ಈ ರಾಶಿಯವರಿಗೆ ಇಂದು ಭಾರೀ ಧನಲಾಭ: ಇಲ್ಲಿದೆ ಇಂದಿನ ದಿನ ಭವಿಷ್ಯ

By Web DeskFirst Published 15, Jan 2019, 7:44 AM IST
Highlights

ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ. ದಿನ ಆರಂಭಿಸುವ ಮುನ್ನ ರಾಶಿ ಫಲಗಳನ್ನು ನೋಡಿ ಬಿಡಿ, ಶುಭದಿನ

ಮೇಷ: ಆಪ್ತ ಸ್ನೇಹಿತರೊಂದಿಗೆ ಇಡೀ ದಿನ ಕಳೆಯಲಿದ್ದೀರಿ. ಮನೆಗೆ ಬಂಧು ಬಳಗದ ಆಗಮನವಾಗಲಿದೆ. ಈ ದಿನ ಸಂತೋಷವಾಗಿರುವಿರಿ.

ವೃಷಭ: ತಂದೆ ತಾಯಿಯ ಬೆಂಬಲ ನಿಮ್ಮಲ್ಲಿ ಆತ್ಮ ಶಕ್ತಿ ಹೆಚ್ಚಿಸಲಿದೆ. ದೂರದ ಊರುಗಳಿಗೆ ಕೆಲಸ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.

ಮಿಥುನ: ಸಣ್ಣ ಪುಟ್ಟ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದು ಬೇಡ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ.

ಕಟಕ: ಸಂತಸಕ್ಕೆ ಕಾರಣಗಳು ಬೇಕು ಎಂದೇನಿಲ್ಲ. ನೀವು ಇರುವ ಜಾಗ ಲವಲವಿಕೆಯಿಂದ ಕೂಡಿರಲಿದೆ. ಸಾಮರಸ್ಯ ಹೆಚ್ಚಾಗಲಿದೆ.

ಸಿಂಹ: ಪಾಲಿಗೆ ಬಂದುದ್ದರಲ್ಲಿ ತೃಪ್ತಿ ಹೊಂದುವ ಗುಣದಿಂದಲೇ ಆತ್ಮ ಸಂತೋಷ ಹೊಂದಲಿ ದ್ದೀರಿ. ಆಸೆಪಟ್ಟ ವಸ್ತು ಇಂದು ಕೈ ಸೇರಲಿದೆ.

ಕನ್ಯಾ: ಪರೋಪಕಾರಕ್ಕೆ ಮುಂದಾಗುವಿರಿ. ಸಮಸ್ಯೆ ಮೂಲ ಅರಿತುಕೊಂಡು ಪರಿಹಾರ ಕಂಡುಕೊಳ್ಳಿ. ಸಂತೋಷ ಹೆಚ್ಚಾಗಲಿದೆ.

ತುಲಾ: ಮುಖ್ಯ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಹೋದರಿ ವಿಚಾರದಲ್ಲಿ ಆರ್ಥಿಕ ಸಹಾಯ ಮಾಡುವಿರಿ. ಶುಭ ಫಲ.

ವೃಶ್ಚಿಕ: ವಿದ್ಯಾರ್ಥಿಗಳ ಪಾಲಿಗೆ ಇದು ಶುಭ ದಿನ. ಇಡೀ ದಿನ ಮನೆಯಲ್ಲಿಯೇ ಕಳೆಯುವಿರಿ. ಮಹಿಳೆಯರ ಪಾಲಿಗೆ ಕೆಲಸ ಹೆಚ್ಚಲಿದೆ.

ಧನುಸ್ಸು: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಮಾಡುವ ಕೆಲಸಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ನಿಮ್ಮ ಆಪ್ತರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಕರ: ಚಾಡಿ ಮಾತುಗಳಿಗೆ ಹೆಚ್ಚು ಕಿವಿಗೊಡುವುದು ಬೇಡ. ಸ್ವಅನುಭವಕ್ಕೆ ಬಂದ ವಿಚಾರಗಳ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿ. ಮೌನವಿರಲಿ.

ಕುಂಭ: ಕುಟುಂಬ ಸಮೇತ ಯಾತ್ರಾ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಬಂದ ಕಷ್ಟವನ್ನು ನಗು ನಗುತ್ತಲೇ ಎದುರಿಸುವಿರಿ. ಶುಭಫಲವಿದೆ.

ಮೀನ: ಈ ಹಿಂದೆ ಅಂದುಕೊಂಡಿದ್ದ ಕಾರ್ಯಗಳು ಇಂದು ನೆರವೇರಲಿವೆ. ಹೆಚ್ಚು ಆದಾಯ ಬರಲಿದೆ. ಖರ್ಚಿನಲ್ಲಿ ಮಿತಿ ಇದ್ದರೆ ಒಳಿತು.

Last Updated 15, Jan 2019, 7:44 AM IST