ಈ ರಾಶಿಗೆ ಇಂದು ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು

By Web DeskFirst Published Jan 16, 2019, 7:26 AM IST
Highlights

ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ. ದಿನ ಆರಂಭಿಸುವ ಮುನ್ನ ರಾಶಿ ಫಲಗಳನ್ನು ನೋಡಿ ಬಿಡಿ, ಶುಭದಿನ

ಮೇಷ: ಬೆಂಕಿ ಬಗ್ಗೆ ಎಚ್ಚರ ಇರಲಿ. ಮನಸ್ಸಲ್ಲಿ ಭಯ, ಆತಂಕವಿದ್ದಲ್ಲಿ ಅದನ್ನು ಧ್ಯಾನದಿಂದ ಮಾತ್ರ ದೂರಾಗಿಸಲು ಸಾಧ್ಯ. ಮಕ್ಕಳಿಗೆ ಶುಭದಿನ

ವೃಷಭ: ಇಂದು ತುಂಬಾ ಮೌನವಾಗಿರುವಿರಿ. ಆದರೆ ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು ಸಿಗಲಿದೆ. ಶುಭ ದಿನ.

ಮಿಥುನ: ಮನುಷ್ಯನೂ ವಿಷ ಜಂತುವಿದ್ದಂತೆ. ಹಾಗಾಗಿ ತಕ್ಷಣ ಯಾರನ್ನೂ ನಂಬದಿರುವುದು ಒಳಿತು. ಮನೆಯಲ್ಲಿ ನೆಮ್ಮದಿ ಇರಲಿದೆ.

ಕಟಕ: ಆಗುವ ಕೆಲಸ ಆಗುತ್ತದೆಂದು ಸುಮ್ಮನೆ ಇದ್ದರೆ ಯಾವುದು ಆಗದು. ಅದರಲ್ಲಿ ನಿಮ್ಮ ಶ್ರಮ ವೂ ಇರಬೇಕು. ಆಗ ಮಾತ್ರ ಜಯ ಸಿಗುತ್ತದೆ.

ಸಿಂಹ: ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದಿರಿ. ಅತಿಯಾದ ಸಿಟ್ಟಿನಿಂದ ಸಂಬಂಧದಲ್ಲಿ ಬಿರುಕು ಸಾಧ್ಯ. ಆದಷ್ಟು ಸಂಗೀತ ಕೇಳಿ ನಿರಾಳರಾಗಿ.

ಕನ್ಯಾ: ಇಷ್ಟು ದಿನ ನೀವು ಪ್ರಯತ್ನಿಸುತ್ತಿದ್ದ ವಿಷಯದಲ್ಲಿ ಸಫಲರಾಗುವಿರಿ. ಮನೆಯವರಿಂದ ಪ್ರಶಂಸೆಗೆ ಪಾತ್ರರಾಗುವಿರಿ.

ತುಲಾ: ದೂರದ ಪ್ರಯಾಣದಿಂದ ಆಯಾಸವಾಗಲಿದೆ. ಮಹತ್ವದ ವಿಚಾರವಗಳನ್ನು ಮನೆಯವರ ತುಲಾ ಜೊತೆ ಸೇರಿ ನಿರ್ಧರಿಸಿದರೆ ಒಳಿತು.

ವೃಶ್ಚಿಕ: ಹೊಸ ಸ್ನೇಹಿತರು ಸಿಗಲಿದ್ದು, ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ. ಪುರುಷರಿಗೆ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ಧನುಸ್ಸು: ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಬೇಡ. ಎಲ್ಲಾ ಕಾರ್ಯ ಸುಗಮವಾಗಿ ಆಗಲಿದೆ. ತಲೆಕೆಡಿಸಿ ಕೊಂಡರೆ ಆರೋಗ್ಯದಲ್ಲಿ ಏರುಪೇರಾಗಲಿದೆ.

ಮಕರ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ. ದಿನದಂತ್ಯದಲ್ಲಿ ಧನಲಾಭ. ಮಕ್ಕಳಿಂದ ಮನೆಯಲ್ಲಿ ನೆಮ್ಮದಿ. ಮಕ್ಕಳಿಗೆ ಶುಭ ದಿನ

ಕುಂಭ: ಮಕ್ಕಳಿಗೆ ಓದಿನಲ್ಲಿ ಸ್ವಲ್ಪ ಅಡೆತಡೆ ಬಂದರೂ ದಿನದಂತ್ಯದಲ್ಲಿ ನಿರಾಳರಾಗಿ ಪೂರ್ಣಗೊಳಿ ಸುವಿರಿ. ಶ್ರಮದ ದಿನ ನಿಮ್ಮದಾಗುತ್ತದೆ.

ಮೀನ: ಆರೋಗ್ಯದ ಕಡೆ ಗಮನವಿರಲಿ. ದೇಹಕ್ಕೆ ಒಗ್ಗುವ ಆಹಾರ ಪದಾರ್ಥಗಳನ್ನು ಸೇವಿಸಿ. ದಿನದಂತ್ಯದಲ್ಲಿ ಸಿಹಿ ಸುದ್ದಿ ಸಿಗಲಿದೆ.

click me!