ಕರ್ನಾಟಕದಲ್ಲಿ ಬಿಜೆಪಿಗೆ 18-20 ಸ್ಥಾನ, 4 ರಾಜ್ಯದಲ್ಲಿ ನಿರಾಸೆ; ಖ್ಯಾತ ಜ್ಯೋತಿಷಿಯ ಚುನಾವಣಾ ಭವಿಷ್ಯ!

By Chethan Kumar  |  First Published May 11, 2024, 3:39 PM IST

ಲೋಕಸಭಾ ಚುನಾವಣೆ 3 ಹಂತದ ಚುನಾವಣೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳು ಸಮೀಕ್ಷೆಗಳ ಮೊರೆ ಹೋಗಿದ್ದರೆ, ಖ್ಯಾತ ಜ್ಯೋತಿಷಿ ಕೆಎಂ ಸಿನ್ಹ ಫಲಿತಾಂಶದ ಭವಿಷ್ಯ ನುಡಿದಿದ್ದಾರೆ. ಈ ಬಾರಿ 4 ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ 18ರಿಂದ 20 ಸ್ಥಾನ ಗೆಲ್ಲಲಿದೆ ಎಂದಿದ್ದಾರೆ. ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿನ ಚುನಾವಣಾ ಭವಿಷ್ಯ ಇಲ್ಲಿದೆ.
 


ನವದೆಹಲಿ(ಮೇ.11) ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಒಂದೆಡೆ ನಾಯಕ ಸಮಾವೇಶ, ರೋಡ್ ಶೋ, ವಾಕ್ಸಮರಗಳು ನಡೆಯುತ್ತಿದೆ. ಮತ್ತೊಂದೆಡೆ ಮೂರು ಹಂತದ ಮತದಾನ ಮುಕ್ತಾಯಗೊಂಡಿದ್ದು ನಾಲ್ಕನೇ ಹಂತದ ಮತದಾನಕ್ಕೆ ದೇಶ ಸಜ್ಜಾಗಿದೆ. ಇದರ ನಡುವೆ ಹಲವು ಭವಿಷ್ಯಗಳ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ಜ್ಯೋತಿಷಿ ಕೆಎಂ ಸಿನ್ಹ ಇದೀಗ ಲೋಕಸಭಾ ಚುನಾವಣೆ ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದರೆ ಈ ಬಾರಿ ಬಿಜೆಪಿ 4 ರಾಜ್ಯಗಳಲ್ಲಿ ಕ್ವೀನ್‌ಸ್ವೀಪ್ ಗೆಲುವು ದಾಖಲಿಸಿದೆ ಎಂದರೆ, ನಾಲ್ಕು ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸಲಿದೆ ಎಂದಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ ಕೆಲ ಸ್ಥಾನ ಕಳೆದುಕೊಂಡು 18 ರಿಂದ 20 ಸ್ಥಾನಕ್ಕೆ ತೃಪ್ತಿಪಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಎನ್‌ಡಿಎ ಮೈತ್ರಿ ಕೂಟ  400 ಸ್ಥಾನ ಗೆಲ್ಲುವುದು ಅಸಾಧ್ಯ ಎಂದಿದ್ದಾರೆ. 

ಲೋಕಸಭಾ ಚುನವಣಾ ಮತದಾನ ನಡುವೆ ಕೆಎಂ ಸಿನ್ಹಾ, ಆಯಾ ರಾಜ್ಯದಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ ಅನ್ನೋ ಭವಿಷ್ಯ ನುಡಿದಿದ್ದಾರೆ. ಬಿಜೆಪಿ, ಬಿಜೆಪಿ ನಾಯಕರು, ಸಮಯ, ಅಂಕಿ ಸಂಖ್ಯೆ, ರಾಶಿಫಲಗಳ ಆಧಾರದಲ್ಲಿ ಕೆಎಂ ಸಿನ್ಹ ಭವಿಷ್ಯ ನುಡಿದಿದ್ದಾರೆ.ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಭವಿಷ್ಯ ಬಹಿರಂಗಪಡಿಸಿದ್ದಾರೆ. ಗುಜರಾತ್, ಹಿಮಾಚಲ ಪ್ರದೇಶ, ಉತ್ತಖಂಡ ಹಾಗೂ ದೆಹಲಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವು ಸಾಧಿಸುವ ಸಾಧ್ಯತೆಯನ್ನು ಕೆಎಂ ಸಿನ್ಹಾ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಬರೆದು ಇಟ್ಟುಕೊಳ್ಳಿ ಮೋದಿ ಮತ್ತೆ ಪ್ರಧಾನಿ ಆಗೋಲ್ಲ: ರಾಹುಲ್‌ ಗಾಂಧಿ

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದಿದೆ. ಕಳೆದ ಬಾರಿ ಬಿಜೆಪಿ 25 ಸ್ಥಾನ ಗೆದ್ದುಕೊಂಡಿತ್ತು. ಆದರೆ ಈ ಬಾರಿ 18ರಿಂದ 20 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದಿದೆ. ಇದೇ ರೀತಿ ಮಹಾರಾಷ್ಟ್ರದಲ್ಲೂ ಬಿಜೆಪಿ ಸ್ಥಾನ ಕಳೆದುಕೊಳ್ಳಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ 28 ರಿಂದ 31 ಸ್ಥಾನಕ್ಕೆ ಕುಸಿಯಲಿದೆ ಎಂದಿದ್ದಾರೆ. ಬಿಹಾರದಲ್ಲೂ ಬಿಜೆಪಿ 28ರಿಂದ 31 ಸ್ಥಾನಕ್ಕೆ ಕುಸಿತ ಕಾಣಲಿದೆ. ಪಂಜಾಬ್‌ನಲ್ಲಿ 2 ರಿಂದ 3 ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಳ್ಳಲಿದೆ. ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಕುಸಿತ ಕಾಣಲಿದೆ ಎಂದಿದ್ದಾರೆ.

ದಕ್ಷಿಣದ ರಾಜ್ಯಗಳ ಬೈಕಿ ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ಬಿಜೆಪಿ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಈ ಪೈಕಿ ಬಿಜೆಪಿ ನಿರಾಸೆ ಅನುಭವಿಸಲಿದೆ ಎಂದಿದ್ದಾರೆ. ಕೇರಳ, ತಮಿಳುನಾಡಿನಲ್ಲಿ ಬಿಜೆಪಿ 1 ಸ್ಥಾನ ಗೆಲ್ಲುವುದೇ ಪ್ರಯಾಸ. ತೆಲಂಗಾಣದಲ್ಲಿ 6 ಸ್ಥಾನ ಗೆಲ್ಲುವ ಸಾಧ್ಯತೆಯನ್ನು ಕೆಎಂ ಸಿನ್ಹಾ ಹೇಳಿದ್ದಾರೆ.ಆಂಧ್ರ ಪ್ರದೇಶದಲ್ಲಿ 3ರಿಂದ 5 ಸ್ಥಾನ ಬಿಜೆಪಿ ತೆಕ್ಕೆಗೆ ಬರಲಿದೆ ಎಂದಿದ್ದಾರೆ.

ಇದರ ಜೊತೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಾರಿ ಕಳೆದಬಾರಿಗಿಂತ ಉತ್ತಮ ಸಾಧನೆ ಮಾಡಲಿದೆ ಎಂದಿದೆ. 80 ಸ್ಥಾನಗಳ ಪೈಕಿ ಬಿಜೆಪಿ 70 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಬಾರಿಯ ಸಾಧನೆ ಅಚ್ಚರಿಯಾಗಲಿದೆ. ಕಾರಣ 42ಸ್ಥಾನಗಳ ಪೈಕಿ 25 ರಿಂದ 27 ಸ್ಥಾನ ಬಿಜೆಪಿ ವಶಪಡಿಸಿಕೊಳ್ಳಲಿದೆ ಎಂದಿದ್ದಾರೆ.

ಉತ್ತರಖಂಡದ 5ರ ಪೈಕಿ 5 ಸ್ಥಾನ, ದೆಹಲಿಯ ಎಲ್ಲಾ 7 ಸ್ಥಾನ, ಗುಜರಾತ್‌ನ ಒಟ್ಟೂ 26 ಸ್ಥಾನ, ಹಿಮಾಚಲ ಪ್ರದೇಶದ ಎಲ್ಲಾ 4 ಸ್ಥಾನಗಳಲ್ಲಿ ಬಿಜೆಪಿಗೆಲುವು ಸಾಧಿಸಲಿದೆ ಎಂದಿದ್ದಾರೆ. ಇನ್ನು ರಾಜಸ್ಥಾನದಲ್ಲಿನ 25 ಸ್ಥಾನಗಳ ಪೈಕಿ 23ರಿಂದ 25 ಸ್ಥಾನ ಗೆಲ್ಲಲಿದೆ ಎಂದಿರುವ ಜ್ಯೋತಿಷಿ, ಛತ್ತೀಸಗಡ 11ರ ಪೈಕಿ 10, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ 28 ಸ್ಥಾನ, ಅಸ್ಸಾಂನ 14 ಸೀಟುಗಳಲ್ಲಿ 13 ಸೀಟು, ಹರ್ಯಾಣದ 10 ಸ್ಥಾನಗಳ ಪೈಕಿ 6 ರಿಂದ 7 ಸ್ಥಾನ, ಜಮ್ಮು ಮತ್ತು ಕಾಶ್ಮೀರದ 6ರಲ್ಲಿ 4 ಸ್ಥಾನ ಬಿಜೆಪಿ ಗೆದ್ದುಕೊಳ್ಳಲಿದೆ ಎಂದಿದ್ದಾರೆ.ಜಾರ್ಖಂಡ್‌ನ 14 ಸ್ಥಾನಗಳ ಪೈಕಿ 12 ಸ್ಥಾನ ಬಿಜೆಪಿ ತೆಕ್ಕೆಗೆ ಸೇರಿಕೊಳ್ಳಲಿದೆ ಎಂದಿರುವ ಜ್ಯೋತಿಷಿ, ಒಡಿಶಾದಲ್ಲಿ 13ರ ಪೈಕಿ 10 ಸ್ಥಾನ ಬಿಜೆಪಿ ಗೆದ್ದುಕೊಳ್ಳಲಿದೆ ಎಂದು ಕೆಎಂ ಸಿನ್ಹಾ ಭವಿಷ್ಯ ನುಡಿದಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆ: ಬಿ.ಎಸ್. ಯಡಿಯೂರಪ್ಪ

ಹಲವು ಭವಿಷ್ಯಗಳನ್ನು ಕರಾಕುವಕ್ಕಾಗಿ ನೀಡಿದಿರುವ ಕೆಎಂ ಸಿನ್ಹಾ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನುಡಿದ ಭವಿಷ್ಯ ಉಲ್ಟಾ ಆಗಿತ್ತು. ಹೆಚ್‌ಡಿ ಕುಮಾರಸ್ವಾಮಿ ಕಿಂಗ್ ಮೇಕರ್ ಆಗಲಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.


 

click me!