ದಿನ ಭವಿಷ್ಯ: ಈ ರಾಶಿಯವರಿಗೆ ಭಯದ ವಾತಾವರಣ ಇರಲಿದೆ, ದುರ್ಗಾ ಕವಚ ಪಠಿಸಿ

By Suvarna News  |  First Published Dec 25, 2020, 7:09 AM IST

25 ಡಿಸೆಂಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ:  ಹಣಕಾಸಿನಲ್ಲಿ ವ್ಯತ್ಯಾಸ, ಮಾತಿನಲ್ಲಿ ಹಿಡಿತವಿರಲಿ, ಸಮೃದ್ಧಿ ಯೋಗ ಇರಲಿದೆ, ಗುರುಹಿರಿಯರ ಮಾರ್ಗದರ್ಶನ ಪಡೆಯಿರಿ, ಕೃಷ್ಣನಿಗೆ ತುಳಸಿ ಸಮರ್ಪಿಸಿ

ವೃಷಭ: ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ದಾಂಪತ್ಯ ಭಾವದಲ್ಲಿ ಏರುಪೇರು, ಕಳೆದ ವಸ್ತು ಸಿಗಲಿದೆ, ದುರ್ಗಾ ದೇವಸ್ಥಾನಕ್ಕೆ ಗರಿಕೆ ಸಮರ್ಪಿಸಿ

Tap to resize

Latest Videos

ಮಿಥುನ: ಹಣಕಾಸಿನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಬೋಧನಾರಂಗದಲ್ಲಿರುವವರಿಗೆ ಉತ್ತಮ ಫಲ, ವ್ಯಾಪಾರಿಗಳಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ: ಸಮೃದ್ಧಿಯ ಫಲ, ರೋಗ ನಿವಾರಣೆ, ದೇಹದಲ್ಲಿ ಸದೃಢತೆ, ಸಹೋದರರ ಬಂಧುಗಳ ಸಹಕಾರ ಇರಲಿದೆ, ಅಮ್ಮನವರ ದೇವಸ್ಥಾನಕ್ಕೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ: ಸಹೋದರರಿಂದ ಅನುಕೂಲ, ಮಕ್ಕಳಿಗೆ ವಿಶೇಷ ಸ್ಥಾನ, ಸ್ತ್ರೀಯರು ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ: ಸ್ವಂತ ಉದ್ಯೋಗಿಗಳಿಗೆ ಹಣ ಸಮೃದ್ಧಿ, ಗಂಟಲಿನಲ್ಲಿ ಕಿರಿಕಿರಿ, ಭಯದ ವಾತಾವರಣ ಇರಲಿದೆ, ಕೃಷಿಕರಿಗೆ ಹೋಟೆಲ್ ಉದ್ದಿಮೆಯವರಿಗೆ ಅನುಕೂಲ, ದುರ್ಗಾ ಕವಚ ಪಠಿಸಿ

ವಾರ ಭವಿಷ್ಯ: ಈ ರಾಶಿಯವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವ ಸಮಯವಿದು

ತುಲಾ: ಕುಟುಂಬದಲ್ಲಿ ಸ್ತ್ರೀಯರ ನಡುವೆ ಮಾತಿನ ಘರ್ಷಣೆ, ಮಾತಿನ ಮೇಲೆ ಹಿಡಿತವಿರಲಿ, ವಸ್ತು ನಷ್ಟ ಸಾಧ್ಯತೆ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ: ಓಡಾಡುವಾಗ ಎಚ್ಚರಿಕೆ ಇರಲಿ, ಮನಸ್ಸು ಚಂಚಲವಾಗಲಿದೆ, ದೊಡ್ಡ ಬದಲಾವಣೆ ಸಾಧ್ಯತೆ, ಹಣಕಾಸಿನಲ್ಲಿ ಎಚ್ಚರವಾಗಿರಿ, ಅಮ್ಮನವರ ಪ್ರಾರ್ಥನೆ ಮಾಡಿ

ಧನುಸ್ಸು: ಆತಂಕ ಬೇಡ, ಉತ್ತಮ ದಿನವಾಗಿರಲಿದೆ, ಗಣಪತಿಗೆ ಮೋದಕ ಸಮರ್ಪಣೆ ಮಾಡಿ

ಮಕರ: ವಿದೇಶಗಳಿಂದ ಶುಭವಾರ್ತೆ, ವಿದ್ಯಾರ್ಥಿಗಳ ಮನಸ್ಸು ಏರುಪೇರಾಗಲಿದೆ, ಚಂಚಲತೆ, ದುರ್ಗೆ ಹಾಗೂ ಗಣಪತಿ ಪ್ರಾರ್ಥನೆ ಮಾಡಿ

ಕುಂಭ: ಪ್ರಯಾಣದಲ್ಲಿ ಎಚ್ಚರವಾಗಿರಿ, ಉತ್ತಮ ದಿನವಾಗಿರಲಿದೆ, ದುರ್ಗೆಗೆ ಗರಿಕೆ ಸಮರ್ಪಣೆ ಮಾಡಿ

ಮೀನ: ಉತ್ಸಾಹ ಶಕ್ತಿ ಇರಲಿದೆ, ಧೈರ್ಯದ ದಿನ, ದುಶ್ಚಟಗಳ ಬಗ್ಗೆ ಜಾಗೃತಿ ಇರಲಿ, ಮಹಾಗಣಪತಿ ಪ್ರಾರ್ಥನೆ ಮಾಡಿ

click me!