ದಿನ ಭವಿಷ್ಯ: ಧನಸ್ಸು ರಾಶಿಯವರಿಗೆ ಅತಿಯಾದ ಮೊಬೈಲ್‌ ವೀಕ್ಷಣೆಯಿಂದ ದೃಷ್ಠಿದೋಷಕ್ಕೆ ಹಾನಿ ಸಾಧ್ಯತೆ

By Suvarna News  |  First Published Jul 23, 2021, 7:10 AM IST

* 23 ಜುಲೈ 2021 ಶುಕ್ರವಾರದ ಭವಿಷ್ಯ
* ಸಿಂಹ  ರಾಶಿಯವರುಗೆ ಧನ ಸಮೃದ್ಧಿ, ಬಲ ಕುಗ್ಗಲಿದೆ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 


ಮೇಷ - ಸಾಲಬಾಧೆ ಕಾಡಲಿದೆ, ಕೆಲಸದ ವಿಷಯದಲ್ಲೂ ಗೊಂದಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಮಕ್ಕಳ ಸಲುವಾಗಿ ಕೊಂಚ ಅಸಮಧಾನ, ಹೊಟ್ಟೆ ಭಾಗದಲ್ಲಿ ತೊಂದರೆ, ನಷ್ಟದ ಫಲವಿದೆ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

Tap to resize

Latest Videos

ಮಿಥುನ - ಕೃಷಿಕರು ಎಚ್ಚರವಾಗಿರಬೇಕು, ವಾಹನ ಚಾಲಕರಿಗೆ ವಿಘ್ನ, ಹಣನಷ್ಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕಟಕ - ಭಯದ ವಾತಾವರಣ, ಹುಂಬತನ ಬೇಡ, ಸಂಯಮವಿರಲಿ, ಭಗವತಿ ಪ್ರಾರ್ಥನೆ ಮಾಡಿ

ಸಿಂಹ - ಧನ ಸಮೃದ್ಧಿ, ಬಲ ಕುಗ್ಗಲಿದೆ, ಆದಿತ್ಯ ಹೃದಯ ಪಾರಾಯಣದಿಂದ ಉತ್ತಮ ಫಲ

ಕನ್ಯಾ - ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ, ಶುಭಫಲವೂ ಇದೆ, ಅಂಜಿಕೆಯ ವಾತಾವರಣ, ಸುದರ್ಶನ ಮಂತ್ರ ಪಠಿಸಿ

ತುಲಾ - ಆರೋಗ್ಯದಲ್ಲಿ ಬಾಧೆ, ಬೆಂಕಿ ಸಂಬಂಧಿ ಕೆಲಸದಲ್ಲಿ ಎಚ್ಚರಿಕೆ ಇರಲಿ, ನೀರಿನ ಸಮೀಪದಲ್ಲಿ ಎಚ್ಚರಿಕೆ ಇರಲಿ, ಕಟೀಲು ದುರ್ಗಾ ಪ್ರಾರ್ಥನೆ ಮಾಡಿ

ರತ್ನ ಧರಿಸೋ ಮೊದಲು ಹಾಲಿನಲ್ಲಿ ಇಡೋದ್ಯಾಕೆ ?

ವೃಶ್ಚಿಕ - ಶುಭಾಶುಭ ಮಿಶ್ರಫಲ, ಸಾಹಸ ಧೈರ್ಯಗಳು ತುಂಬಲಿವೆ, ಶುಭದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು: ಮೊಬೈಲ್‌ನ ಒಳಗೇ ಹೋಗಿರುತ್ತೀರಿ. ಅದು ಅಷ್ಟೇನು ಸೂಕ್ತವಲ್ಲ. ಅದರಿಂದ ನಿಮ್ಮಲ್ಲಿನ ದೃಷ್ಠಿದೋಷಕ್ಕೆ ಹೆಚ್ಚಿನ ಹಾನಿಯಾಗಲಿದೆ.

ಮಕರ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಅವಕಾಶಗಳಿವೆ. ಹೋರಾಟ ಫಲ ನೀಡಲಿದೆ. ಆಶಾಭಾವನೆ ಇರಲಿ. ಚಿಂತೆ ದೂರಾಗಲಿದೆ.

ಕುಂಭ: ನಾಡು-ನುಡಿಗಳ ಬಗ್ಗೆ ನಿಮ್ಮ ಕಾಳಜಿಯು ಅಮೋಘವಾದದ್ದು. ಅದರತ್ತ ನಿಮ್ಮ ನಡೆಯು ನಿಮ್ಮ ಜೀವನಕ್ಕೂ ಹೆಚ್ಚು ಸಹಕಾರಿಯಾಗಲಿದೆ.

ಮೀನ: ನೀವಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ಆದರೂ ಹೊರಗಿನ ತಿಂಡಿ ತಿನ್ನುವ ಕ್ರಮ ಅಷ್ಟೇನು ಒಳಿತಲ್ಲ. ಜೋಕೆ.

click me!