ಭಾರತದ ಸ್ವಾತಂತ್ರ್ಯಕ್ಕೆ ಕೇಳಿದ್ರು ಶುಭ ಮಹೂರ್ತ, ಆಗಸ್ಟ್‌ 15ರ ದಿನಕ್ಕಾಗಿ ಕೇಳಲಾಗಿತ್ತು ಜಾತಕ!

By Santosh Naik  |  First Published Aug 15, 2022, 4:51 PM IST

1946ರ ಅಂತ್ಯದ ವೇಳೆಗಾಗಲೇ ಭಾರತ, ಮುಂದಿನ ವರ್ಷದೊಳಗಾಗಿ ಸ್ವತಂತ್ರ ದೇಶವಾಗಲಿದೆ ಎನ್ನುವ ಮಾತುಗಳು ಆರಂಭವಾಗಿದ್ದವು. ಬ್ರಿಟಿಷರು ಭಾರತವನ್ನು ತೊರೆಯುವುದು ಬಹುತೇಕವಾಗಿ ಖಚಿತವಾಗಿತ್ತು. ಪಂಡಿತ್‌ ಜವಹರಲಾಲ್‌ ನೆಹರೂ ಪ್ರಧಾನಮಂತ್ರಿಯಾಗಿ ಹಾಗೂ ಡಾ.ರಾಜೇಂದ್ರ ಪ್ರಸಾದ್ ದೇಶದ ಮೊದಲ ರಾಷ್ಟ್ರಪತಿ ಆಗುವುದು ನಿಶ್ಚಿತವಾಗಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದವು. 1947ರಲ್ಲಿ ಕೊನೆಯ ವೈಸ್‌ ರಾಯ್‌ ಆಗಿದ್ದ ಲಾರ್ಡ್‌ ಮೌಂಟ್‌ಬ್ಯಾಟನ್‌ ವಾಪಾಸ್‌ ಹೋದ ಬೆನ್ನಲ್ಲಿಯೇ, ದೇಶ ವಿಭಜನೆಯ ಬೆಂಕಿಯಲ್ಲಿ ಬೇಯುತ್ತಿತ್ತು. ಭಾರತ ಹಾಗೂ ಪಾಕಿಸ್ತಾನ ಎನ್ನುವ ದೇಶ ನಿರ್ಮಾಣವಾಗಿದ್ದವು.
 


ನವದೆಹಲಿ (ಆ.15): 1946ರ ವೇಳೆಗಾಗಲೇ ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದುವುದು ಖಚಿತವಾಗಿತ್ತು. ಈ ವೇಳೆ ಭಾರತವು ತನ್ನ ಮೊದಲ ಸ್ವಾತಂತ್ರ್ಯೋತ್ಸವವನ್ನು ಯಾವ ದಿನ ಆಚರಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದವು. ಬ್ರಿಟಿಷರು ಆಗಸ್ಟ್‌ 14 ಹಾಗೂ 15ಅನ್ನು ನೀಡಿದ್ದರು. ಇದರಲ್ಲಿ ಒಂದು ದಿನವನ್ನು ಪಾಕಿಸ್ತಾನದ ರಚನೆಗಾಗಿ ಮೀಸಲಿಡಲಾಗಿತ್ತು. ಜಿನ್ನಾ ಅವರ ನೇತೃತ್ವದಲ್ಲಿ ಪಾಕಿಸ್ತಾನವು ಆಗಸ್ಟ್‌ 14ರ ದಿನವನ್ನು ಆಯ್ಕೆ ಮಾಡಿಕೊಂಡಿತು. ಸ್ವತಂತ್ರ ದೇಶದ ಮಹೂರ್ತವನ್ನು ಪಂಚಾಗದಿಂದ ನೋಡಿದ್ದು ಪಂಡಿತ ವ್ಯಾಸರು. ಪಂಡಿತ ವ್ಯಾಸ್‌ ಅವರ ಪುತ್ರ ಹಾಗೂ ದೂರದರ್ಶನದ ಮಾಜಿ ಮಹಾನಿರ್ದೇಶಕರಾಗಿದ್ದ ಡಾ.ರಾಜಶೇಖರ್‌ ವ್ಯಾಸ್‌ ಹೇಳಿದ್ದ ಪ್ರಕಾರ, ಮೊಹಮದ್ ಅಲಿ ಜಿನ್ನಾ, ಮಹೂರ್ತ ಹಾಗೂ ಪಂಚಾಂಗದ ಮೇಲೆ ನಂಬಿಕೆ ಹೊಂದಿರಲಿಲ್ಲ. ಆ ಕಾರಣಕ್ಕಾಗಿ ಅವರು ಆಗಸ್ಟ್‌ 14 ಅನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಪಂಡಿತ ವ್ಯಾಸರು ಆಗಸ್ಟ್‌ 14ರ ದಿನದಂದು ಗ್ರಹಗತಿಗಳು ಚೆನ್ನಾಗಿಲ್ಲ ಎಂದು ಜಿನ್ನಾ ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಹಾಗೇನಾದರೂ ಆಗಸ್ಟ್‌ 14 ರಂದು ದೇಶ ನಿರ್ಮಾಣವಾದಲ್ಲಿ, ಅದು ಯಾವಾಗಲೂ ಅಸ್ಥಿರವಾಗಿರಬಹುದು, ಏಕೆಂದರೆ ಅಂದು ಲಗ್ನ (ಜಾತಕದ ಮೊದಲ ಸ್ಥಾನ) ಸಹ ಅಸ್ಥಿರವಾಗಿದೆ. ಆದರೆ, ಜಿನ್ನಾ ಇದ್ಯಾವುದನ್ನೂ ಒಪ್ಪಿರಲಿಲ್ಲ. ದೈನಿಕ್‌ ಭಾಸ್ಕರ್‌ ಪತ್ರಿಕೆ ಈ ಕುರಿತಾಗಿ ದಾಖಲೆಗಳ ಸಮೇತ ವರದಿಯನ್ನು ಮಾಡಿದೆ.

14-15ರ ರಾತ್ರಿ 12 ಗಂಟೆಗೆ ಸಮಯ ನಿಗದಿ: ಡಾ. ರಾಜಶೇಖರ್ ವ್ಯಾಸ, ಪಂಡಿತ್ ವ್ಯಾಸರು ನೀಡಿದ ಸಲಹೆಯನ್ನು ಮತ್ತಷ್ಟು ವಿವರಿಸಿದ್ದಾರೆ. ಸೂರ್ಯನಾರಾಯಣ ವ್ಯಾಸ್, ಡಾ. ರಾಜೇಂದ್ರ ಪ್ರಸಾದ್ ಮತ್ತು ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಆಗಸ್ಟ್ 14-15 ರ ನಡುವೆ 12 ಗಂಟೆಯ ಸಮಯವನ್ನು ನಿಗದಿಪಡಿಸಿದರು. ಕಾರಣ ಅಂದು ಭಾರತದ ಜಾತಕದಲ್ಲಿ ಸ್ಥಿರವಾದ ವೃಷಭ ರಾಶಿ, ಈ ನಿಶ್ಚಯವನ್ನು ಸ್ಥಿರವೆಂದು ಪರಿಗಣಿಸಲಾಗುತ್ತದೆ. ಪಂಡಿತ್‌ ವ್ಯಾಸರ ಪ್ರಕಾರ ಈ ನಿಶ್ಚಯದಲ್ಲಿ ದೇಶ ಸ್ವತಂತ್ರವಾದರೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಎರಡೂ ಸ್ಥಿರವಾಗಿರುತ್ತದೆ ಎಂಬುದು ವ್ಯಾಸರ ವಾದವಾಗಿತ್ತು.

Tap to resize

Latest Videos

undefined

ಆಗಸ್ಟ್ 15 ರಂದು ರಾತ್ರಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು: ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಾರೋಹಣ ಮಾಡುವ ಸಂಪ್ರದಾಯ ಬೆಳಗ್ಗೆಯಾದರೂ 1947ರ ಆಗಸ್ಟ್ 15ರಂದು ರಾತ್ರಿ 12 ಗಂಟೆಗೆ ಪಂ. ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆದರೆ, ಇದನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ, ಯಾಕೆಂದರೆ ಈ ಸಲಹೆಯನ್ನು ಪಂಡಿತ್ ವ್ಯಾಸರ ಸಲಹೆಯಂತೆ ನೀಡಲಾಗಿತ್ತು. ಯಾವ ಸಮಯದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜವನ್ನು ಹಾರಿಸಬೇಕು ಎಂದು ನೀವು ಕೇಳುವುದಾದರೆ, ಆಗಸ್ಟ್‌ 14 ಹಾಗೂ 15ರ ಮಧ್ಯರಾತ್ರಿಯಂದು ಹಾರಿಸಬೇಕು ಎಂದು ರಾಜೇಂದ್ರ ಪ್ರಸಾದ್‌ ಅವರಿಗೆ ಹೇಳಿದ್ದರು. ಔಪಚಾರಿಕ ಕಾರ್ಯಕ್ರಮಗಳು ಬೇಕಾದಲ್ಲಿ ಬೆಳಗ್ಗೆ ನಡೆಯಲಿ, ಮೊದಲ ಧ್ವಜಾರೋಹಣ ಮಧ್ಯರಾತ್ರಿಯಲ್ಲೇ ನಡೆಯಬೇಕು ಎಂದಿದ್ದರು. ಪಂ. ನೆಹರೂ ಅವರ ಮಾತು ಕೇಳಿ ಮಧ್ಯರಾತ್ರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದರು. 1980ರಲ್ಲಿ ಟೈಮ್‌ ಮ್ಯಾಗಝೀನ್‌ ಪ್ರಕಟಿಸಿದ ವರದಿಯೊಂದರಲ್ಲಿ ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರ ಮಾತುಗಳನ್ನು ಸೇರಿಸಿತ್ತು. "ಭಾರತದ ಸ್ವಾತಂತ್ರ್ಯವನ್ನು ನಿರ್ಣಯಿಸುವ ನಿಟ್ಟಿನಲ್ಲಿ ಉಜ್ಜಯನಿಯ ಪಂಡಿತರೊಬ್ಬರು ಸಹಾಯ ಮಾಡಿದ್ದರು. ಖಗೋಳ, ನಕ್ಷತ್ರಗಳನ್ನು ನೋಡಿ ಅವರು ದಿನ ನಿಶ್ಚಯ ಮಾಡಿದ್ದರು' ಎಂದು ಬ್ಯಾಟನ್‌ ಹೇಳಿದ್ದರು ಎಂದು ಬರೆಯಲಾಗಿತ್ತು.

ಮಧ್ಯರಾತ್ರಿ ಸಂಸತ್‌ ಭವನವನ್ನು ತೊಳೆದು, ಶುದ್ದೀಕರಣ: ರಾಜಶೇಖರ್ ವ್ಯಾಸ್ ಪ್ರಕಾರ, ಪಂ. ಸೂರ್ಯನಾರಾಯಣ ವ್ಯಾಸ್ ಅವರು ಆಗಸ್ಟ್ 15 ರ ರಾತ್ರಿ ಸಂಸತ್ ಭವನವನ್ನು ಶುದ್ಧೀಕರಿಸಬೇಕೆಂದು ಸಲಹೆ ನೀಡಿದರು. ಇದರ ಜವಾಬ್ದಾರಿಯನ್ನು ಗೋಸ್ವಾಮಿ ಗಿರ್ಧಾರಿ ಲಾಲ್ ಅವರಿಗೆ ನೀಡಲಾಯಿತು. ಅವರು ಸಂಸತ್ ಭವನವನ್ನು ತೊಳೆದು ಶುದ್ಧೀಕರಿಸಿದ್ದರು.
ಕೆಟ್ಟ ಮಹೂರ್ತ ಹಾಗೂ ದಿನವನ್ನು ಆರಿಸಿಕೊಂಡಿದ್ದ ಜಿನ್ನಾ: ಭಾರತದ ಸ್ವಾತಂತ್ರ್ಯ ಮತ್ತು ಪಾಕಿಸ್ತಾನದ ರಚನೆಯ ದಿನಗಳಲ್ಲಿ, ಮುಹಮ್ಮದ್ ಅಲಿ ಜಿನ್ನಾ ಅವರು 1947ರ ಆಗಸ್ಟ್ 14 ಅನ್ನು ಸ್ವಾತಂತ್ರ್ಯದ ದಿನವನ್ನಾಗಿ ಆಯ್ಕೆ ಮಾಡಿದರು. ಮುಹೂರ್ತ ಮುಂತಾದವುಗಳಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಪಂಡಿತ್‌ ಅವರು ಆಗಸ್ಟ್ 14 ಒಳ್ಳೆಯ ದಿನವಲ್ಲ, ಅಂದು ಅಸ್ಥಿರ ಲಗ್ನ ಅಂದರೆ ಮೇಷ ಲಗ್ನವಿದೆ, ಹಾಗೆಯೇ ಗುರು ಕೂಡ ಶತ್ರುಸ್ಥಾನದಲ್ಲಿದ್ದಾನೆ, ಅದು ದೇಶವನ್ನು ಯಾವಾಗಲೂ ಅಸ್ಥಿರವಾಗಿಡುತ್ತದೆ ಎಂದು ವ್ಯಾಸರು ಜಿನ್ನಾಗೆ ಎಚ್ಚರಿಕೆ ನೀಡಿದ್ದರು, ಆದರೆ ಜಿನ್ನಾ ಒಪ್ಪಲಿಲ್ಲ. ಜಿನ್ನಾ ಅವರ ಪತ್ನಿ ರತ್ನಬಾಯಿ ಪಂಡಿತ್‌ ಸೂರ್ಯನಾರಾಯಣ್‌ ವ್ಯಾಸ್‌ ಅವರ ಮೇಲೆ ನಂಬಿಕೆ ಇರಿಸಿದ್ದರಾದರೂ 1929ರಲ್ಲಿಯೇ ಅವರು ನಿಧನರಾಗಿದ್ದರು.

ಕಾಶ್ಮೀರದ ಲಾಲ್‌ ಚೌಕದಲ್ಲಿ ವಂದೇ ಮಾತರಂ, ಧ್ವಜಾರೋಹಣ ಮಾಡಿ ಡಾನ್ಸ್‌ ಮಾಡಿದ ಮಮತಾ ಬ್ಯಾನರ್ಜಿ!

1930ರಲ್ಲಿಯೇ ಭವಿಷ್ಯ: 1902ರಲ್ಲಿ ಉಜ್ಜಯಿನಿಯಲ್ಲಿ ಜನಿಸಿದ ಪಂಡಿತ್‌ ಸೂರ್ಯನಾರಾಯಣ ವ್ಯಾಸರು 1921-1922ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾದರು. ಅವರು ಜ್ಯೋತಿಷಿಯೂ ಆಗಿದ್ದರಿಂದ ಅದರ ಮೇಲೆ ಲೇಖನಗಳನ್ನು ಬರೆಯುತ್ತಿದ್ದರು. 1930 ರಲ್ಲಿ, ಆಜ್ ಎಂಬ ನಿಯತಕಾಲಿಕದ ಲೇಖನದಲ್ಲಿ, ಅವರು ಆಗಸ್ಟ್ 1947 ರಲ್ಲಿ ಭಾರತ ಸ್ವತಂತ್ರವಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

Independence Day Photos: ಕೆಂಪುಕೋಟೆಯಲ್ಲಿ ಹಾರಿದ ತ್ರಿವರ್ಣ ಧ್ವಜ!

ರಾಜೇಂದ್ರ ಪ್ರಸಾದ್‌ ರಾಷ್ಟ್ರಪತಿಯಾಗುವ ಭವಿಷ್ಯ: 1952ರ ವೇಳೆಗೆ ಡಾ. ರಾಜೇಂದ್ರ ಪ್ರಸಾದ್‌ ಅವರ ಅಧ್ಯಕ್ಷ ಅವಧಿ ಕೊನೆಯಾಗುವ ಹಾದಿಯಲ್ಲಿತ್ತು. 2ನೇ ರಾಷ್ಟ್ರಪತಿ ಆಯ್ಕೆಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ಆಗುತ್ತಿದ್ದವು. ಈ ಹಂತದಲ್ಲಿ ಪಂಡಿತ್‌ ವ್ಯಾಸ್‌ ಅವರು ರಾಜೇಂದ್ರ ಪ್ರಸಾದ್‌ ಅವರ ಜಾತಕವನ್ನು ನೋಡಿ, ಇದರ ಪ್ರಕಾರ ಹೇಳುವುದಾದರೆ, ಮತ್ತೊಮ್ಮೆ ನೀವು ದೇಶಕ್ಕೆ ರಾಷ್ಟ್ರಪತಿ ಆಗಲಿರುವುದಾಗಿ ತಿಳಿಸಿದ್ದರು. ಕೊನೆಗೆ ಇದು ಕೂಡ ನಿಜವಾಗಿ ಅವರು ರಾಷ್ಟ್ರಪತಿಯಾಗಿ ಪುನರಾಯ್ಕೆಯಾದರು. ಈ ಕುರಿತಾಗಿ ರಾಜೇಂದ್ರ ಪ್ರಸಾದ್‌ ಅವರು ಪಂಡಿತ್‌ ವ್ಯಾಸರಿಗೆ ಪತ್ರವನ್ನೂ ಬರೆದಿದ್ದರು. ನೀವು ಹೇಳಿದಂತೆ ನಿಮ್ಮ ಮಾತು ನಿಜವಾಗಿದೆ ಎಂದು ರಾಜೇಂದ್ರ ಪ್ರಸಾದ್‌ ಬರೆದಿದ್ದರು.

click me!