2025ರಲ್ಲಾದರೂ ನಿಮಗೆ ದುಡ್ಡು ಬರ್ಬೇಕಾ? ಹೊಸ ವರ್ಷದಲ್ಲಿ ಹೀಗ್ ಮಾಡಿ ಸಾಕು

By Roopa Hegde  |  First Published Dec 21, 2024, 12:07 PM IST

ಹೊಸ ವರ್ಷದ ಆರಂಭ ಚೆನ್ನಾಗಿದ್ರೆ ಇಡೀ ವರ್ಷ ಆನಂದ ತುಂಬಿರುತ್ತದೆ. ವರ್ಷಾರಂಭವನ್ನು ತುಳಸಿ ಪೂಜೆ ಮೂಲಕ ನೀವು ಶುರು ಮಾಡ್ಬಹುದು. ತುಳಸಿಗೆ ಒಂದು ವಸ್ತುವನ್ನು ಹಾಕಿ ಪೂಜೆ ಮಾಡಿದ್ರೆ  ಇಡೀ ವರ್ಷ ನೆಮ್ಮದಿ ನೆಲೆಸಿರುತ್ತದೆ. 
 


2025ರ ವರ್ಷಾರಂಭ (New Year)ಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ. 2025ರ ಸ್ವಾಗತ (Welcome) ಕ್ಕೆ ಇಡೀ ವಿಶ್ವವೇ ಸಜ್ಜಾಗಿದೆ. 2024ಕ್ಕೆ ವಿದಾಯ ಹೇಳಿ 2025ಕ್ಕೆ ವೆಲ್ ಕಂ ಮಾಡ್ತಿರುವ ಜನರು, ಮುಂದಿನ ವರ್ಷ ಸುಖ, ಸಂತೋಷದಿಂದ ಕೂಡಿರಲಿ, ಯಶಸ್ಸು, ನೆಮ್ಮದಿ ಸಿಗಲಿ  ಎಂದು ಬಯಸುತ್ತಿದ್ದಾರೆ. ನಿಮ್ಮ ಎಲ್ಲ ಆಸೆ, ಆಕಾಂಕ್ಷೆಗಳು 2025ರಲ್ಲಿ ಈಡೇರಬೇಕು ಎಂದಾದ್ರೆ ನೀವು ಮೊದಲ ದಿನವನ್ನು ದೇವರ ಪೂಜೆ ಮಾಡುವ ಮೂಲಕ ಶುರು ಮಾಡಿ. ಹೊಸ ವರ್ಷದ ಮೊದಲ ದಿನ ಈ ಎರಡು ಕೆಲಸಗಳನ್ನು ನೀವು ಮಾಡಿದ್ರೆ ವರ್ಷಪೂರ್ತಿ ನೆಮ್ಮದಿ, ಆರೋಗ್ಯ, ಆರ್ಥಿಕ ಸ್ಥಿತಿಯಲ್ಲಿ ವೃದ್ಧಿ ನಿಮ್ಮದಾಗುತ್ತದೆ.  

ವರ್ಷದ ಮೊದಲ ದಿನ ತುಳಸಿ ಗಿಡ (Tulsi plant) ವನ್ನು ಮನೆಗೆ ತನ್ನಿ : ತುಳಸಿಯನ್ನು ಲಕ್ಷ್ಮಿ (Lakshmi)ಯ ಇನ್ನೊಂದು ರೂಪ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮ (Hinduism)ದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಶ್ರೀಹರಿ ಮತ್ತು ಲಕ್ಷ್ಮಿ ನೆಲೆಸಿರುತ್ತಾರೆಂದು ನಂಬಲಾಗಿದೆ. ಭಗವಂತ ವಿಷ್ಣು, ತುಳಸಿ ದಳವಿಲ್ಲದೆ ಯಾವುದೇ ನೈವೇದ್ಯವನ್ನು ಸ್ವೀಕರಿಸುವುದಿಲ್ಲ. ಹಾಗಾಗಿಯೇ ತುಳಸಿಯನ್ನು ಭಗವಂತ ವಿಷ್ಣುವಿನ ಪ್ರಿಯವಾದ ವಸ್ತು ಎಂದು ಪರಿಗಣಿಸಲಾಗುತ್ತದೆ. ವರ್ಷದ ಮೊದಲ ದಿನ ನೀವು ತುಳಸಿ ಗಿಡವನ್ನು ತಂದು ಮನೆಯಲ್ಲಿ ನೆಡಬೇಕು. ಇದ್ರಿಂದ ವ್ಯಕ್ತಿ ಮತ್ತು ಅವನ ಕುಟುಂಬ ಸದಸ್ಯರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.  ಆರ್ಥಿಕ ಲಾಭ ಪ್ರಾಪ್ತಿಯಾಗುತ್ತದೆ. 

Tap to resize

Latest Videos

undefined

ಡಿಸೆಂಬರ್ 26 ರಿಂದ 5 ರಾಶಿಗೆ ಅದೃಷ್ಟ, ವಿಷ್ಣುವಿನ ಆಶೀರ್ವಾದ ದಿಂದ ಸಂಪತ್ತು

ತುಳಸಿ ಪೂಜೆ : ಹೊಸ ವರ್ಷದ ಮೊದಲ ದಿನ ತುಳಸಿ ಗಿಡ ಬೆಳೆಸುವುದಲ್ಲದೆ ಅದಕ್ಕೆ ತಪ್ಪದೆ ಪೂಜೆ ಮಾಡಬೇಕು. ಯಾರು ಮನೆಯಲ್ಲಿ ತುಳಸಿ ಪೂಜೆ ಮಾಡ್ತಾರೋ ಅವರಿಗೆ ಎಂದೂ ಬಡತನ  ಕಾಡೋದಿಲ್ಲ. ಹಾಗೆಯೇ ವರ್ಷದ ಮೊದಲ ದಿನ ನೀವು ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸಬೇಕು.  ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದ್ರಿಂದ ವ್ಯಕ್ತಿಯ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ. ಇದಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ನಾಶವಾಗಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. 

ಹೊಸ ವರ್ಷದ ಮೊದಲ ದಿನ ತುಳಸಿಗೆ ಜಲ ಅರ್ಪಿಸುವುದ್ರಿಂದ ಸಾಕಷ್ಟು ಲಾಭವಿದೆ. ಆದ್ರೆ ಇದನ್ನು ಯಾವಾಗ ಮಾಡ್ಬೇಕು ಎಂಬುದು ನಿಮಗೆ ತಿಳಿದಿರಬೇಕು. ನೀವು ಸೂರ್ಯಾಸ್ತವಾದ ಮೇಲೆ ತುಳಸಿಗೆ ನೀರು ಹಾಕುವ ತಪ್ಪನ್ನು ಮಾಡಬೇಡಿ. ಇದ್ರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ನೀವು ಸೂರ್ಯೋದಯದ ಸಮಯದಲ್ಲಿ ತುಳಸಿಗೆ ಜಲವನ್ನು ಅರ್ಪಿಸಿ ಪೂಜೆ ಮಾಡಿ.

ಈ ರಾಶಿ ಹೆಣ್ಣು ಮಕ್ಕಳಿಂದ ಗಂಡನಿಗೆ ಶ್ರೀಮಂತಿಕೆ, ಗೌರವ, ಯಶಸ್ಸು, ಸಂಪತ್ತು ಬರುತ್ತೆ 

ತುಳಸಿಗೆ ಜಲ ಅರ್ಪಿಸುವ ವೇಳೆ ಈ ಮಂತ್ರ ಜಪಿಸಿ : ತುಳಸಿಗೆ ನೀರನ್ನು ಹಾಕುವಾಗ ಓಂ ಸುಭದ್ರಾಯ ನಮಃ ಮಂತ್ರವನ್ನು ಜಪಿಸಿ. ಈ ಮಂತ್ರವನ್ನು ನೀವು 11 ಬಾರಿ ಜಪಿಸಿದ್ರೆ ಲಾಭ ಹೆಚ್ಚು. ಈ ಮಂತ್ರ ಹೇಳುವುದ್ರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ. 

ತುಳಸಿ ಗಿಡ ಬೆಳೆಸುವ ಮುನ್ನ ಇದನ್ನು ತಿಳಿದಿರಿ : ನಿಮ್ಮ ಮನೆಗೆ ತಂದ ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ನೆಡಿ. ಈ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದರಿಂದ ವ್ಯಕ್ತಿಯ ಜೀವನವು ಸಂತೋಷದಿಂದ ಕೂಡಿರುತ್ತದೆ. ನೀವು ಆರ್ಥಿಕ ವೃದ್ಧಿಯನ್ನು ಬಯಸಿದ್ರೆ ಪೂರ್ವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು. ಏಕಾದಶಿ, ಪೂರ್ಣಿಮಾ ಮತ್ತು ಭಾನುವಾರದಂದು ತುಳಸಿ ಎಲೆಗಳನ್ನು ಕೀಳಬೇಡಿ. ಸಂಜೆ ಸಮಯದಲ್ಲಿಯೂ ತುಳಸಿ ಎಲೆಗಳನ್ನು ಕೀಳಬೇಡಿ. ಹಾಗೆ ಮಾಡಿದ್ರೆ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ. ನಿಮ್ಮ ಪೂಜೆಯ ಫಲ ನೀಡುವುದಿಲ್ಲ.    
 

click me!