ಈ ರಾಶಿಯ ಉದ್ಯಮಿಗಳಿಗೆ ಲಾಭಾಂಶ ಸಿಗುವ ಸಾಧ್ಯತೆ

By Web DeskFirst Published 17, Jan 2019, 7:28 AM IST
Highlights

ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ. ದಿನ ಆರಂಭಿಸುವ ಮುನ್ನ ರಾಶಿ ಫಲಗಳನ್ನು ನೋಡಿ ಬಿಡಿ, ಶುಭದಿನ

ಮೇಷ: ಆತುರದಿಂದ ಯಾವ ಕೆಲಸವೂ ಪೂರ್ಣವಾಗುವುದಿಲ್ಲ. ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವಾಗ ಆಲೋಚಿಸಿ ಮುಂದೆ ಸಾಗಿ

ವೃಷಭ: ಶುಭ ಕಾರ್ಯಗಳನ್ನು ಮಾಡಲು ಇದು ಒಳ್ಳೆಯ ದಿನ. ಮಹತ್ವದ ನಿರ್ಧಾರವನ್ನು ಕೈಗೊಳ್ಳುವಿರಿ. ಮದುವೆ ಮಾತುಕತೆ ನಡೆಯಲಿದೆ.

ಮಿಥುನ: ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕಾರ ಮಾಡಿ. ಎಲ್ಲದರಲ್ಲೂ ಲೋಪ ಹುಡುಕುವುದು ಬೇಡ. ಚಿಂತೆ ಕಡಿಮೆಯಾಗಲಿದೆ.

ಕಟಕ: ಹೊಸ ಕ್ಷೇತ್ರಗಳತ್ತ ಮುಖ ಮಾಡಲಿದ್ದೀರಿ. ಜಂಜಾಟಗಳಿಂದ ಹೊರಗೆ ಬರುವಿರಿ. ಅನಗತ್ಯ ವಿಚಾರಗಳಿಗೆ ಪ್ರತಿಕ್ರಿಯೆ ಬೇಡ.

ಸಿಂಹ: ಅಂದುಕೊಂಡ ಕಾರ್ಯಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಲಿದೆ. ಹೊಸ ಗೆಳೆಯರು ಪರಿಚಯವಾಗಲಿದ್ದಾರೆ. ಶುಭ ಫಲ.

ಕನ್ಯಾ: ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಅದಕ್ಕೆ ತಕ್ಕ ಕೆಲಸವನ್ನು ಮಾಡಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನೆಮ್ಮದಿ ಹೆಚ್ಚಾಗಲಿದೆ.

ತುಲಾ: ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುವವರಿಗೆ ಒಳ್ಳೆಯ ಲಾಭಾಂಶ ದೊರೆಯಲಿದೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ.

ವೃಶ್ಚಿಕ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹೊಸ ವ್ಯವಹಾರ ಕೈಗೂಡಲಿದೆ. ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ. ಕೆಲಸದಲ್ಲಿ ಜಾಗೃತೆ ಇರಲಿ.

ಧನುಸ್ಸು: ಸಂಬಂಧಗಳಿಗೆ ಬೆಲೆ ನೀಡುವಿರಿ. ಗಾಳಿ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲಿದೆ.

ಮಕರ: ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಮಂದಿಗೆ ಹೊಸ ಅವಕಾಶಗಳು ದೊರೆಯಲಿವೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ.

ಕುಂಭ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ ಯಾಗಲು ದೂರದ ಪ್ರಯಾಣ ಕೈಗೊಳ್ಳಲಿದ್ದೀರಿ. ದಿನವಿಡೀ ಉತ್ಸಾಹ ಇರಲಿದೆ.

ಮೀನ: ಸಮಯ ಸಾಧಕರಿಂದ ಅಂತರ ಕಾಯ್ದುಕೊಳ್ಳಿ. ಹೊಸ ಉದ್ಯಮದತ್ತ ಒಲವು ತೋರುವಿರಿ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ.

Last Updated 17, Jan 2019, 7:28 AM IST