ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಕಲಹ ಉಂಟಾಗುವ ಸಾಧ್ಯತೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

By Suvarna News  |  First Published Dec 11, 2020, 6:57 AM IST

11 ಡಿಸೆಂಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ: ಸಂಗಾತಿಯಿಂದ ಸಮಾಧಾನದ ಮಾತುಗಳು, ವಸ್ತು ನಷ್ಟ, ಪೇಚಾಡುವ ಸಾಧ್ಯತೆ ಇದೆ, ಎಚ್ಚರವಾಗಿರಿ. ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ

ವೃಷಭ: ದಾಂಪತ್ಯದಲ್ಲಿ ವ್ಯತ್ಯಾಸ, ಮಾತಿನಲ್ಲಿ ಎಚ್ಚರಿಕೆ ಇರಲಿ, ವಸ್ತು ಪ್ರಾಪ್ತಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

Tap to resize

Latest Videos

ಮಿಥುನ: ಭದ್ರಯೋಗ, ಹಂಸ ಯೋಗದ ಫಲಗಳಿಂದ ಅನುಕೂಲ, ಉತ್ತಮ ಫಲಗಳನ್ನು ಕಾಣುತ್ತೀರಿ ನಾಗ ಪ್ರಾರ್ಥನೆ ಮಾಡಿ

ಕಟಕ: ಕೃಷಿಕರಿಗೆ, ಹೈನುಗಾರಿಕೆಯವರಿಗೆ, ದ್ರವ ವ್ಯಾಪಾರಿಗಳಿಗೆ ಅನುಕೂಲ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಸಿಂಹ: ಸಹೋದರರಿಂದ ಸಹಕಾರ, ಧನ ಸಮೃದ್ಧಿ, ಮಾತಿಗೆ ಮಾನ್ಯತೆ ಸಿಗಲಿದೆ, ಪ್ರಯಾಣದಲ್ಲಿ ತೊಂದರೆ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ಕನ್ಯಾ: ಸ್ತ್ರೀಯರಿಂದ ಧನಲಾಭ,ಸ್ತ್ರೀಯರಿಂದ ಸಹಕಾರ, ಉತ್ತಮ ಫಲಗಳಿದ್ದಾವೆ, ಪಿತೃದೇವತೆಗಳ ಆರಾಧನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವ ಸಮಯವಿದು

ತುಲಾ: ಕೆಲಸದಲ್ಲಿ ಸಾಧನೆ, ಹಣನಷ್ಟ, ಸಮಾಧಾನ ಇರಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ವಾಕ್ಚಾತುರ್ಯದಿಂದ ಪರಿಸ್ಥಿತಿ ಸರಿಹೋಗಲಿದೆ, ಅದೃಷ್ಟದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು: ಉತ್ಕೃಷ್ಟ ಫಲ, ಸ್ತ್ರೀಯರಿಂದ ಲಾಭ, ವಿದೇಶಗಳಿಂದ ಶುಭವಾರ್ತೆ, ಓಡಾಡುವಾಗ ಎಚ್ಚರವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ: ಕಾರ್ಯ ವಿಳಂಬ, ಕಾರ್ಯ ಸಾಧನೆ, ಸಂಗಾತಿಯಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಬಾಯಿ ಹುಣ್ಣಾಗುವ ಸಾಧ್ಯತೆ, ಅಜೀರ್ಣತೆ ಉಂಟಾಗಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ:  ಮಕ್ಕಳಿಂದ ನಷ್ಟ, ತೊಡಕುಗಳಿಲ್ಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ 

click me!