್ದರೆ ಅದು ಗಂಡ-ಹೆಂಡತಿಯ ದೂರವನ್ನು ತಿಳಿಸುತ್ತದೆ. ಹಾಸಿಗೆಯನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು. ಬೆಡ್‌ರೂಮಿನ ವಾಸ್ತುದೋಷ ಇಡೀ ಮನೆಯ ಅಶಾಂತಿಗೆ ಕಾರಣವಾಗಬಹುದು. ನಿಯಮಿತವಾಗಿ ಬೆಡ್‌ರೂಮ್ ಸ್ವಚ್ಛಗೊಳಿಸುತ್ತಿರಬೇಕು. ಬೆಡ್‌ರೂಮ್‌ನಲ್ಲಿಯ ವಾಸ್ತುದೋಷ ನಕಾರಾತ್ಮಕ ಶಕ್ತಿ ಇಡೀ ಮನೆಯನ್ನು ಆವರಿಸುವ ಸಾಧ್ಯತೆ ಇರುತ್ತದೆ.
ವೀರ್ಯ ಹೆಚ್ಚಳಕ್ಕೆ ಏನು ತಿನ್ನಬೇಕು ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ಔಷಧ
4.ಸ್ನಾನದ ಕೋಣೆ: ಸ್ನಾನದ ಕೋಣೆಯ ವಾಸ್ತು ತಪ್ಪಾಗಿದ್ರೆ ಮನೆಯಲ್ಲಿಯ ಧನಾತ್ಮಕ ಶಕ್ತಿ ನಾಶ ಮಾಡುತ್ತದೆ. ಸ್ನಾನಗೃಹವನ್ನು ಎಂದಿಗೂ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸಬಾರದು. ಬಾತ್‌ರೂಮ್‌ನಲ್ಲಿರೋ ವಸ್ತುಗಳ ಬಗ್ಗೆಯೂ ವಾಸ್ತುಶಾಸ್ತ್ರ ವಿವರಣೆ ನೀಡುತ್ತದೆ.